• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ

October 16, 2017 by Sachin Hegde Leave a Comment

ಕಾರವಾರ:

ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಿದ್ದ ಸಹಾಯವಾಣಿಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿಯಿಲ್ಲ. ಹೀಗಾಗಿ ಹಿರಿಯ ನಾಗರಿಕರಿಂದ ದೂರುಗಳು ಬರುತ್ತಿಲ್ಲ.
ಹತ್ತು ತಿಂಗಳ ಅವದಿಯಲ್ಲಿ ಬೆರಳೆಣಿಕೆಯ ದೂರುಗಳು ಮಾತ್ರ ಕಚೇರಿ ಸಹಾಯವಾಣಿಗೆ ಬಂದಿದೆ. ಹಿರಿಯ ನಾಗರಿಕರು ಯಾವುದೇ ಕಿರುಕುಳಕ್ಕೆ ಒಳಗಾಗದೆ ಇರಲು ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜನವರಿ 2017ರಲ್ಲಿ ಆರಂಭಿಸಲಾಯಿತು. ಮಕ್ಕಳು ತಮ್ಮ ಪೋಷಕರಿಗೆ ಜೀವನಾಂಶವನ್ನು ನೀಡದೆ ಇದ್ದರೆ, ಅವರ ಆಸ್ತಿಯನ್ನು ತಮ್ಮ ಹೆಸರಿಗೆ ಪಡೆದುಕೊಂಡ ಬಳಿಕ ಅವರ ಯೋಗ ಕ್ಷೇಮದ ಬಗ್ಗೆ ಕಾಳಜಿ ವಹಿಸದೇ ಬೀದಿಗೆ ತಳ್ಳಿದರೆ ಹಾಗೂ ಹಿರಿಯರಷ್ಟೇ ಇರುವ ಮನೆಯೊಮದರಲ್ಲಿ ಇನ್ಯಾರೋ ಮೂರನೇ ವ್ಯಕ್ತಿ ಬಂದು ವಾಸ್ತವ್ಯ ಹೂಡಿ ಅವರನ್ನು ಬಲವಂತವಾಗಿ ಹೊರ ಹಾಕಿದರೆ ಇಂತಹ ಯಾವುದೇ ರೀತಿಯ ತೊಂದರೆಗಳನ್ನು ಯಾರೇ ನೀಡಿದರೂ ಕೂಡ ಅವರ ವಿರುದ್ಧ ಸಮಸ್ಯೆಗೊಳಗಾದ ಹಿರಿಯರು ಸಹಾಯವಾಣಿ ಕೇಂದ್ರಕಕೆ ದೂರು ಸಲ್ಲಿಸಬಹುದಾಗಿದೆ.
ಸಹಾಯವಾಣಿ ಕೇಂದ್ರದವರು ತಮ್ಮ ಸಮಾಜ ಸೇವಕರನ್ನು ಇದರ ಬಗ್ಗೆ ಸತ್ಯಾಸತ್ಯತೆ ಅರಿಯಲು ತಕ್ಷನ ಪರಿಶೀಲನೆ ನಡೆಸಿ ವಿಚಾರವನ್ನು ಉಪವಿಭಾಗಾಧಿಆರಿಗಳ ಗಮನಕ್ಕೆ ತರುತ್ತಾರೆ. ಬಳಿಕ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಹಾಗೂ ಹಿರಿಯರಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರವನ್ನು ಕೊಡಿಸುವ ಕಾರ್ಯವನ್ನು ಅತೀ ಶೀಘ್ರದಲ್ಲಿ ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಸಹಾಯವಾಣಿ ಆರಂಭವಾದಾಗ ಜನವರಿಯಲ್ಲಿ 23 ಕರೆಗಳು ಬಂದಿದ್ದು ಅದರಲ್ಲಿ 2 ದೂರು ದಾಖಲಾಗಿದೆ. ಇನ್ನು ಫೆಬ್ರುವರಿ 14 ಕರೆ, 2 ದೂರು, ಮಾರ್ಚ್ 12 ಕರೆ 1 ದೂರು, ಏಪ್ರಿಲ್ 8ಕರೆ 5 ದೂರು, ಮೇ 6ಕರೆ 2 ದೂರು, ಜೂನ್ 9 ಕರೆ 1 ದೂರು, ಜುಲೈ14 ಕರೆ 2 ದೂರು, ಆಗಸ್ಟ್ 16 ಕರೆ 1, ಸೆ 9 ಕರೆ ಹಾಗೂ ಪ್ರಸ್ತುತ ಅಕ್ಟೋಬರ್‍ನಲ್ಲಿ ಇದುವರೆಗೆ 7 ಕರೆ ಹಾಗೂ 1 ದೂರು ಮಾತ್ರ ದಾಖಲಾಗಿದೆ.
ಕೇಂದ್ರದ ಬಗ್ಗೆ ಹಿರಿಯ ನಾಗರಿಕರಿಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಕೆಲವರು ಅವರಿವರ ಬಳಿ ಹೇಳಿ ಸುಮ್ಮನಾಗುತ್ತಿದ್ದಾರೆ. ಇನ್ನು ಕೆಲವರು ಏನು ಮಾಡಬೇಕೆಂದು ತಿಳಿಯದೇ ನೋವನ್ನು ಅನುಭವಿಸುತ್ತಾರೆ. ಸಹಾಯವಾಣಿ ಮಾಹಿತಿ ಕುರಿತು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ನಡೆದಿಲ್ಲ.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಆರಂಭಿಸಿದ್ದ 1090 ಸಹಾಯವಾಣಿಯಂತೆ ಇದೀಗ ನೂತನವಾಗಿ ವಾಟ್ಸಪ್ ಆರಂಭಿಸಿದ್ದು, 8618249402 ನಲ್ಲಿ ದೂರು ದಾಖಲಿಸಬಹುದಾಗಿದೆ. ಇದರಲ್ಲಿ ಸಂದೇಶ, ಸಾಧ್ಯವಾದರೆ ಫೊಟೋ ವಿಡಿಯೋವನ್ನೂ ಕೂಡ ಕಳುಹಿಸಬಹುದು. ಇಲ್ಲಿ ಸಮಸ್ಯೆಗೊಳಗಾಗುತ್ತಿರುವ ಹಿರಿಯ ನಾಗರಿಕರೇ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕಾಗಿಲ್ಲ. ಯಾವುದೇ ಮೂರನೇ ವ್ಯಕ್ತಿ ಕೂಡ ಇದರ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಕರೆ ಮಾಡಿ ಮಾಹಿತಿ ನೀಡವುದಾದರೆ 1090 ಗೆ ಅಥವಾ 08382-220034 ಸಂಖ್ಯೆಗೆ ಕರಡ ಮಾಡಿಯೂ ಮಾಹಿತಿ ನಿಡಬಹುದಾಗಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: 1 ದೂರು, 12 ಕರೆ, 14 ಕರೆ, 2 ದೂರು, 6ಕರೆ 2 ದೂರು, ಅವರ ಆಸ್ತಿ, ಉದ್ದೇಶ, ಏಪ್ರಿಲ್ 8ಕರೆ 5 ದೂರು, ಕರೆ ಮಾಡುವವರೇ ಇಲ್ಲ, ಕಾಳಜಿ, ಜೀವನಾಂಶವನ್ನು, ಜೂನ್ 9 ಕರೆ 1, ತಮ್ಮ, ನಾಗರಿಕರ ಸಮಸ್ಯೆಗಳಿಗೆ, ನೀಡದೆ ಇದ್ದರೆ, ಪೋಷಕರಿಗೆ, ಫೆಬ್ರುವರಿ, ಮಾರ್ಚ್, ಮೇ, ವಹಿಸದೇ ಬೀದಿಗೆ . ಮಕ್ಕಳು, ಸಹಾಯವಾಣಿ, ಸ್ಪಂದಿಸುವ, ಹಿರಿಯ ನಾಗರಿಕರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar