ಕಾರವಾರ :
ಜಿಲ್ಲೆಯ ಸಿರಸಿ ಮತ್ತು ಜೋಯಿಡಾ ತಾಲೂಕಿನ ಎಲ್ಲಿ ಪಂಚಾಯತಗಳಲ್ಲಿ ಸಂಪೂರ್ಣ ಶೌಚಾಲಯ ನಿರ್ಮಿಸಲಾಗಿದೆ ಎಂದು ಜಿಲ್ಲಾಪಂಚಯತ ವರದಿ ನೀಡುವ ಮೂಲಕ ಸರಕಾರವು ಈ ಎರಡನ್ನು ತಾಲೂಕನ್ನು ಬಯಲು ಮುಕ್ತ ಬಹಿರ್ದೆಸೆ ತಾಲೂಕೆಂದು ಘೋಷಿಸಿದೆ. ಇಲ್ಲಿಯ ಎಷ್ಟೋ ಗ್ರಾಮ ಪಂಚಾಯತದಲ್ಲಿ ಇನ್ನೂ ಶೌಚಾಲಯ ಆಗಬೇಕಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯಿಸಿದೆ.
ಈ ಕುರಿತಂತೆ ಕೇವಲ ಪ್ರಶಸ್ತಿಯ ಆಸೆಗಾಗಿ ಸಿರಸಿ ಮತ್ತು ಜೋಯಿಡಾ ತಾಲೂಕಿನ ಗ್ರಾಮ ಪಂಚಾಯತಗಳು ಇನ್ನೂ ಶೇ.80 ರಷ್ಟು ಶೌಚಾಲಯವನ್ನು ನಿರ್ಮಿಸುವ ಮೊದಲೆ ಘೋಷಿಸಿಕೊಂಡಿದ್ದಾರೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸಂಪೂರ್ಣ ಶೌಚಾಲಯ ಮುಕ್ತ ಜಿಲ್ಲೆ ಎಂದು ಪ್ರಶಸ್ತಿ ಪಡೆದು ರಾಷ್ಟ್ರಮಟ್ಟದಲ್ಲಿ ಗೌರವಿಸಿಕೊಂಡಿತ್ತು. ಆದರೆ ಈ ಬಾರಿ ಕೇಂದ್ರ ಸರಕಾರವು ಆ ಜಿಲ್ಲೆಯನ್ನು ತನಿಖೆಗೆ ಒಳಪಡಿಸಿದಾಗ ಅಲ್ಲಿಯ ತಾಲೂಕುಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಶೌಚಾಲಯ ಇಲ್ಲದಿರುವ ಬಗ್ಗೆ ವರದಿಯಿಂದ ಬಹಿರಂಗವಾಗಿತ್ತು.
ಕೇವಲ ಪ್ರಶಸ್ತಿ ಮೇಲೆ ಕಣ್ಣಿಟ್ಟು ಹಾಗೂ ತಾ.ಪಂ ಮತ್ತು ಜಿಲ್ಲಾಪಂಚಾಯತ ಅಧಿಕಾರಿಗಳ ಪ್ರತಿಷ್ಟೆಯಿಂದಾಗಿ ಸಿರಸಿ ಮತ್ತು ಜೋಯಿಡಾ ಎರಡು ತಾಲೂಕುಗಳನ್ನು ಬಯಲುಮುಕ್ತ ಬಹಿರ್ದೆಸೆ ಗ್ರಾಮ ಎನ್ನುವದು ಹಲವು ಸಂಶಯವ್ಯಕ್ತವಾಗಿದೆ. ಜೋಯಿಡಾ ತಾಲೂಕಿನ ಅಖೇತಿ, ಜೋಯಿಡಾ, ನಾಗೋಡ, ನಂದಿಗದ್ದೆ, ರಾಮನಗರ ಮತ್ತು ಸಿರಸಿ ತಾಲೂಕಿನ ಕೊಡ್ನಕಗದ್ದೆ, ಹುಲೆಕಲ್, ಇಟಗುಳಿ, ಯಡಳ್ಳಿ ಪಂಚಾಯತಗಳಲ್ಲಿ ಇನ್ನೂ ಶೌಚಾಲಯ ನಿರ್ಮಾಣ ಹಂತದಲ್ಲಿದೆ. ಆದರೆ ಇವರು ಪೂರ್ಣಗೊಂಡಿದೆ ಎಂದು ಪ್ರಶಸ್ತಿಯನ್ನು ಪಡೆದುಕೊಂಡಿವೆ ಎಂದು ಪರಿಷತ್ ಅಕ್ಷೆಪಿಸಿದೆ.
ಪಂಚಾಯತ ಹಂತದಲ್ಲಿ ಶೌಚಾಲಯದ ಅಂಕಿ ಸಂಖ್ಯೆಗಳಲ್ಲಿ ಸಾಕಷ್ಟು ವ್ಯತ್ಯಾಸ ಕಾಣುತ್ತಿದ್ದು, ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಅಧಿಕಾರಿಗಳು sಸರಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದು, ಆ ವ್ಯವಸ್ಥೆಯ ಅಧಿಕಾರಿಗಳನ್ನು ಹೊರತುಪಡಿಸಿ ವಾಸ್ತವಿಕ ತನಿಖೆಯನ್ನು ನಡೆಸುವಂತೆ ರೈತ ಶಕ್ತಿ ಪರಿಷತ್ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣಾಭಿವೃದ್ದಿ ಸಚಿವರು, ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಈ ಮೂಲಕ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದೆ.
Leave a Comment