ಕಾರವಾರ:
ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ನೀಡುವ ಜಿಲ್ಲಾ ಪ್ರಶಸ್ತಿಗೆ ಅಂಕೋಲಾದ ಜೇನುಗೂಡು ಸಂಘಟನೆ ಆಯ್ಕೆಯಾಗಿದೆ.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಹಾಗೂ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ವಿಲ್ಪ್ರೆಡ್ ಡಿಸೋಜ ಈ ಕುರಿತು ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆಯಲ್ಲಿ ಜೇನುಗೂಡು ಬಳಗ ಪ್ರಶಸ್ತಿಗೆ ಭಾಜನವಾಯಿತು ಎಂದು ತಿಳಿಸಿದರು. ಕಳೆದ ಎರಡು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವ ಜೇನೂಗುಡು ಬಳಗದವರು ಸ್ವಚ್ಚ ಭಾರತದ ಕನಸನ್ನು ನನಸು ಮಾಡಲು ಶ್ರಮಿಸುತ್ತಿದ್ದಾರೆ. ಸ್ವಚ್ಚತೆ, ಗ್ರಾಮೀಣ ಕ್ರೀಡೆ, ಆರೋಗ್ಯ, ಬಡ ಮಕ್ಕಳ ವಿದ್ಯಾಭ್ಯಾಸ ಹಾಗೂ ಪರಿಸರ ಕಾಳಜಿ ಮೂಡಿಸುವಲ್ಲಿ ಮೂಂಚುಣಿಯಲ್ಲಿದ್ದಾರೆ. ಹೀಗಾಗಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪ್ರಶಸ್ತಿಯೂ 25 ಸಾವಿರ ನಗದು ಹಾಗೂ ಪ್ರಶಂಶಾ ಪತ್ರವನ್ನು ಒಳಗೊಂಡಿದೆ. ಡಿಸೆಂಬರ ತಿಂಗಳಲ್ಲಿ ನಡೆಯುವ ಜಿಲ್ಲಾ ಯುವ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
Leave a Comment