ಕಾರವಾರ: ಕಳೆದ 25 ವರ್ಷಗಳಿಂದ ಸೇವೆ ಒದಗಿಸುತ್ತಿರುವ ವಿಜಯಾ ಬ್ಯಾಂಕ್ ಸದ್ಯ ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ ಒದಗಿಸಿದೆ.
ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಸೇವೆಯ ಕುರಿತು ಉದ್ಯಮಿ ಎಂ.ಆರ್.ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಉದ್ಯಮಿಗಳು ವಿದೇಶಗಳಿಗೆ ತಮ್ಮ ಸರಕನ್ನು ರಫ್ತು ಮಾಡಬೇಕಾದರೆ, ಎಕ್ಸ್ಫೋರ್ಟ್ ಬ್ಯಾಂಕ್ನ ಪಾತ್ರ ಬಹಳ ಮಹತ್ವಪೂರ್ಣವಾಗಿದೆ ಎಂದು ಅವರು ಹೇಳಿದರು. ವಿಜಯಾ ಬ್ಯಾಂಕ್ನ ಎಜಿಎಂ ರತ್ನಾಕರ ಭಂಡಾರಿ ಮಾತನಾಡಿ, ಈ ಸೌಲಭ್ಯವನ್ನು ಸ್ಥಳೀಯ ಶಾಖೆಯಲ್ಲಿಯೇ ಮಾಡಿಕೊಟ್ಟಿರುವುದರಿಂದ ಮಂಗಳೂರು, ಗೋವಾ ಅಲೆದಾಟ ತಪ್ಪಿದೆ. ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡುವಲ್ಲಿಯೂ ಲಕ್ಷಾಂತರ ಉದ್ಯೋಗ ಸೃಷ್ಠಿಗೆ ಕಾರಣವಾಗಿದೆ ಎಂದರು. ಗ್ರಾಹಕರಾದ ರಾಜೇಶ್ ಶೇಟ್, ಅಲ್ತಾಫ್ ಶೇಖ್, ವಿಜಯ್ ರಾಣೆ, ರಾಜೇಶ ರಾಮನಾಥ್, ಸದಾನಂದ ಶೆಟ್ಟಿ, ಸೋಮನಾಥ್ ವೆರ್ಣೇಕರ್ ಇದ್ದರು. ಸ್ಥಳೀಯ ಶಾಖಾ ಪ್ರಬಂಧಕ ಭಾವೇಶ ಪ್ರಸ್ತಾಪಿಸಿದರು.
Leave a Comment