ಕಾರವಾರ: ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗೆ ಭೇಟಿ ನೀಡಿ ವಿವಿಧ ಕಾರ್ಯಗಳ ಮಾಹಿತಿ ಪಡೆದರು.
ಈ ವೇಳೆ ಡಯಟನ ಪ್ರಾಚಾರ್ಯರಾದ ಈಶ್ವರ ನಾಯ್ಕ ಮಾತನಾಡಿ, ಮುಂದಿನ ಶಿಕ್ಷಕರಿಗೆ ಈಗಲೇ ಡಯಟ್ ಚಟುವಟಿಕೆಗಳ ಕುರಿತು ತಿಳುವಳಿಕೆಯಿರಬೇಕು ಎಂದರು. ಡಯಟನ ಹಿರಿಯ ಉಪನ್ಯಾಸಕರಾದ ನಾಗರಾಜ ನಾಯಕ, ವಿ.ಆರ್.ನಾಯ್ಕ, ದೇವಿದಾಸ ಮೋಗೆರ, ಸವಿತಾ ನಾಯಕ, ಮಂಗಲ ಲಕ್ಷ್ಮೀ ಪಾಟೀಲ, ಶಾಂತೇಷ ನಾಯಕ ಸಂಸ್ಥೆಯ ಇತಿಹಾಸ, ವಿಭಾಗ, ಆವುಗಳ ಕಾರ್ಯಗಳು, ಸೇವಾ ನಿರತ ಶಿಕ್ಷಕರ ತರಬೇತಿ , ಮೌಲ್ಯಮಪನ ವಿಭಾಗಗಳ ಕುರಿತು ವಿಶೇಷ ಮಾಹಿತಿ ನೀಡಿದರು. ಶಿವಾಜಿ ವಿದ್ಯಾಲಯದ ಉಪನ್ಯಾಸಕರಾದ ನವೀನ ದೇವರಭಾವಿ, ರಾಜೇಶ ಬಂಟ ಉಪಸ್ಥಿತರಿದ್ದರು.
Leave a Comment