ಹೊನ್ನಾವರ: `ಯಾವುದೇ ರಾಜಕೀಯದ ಒತ್ತಡಕ್ಕೆ ಮಣಿಯದೇ ಸಂಘಟನೆಯಿಂದ ಕನ್ನಡ ಪರವಾದ ಕೆಲಸವನ್ನು ಮುನ್ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದು ಆಂಗ್ಲ ಮಾಧ್ಯಮ ಶಾಲೆಗಳು ವಿಜೃಂಭಿಸುತಿವೆ. ರಾಜ್ಯದಲ್ಲಿ ಯುವಕರು ಉದ್ಯೋಗಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮಿಸಲಾತಿ ನೀಡುವಂತಾಗಬೇಕು. ಜನರಿಗೆ ಅನ್ಯಾಯವಾದಾಗ ಹೋರಾಡಬೇಕು. ಹೋರಾಟ ಸಂದರ್ಭದಲ್ಲಿ ಕೇಸುಗಳು ದಾಖಲಾದರೆ ಹೆದರಬೇಡಿ. ಪೋಲಿಸರು ಹಾಕಿರುವ ಒಂದೊಂದು ಕೇಸಗಳು ಒಂದೋಂದು ಸ್ಟಾರ್ ಎಂದು ತಿಳಿದುಕೊಳ್ಳಿ. ನಿಮ್ಮ ಪ್ರತಿಯೊಂದು ಕೆಲಸಕ್ಕೆ ನಮ್ಮ ಬೆಂಬಲವಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಟಿ.ಎ.ನಾರಾಯಣ ಗೌಡರ ನೇತ್ರತ್ವದಲ್ಲಿ 60 ಲಕ್ಷಕೂ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಬ್ರಹತ್ ಸಂಘಟನೆಯಾಗಿದೆ. ಕನ್ನಡತನವನ್ನು ಉಳಿಸಿ ಬೇಳಸುವಲ್ಲಿ ಶ್ರಮಿಸಿ ಎಂದರು.
ಸಂಘಟನೆಯ ಪ್ರಮುಖ ವಾಸು ಗೌಡ ಮಾತನಾಡಿ ಯಾವುದೇ ರಾಜಕಿಯಕ್ಕೆ ಮಣಿಯದ ರಾಜ್ಯದ ಏಕೈಕ ಸಂಘಟನೆಯೆಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆ. ನಾವು ನಾಡಿಗಾಗಿ ಕನ್ನಡಕಾಗಿ ಎಲ್ಲರು ಒಂದಾಗಿ ಸಂಘಟಿತರಾಗಿ ಶ್ರಮಿಸಬೇಕು ಎಂದರು.
ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ತಾಲೂಕಿನಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರಿಸುತ್ತಿದ್ದು ಸಂಘಟನೆಯನ್ನು ಬಲಪಡಿಸಿ ಕನ್ನಡಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು. ಸಂಘಟನೆಯ ಕುಮಟಾ ಘಟಕದ ಗಣಪತಿ ನಾಯ್ಕ, ಜಿಲ್ಲಾ ಯುವ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ, ಪ್ರಮುಖರಾದ ಕಮಲಾಕರ ಮುಕ್ರಿ, ತಿಮ್ಮಪ್ಪ ನಾಯ್ಕ, ಶಂಕರ ಗೌಡ ಗುಣವಂತೆ ಮುಂತಾದವರು ಉಪಸ್ಥಿತರಿದ್ದರು.
Leave a Comment