ಹೊನ್ನಾವರ: ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪರ ಎನ್ನದೇ ವರ್ಷವಿಡೀ ಕನ್ನಡನಾಡು, ಭಾಷೆಯ ಕುರಿತು ಅಭಿಮಾನವಿಟ್ಟುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ನಾಜಗಾರ ಹೇಳಿದರು.ಹೊನ್ನಾವರ: ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪರ ಎನ್ನದೇ ವರ್ಷವಿಡೀ ಕನ್ನಡನಾಡು, ಭಾಷೆಯ ಕುರಿತು ಅಭಿಮಾನವಿಟ್ಟುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ನಾಜಗಾರ ಹೇಳಿದರು. ತಾಲೂಕಿನ ನವಿಲಗೋಣದಲ್ಲಿ ಕಡತೋಕ, ಮಾಡಗೇರಿ, ನವಿಲಗೋಣ, ಚಿಪ್ಪಿಹಕ್ಕಲ ಸ್ನೇಹ ಸಮ್ಮಿಲನದಲ್ಲಿ ನವಿಲಗೋಣ ಕನ್ನಡ ರಕ್ಷಣಾ ವೇದಿಕೆ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಶಾಲೆಗಳಿಗೆ ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ. ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರಿಗೆ ಅನ್ಯಾಯವಾದಾಗ ಹೋರಾಡಬೇಕು ಎಂದರು. ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಇಂದು ಆಂಗ್ಲ ಮಾಧ್ಯಮ ಶಾಲೆಗಳು ವಿಜೃಂಭಿಸುತಿವೆ. ರಾಜ್ಯದಲ್ಲಿ ಯುವಕರು ಉದ್ಯೋಗಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೀಸಲಾತಿ ನೀಡುವಂತಾಗಬೇಕು. ಯಾವುದೇ ರಾಜಕೀಯದ ಒತ್ತಡಕ್ಕೆ ಮಣಿಯದೇ ಸಂಘಟನೆಯಿಂದ ಕನ್ನಡ ಪರವಾದ ಕೆಲಸವನ್ನು ಮುನ್ನಡೆಸಿ ಎಂದರು. ಘಟಕದ ಅಧ್ಯಕ್ಷರಾಗಿ ವಿನಾಯಕ ಪಟಗಾರ ಮಾಡಗೇರಿ, ಉಪಾಧ್ಯಕ್ಷರಾಗಿ ಗಂಗಾಧರ ಆಚಾರಿ ನವಿಲಗೋಣ, ಪ್ರಧಾನ ಕಾರ್ಯದರ್ಶಿಯಾಗಿ ವಿನಾಯಕ ಗೌಡ ಚಿಪ್ಪಿಹಕ್ಕಲ, ಸಂಘಟನಾ ಕಾರ್ಯದರ್ಶಿಯಾಗಿ ರಕ್ಷಿತ್ ನಾಯ್ಕ ಆಯ್ಕೆಯಾದರು. ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗರಾಜ ನಾಯ್ಕ, ಕುಮಟಾ ತಾಲೂಕಾಧ್ಯಕ್ಷ ತಿಮ್ಮಪ್ಪ ನಾಯ್ಕ, ರವಿ ಪಟಗಾರ ಹಾಗೂ ನೂತನ ಸದಸ್ಯರು ಉಪಸ್ಥಿತರಿದ್ದರು.
Leave a Comment