ಕಾರವಾರ:
ಭಾರತೀಯ ಅಣುಶಕ್ತಿ ನಿಗಮದ ಪರಿಸರ ಉಸ್ತುವಾರಿ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ವಿದ್ಯುತ್ ಕೇಂದ್ರವು ಕಳೆದ ಏಳು ವರ್ಷಗಳಿಂದ ಬರ್ಡ ಮ್ಯಾರಥಾನ್ ಆಯೋಜಿಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆಯನ್ನು ನಡೆಸಲಾಗಿದೆ.
ಸ್ಥಳೀಯ ಜೈವ ವಿವಿದ್ಯತೆಯತ್ತ ಬೆಳಕು ಚೆಲ್ಲಲು ಈ ಕಾರ್ಯಕ್ರಮ ಆಯೋಜಿಸಿದ್ದು, ಕೈಗಾ ಮತ್ತು ಮಲ್ಲಾಪುರ ಗ್ರಾಮಗಳ ನಡುವಿನ ಐದು ವಿಭಾಗಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 70 ಪ್ರಬೇಧದ ಚಿಟ್ಟೆಗಳನ್ನು ಗುರುತಿಸಲಾಗಿದೆ. ಹದಿನೈದು ಕಾರ್ಯಕರ್ತರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ರಾಜ್ಯ ಚಿಟ್ಟೆ ಸದರ್ನ ಬರ್ಡ ವಿಂಗ ಸೇರಿದಂತೆ ಬ್ರೌನ ಆವ್ಲ, ಬ್ಲೂ ಪಾನ್ಸಿ, ಕಾಮನ ಜಾಝಾಬೆಲ್, ಪೀಕಾಕ್ ಪಾನ್ಸಿ ಚಿಟ್ಟೆಗಳು ಹೆಚ್ಚಿಗೆ ಗೋಚರಿಸಿದವು. ಇದೊಂದು ಆರಂಭಿಕ ಸಮೀಕ್ಷೆಯಾಗಿದ್ದು, ಬರುವ ದಿನಗಳಲ್ಲಿ ದೊಟ್ಟ ಮಟ್ಟದ ಕಾರ್ಯಕ್ರಮ ಆಯೋಜಿಸುವದಾಗಿ ಕೈಗಾ ಪರಿಸರ ಉಸ್ತುವಾರಿ ಕಾರ್ಯಕ್ರಮದ ಸಂಚಾಲಕ ಟಿ. ಪ್ರೇಮಕುಮಾರ ತಿಳಿಸಿದರು.
Leave a Comment