• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಮುದ್ರದ ಹೂಳೆತ್ತಲು ಆಗಮಿಸಿದ ಹಡಗು – ಹೂಳಿನ ಸಮಸ್ಯೆಗೆ ಮುಕ್ತಿ

October 23, 2017 by Sachin Hegde Leave a Comment

ಕಾರವಾರ:

ವಾಣಿಜ್ಯ ಬಂದರಿಗೆ ಆಗಮಿಸುವ ಹಡಗುಗಳಿಗೆ ಅನುಕೂಲವಾಗುವಂತೆ ಅರಬ್ಬಿ ಸಮುದ್ರದಂಚಿನಡಿ ತುಂಬಿರುವ ಹೂಳು ತೆಗೆಯಲು ಬಂದರು ಇಲಾಖೆ ಸಿದ್ದವಾಗಿದೆ. ಈಗಾಗಲೇ ಹೂಳು ತೆಗೆಯುವ ಸಂಬಂಧ ಸರ್ವೆಕಾರ್ಯ ಶುರುವಾಗಿದ್ದು, ಸಿಂಗಾಪುರದಿಂದ ಬಂದ ಹಡಗು ಸರ್ವೆ ನಡೆಸಿ ಕಾಮಗಾರಿ ಆರಂಭಿಸುವದು ಮಾತ್ರ ಬಾಕಿಯಿದೆ.
ಬೈತಖೋಲ್ ವಾಣಿಜ್ಯ ಬಂದರಿನಲ್ಲಿ ಹೂಳಿನ ಸಮಸ್ಯೆ ಶುರುವಾಗಿದ್ದರಿಂದ ಹಡಗುಗಳ ಆಗಮನಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂಳು ಎತ್ತುವ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ವಾಣಿಜ್ಯ ಬಂದರಿನಿಂದ ನೇರವಾಗಿ ದೇವಗಡ್ ದ್ವೀಪದವರೆಗೆ ಹಡುಗಗಳ ಆಗಮನಕ್ಕೆ ಚಾನೆಲ್ ನಿರ್ಮಿಸಲಾಗಿದ್ದು, ಈ ಚಾನೆಲ್ ಮಾರ್ಗದಲ್ಲಿಯೇ ಅತ್ಯಧಕ ಹೂಳು ತುಂಬಿದೆ. ಹೀಗಾಗಿ ಹಡಗುಗಳು ಬಂದರಿನ ಒಳ ಪ್ರವೇಶಕ್ಕೆ ತೊಂದರೆ ಅನುಭವಿಸುತ್ತಿವೆ. ಆಗಮಿಸಿದ ಹಡಗುಗಳ ಹೊರ ಪ್ರವೇಶಕ್ಕೂ ಹೂಳಿನ ಸಮಸ್ಯೆ ತೊಂದರೆ ನೀಡಿದೆ. ಹೂಳಿನ ಸಮಸ್ಯೆಯಿಂದ ಬಂದರಿನ ಆದಾಯವೂ ಕುಂಟಿತಗೊಂಡಿದ್ದು, ಇದರಿಂದ ಅಧಿಕಾರಿಗಳು ಹೂಳು ತೆಗೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹೂಳು ತೆಗೆಯಲಾಗುತ್ತದೆ. ಅದರಂತೆ ಏಪ್ರಿಲ್-ಮೇ ವೇಳೆ ಹೂಳು ತೆಗೆಯಬೇಕಿತ್ತು. ಆದರೆ ಮಳೆ ಆರಂಭಗೊಂಡಿದ್ದರಿಂದ ಕೆಲಸವನ್ನು ಮುಂದುಡಲಾಯಿತು.
ಬೈತಖೋಲ್ ವಾಣಿಜ್ಯ ಬಂದರಿನಿಂದ ಸಾಗಿದ ಚಾನೆಲ್ ಬ್ರೇಕ್‍ವಾಟರ್ ಸಮೀಪ ತಿರುವು ಪಡೆದುಕೊಂಡಿದೆ. ಅಲ್ಲಿಂದ ಲೇಡೀಸ್ ಬೀಚ್ ಎದುರಿನಿಂದ ನೇರವಾಗಿ ದೇವಗಡ್ ದ್ವೀಪದ ಬಲಬದಿಯಿಂದ ಸಾಗಿ ಆಳ ಸಮುದ್ರಕ್ಕೆ ಸಂಪರ್ಕ ಸಾಸುತ್ತದೆ. ಈ ಚಾನೆಲ್ ಅಲಿಗದ್ದಾ ಬೀಚ್ ಸಮೀಪದಿಂದ ಬ್ರೇಕ್ ವಾಟರ್ ತನಕ ಅಂದಾಜು 600 ರಿಂದ 700 ಮೀಟರ್ ಅಗಲವಾಗಿದ್ದು, ದಕ್ಷಿಣದಿಂದ ಪಶ್ಚಿಮಕ್ಕೆ 7-8 ಕಿ.ಮೀ.ಉದ್ದ ಹೊಂದಿದೆ. ಇದರ ಆಳ 10 ಮೀಟರ್ ಇದೆ. ಮಳೆ, ಗಾಳಿ,ಸಮುದ್ರ ಭೋರ್ಗರೆತದಂತಹ ಸಂದರ್ಭದಲ್ಲಿ ನದಿ ಮೂಲಕ ಸಮುದ್ರ ಸೇರಿದ ಮಣ್ಣು, ಕಸ ಕಡ್ಡಿಗಳೆಲ್ಲವೂ ನೀರಿನ ಸೆಳೆತಕ್ಕೆ ಹರಿದು ಬಂದು ಇದರ ವ್ಯಾಪ್ತಿಯೊಳಗೆ ಸೇರುತ್ತದೆ. ಈ ರೀತಿ ಸೇರಿದ ಮಾಲಿನ್ಯಗಳು ಕೊಳೆತು ಹೂಳು ಉತ್ಪತ್ತಿಯಾಗುತ್ತದೆ. ಇದರಿಂದ ಚಾನೆಲ್‍ನ ಆಳ ಕಡಿಮೆಯಾಗುತ್ತದೆ. ಆಳ ಕಡಿಮೆಯಾಗುವುದರಿಂದ ದೊಡ್ಡ ಗಾತ್ರದ ಹಡಗುಗಳು ಒಳಗೆ ಪ್ರವೇಶಿಸಲು ತೊಡಕಾಗುತ್ತದೆ. ಹೀಗಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆಯಾದರೂ ಹೂಳು ತೆಗೆಯಬೇಕಾಗುತ್ತದೆ.

******************

ಹೂಳು ತೆಗೆಯುವ ಉದ್ದೇಶದಿಂದ ಸದ್ಯ ಸರ್ವೇ ಕಾರ್ಯ ಜಾರಿಯಲ್ಲಿದೆ. ಸರ್ವೇ ಕಾರ್ಯ ಮುಗಿದ ತಕ್ಷಣ ನವೆಂಬರ್ ತಿಂಗಳಲ್ಲಿ ಎರಡು ಡ್ರೆಜ್ಜರ್ ಹಡಗುಗಳು ಹೂಳು ತೆಗೆಯುವ ಕಾರ್ಯಾರಂಭ ಮಾಡಲಿವೆ. ಎರಡು ತಿಂಗಳಲ್ಲಿ ಹೂಳು ತೆಗೆಯುವ ಕೆಲಸ ಮುಗಿಯಲಿದೆ.

– ನಾರಾಯಣಪ್ಪ. ಅಸಿಸ್ಟೆಂಟ್ ಎಕ್ಷಿಕ್ಯೂಟಿವ್ ಎಂಜಿನೀಯರ್, ಬಂದರು ಇಲಾಖೆ,ಕಾರವಾರ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: 700 ಮೀಟರ್ ಅಗಲ, ಅಂದಾಜು 600, ಅರಬ್ಬಿ ಸಮುದ್ರ, ಆಗಮಿಸಿದ ಹಡಗು, ಏಪ್ರಿಲ್-ಮೇ ವೇಳೆ ಹೂಳು, ಕಾರವಾರ, ಚಾನೆಲ್ ಮಾರ್ಗ, ತನಕ, ಬಂದರು ಇಲಾಖೆ, ಬೈತಖೋಲ್ ವಾಣಿಜ್ಯ ಬಂದರಿನ, ಬ್ರೇಕ್ ವಾಟರ್, ಮುಕ್ತಿ, ರಿಂದ, ವಾಣಿಜ್ಯ ಬಂದರಿಗೆ, ಸಮುದ್ರದ ಹೂಳೆತ್ತಲು, ಹಡಗುಗಳ ಆಗಮನ, ಹಡಗುಗಳಿಗೆ ಅನುಕೂಲ, ಹೂಳಿನ ಸಮಸ್ಯೆಗೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar