ಹೊನ್ನಾವರ : ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದಿಕೊಟ್ಟಿಗೆ ಮತ್ತು ಪಳ್ಳಿಕೇರಿ ಮತಗಟ್ಟೆ ವ್ಯಾಪ್ತಿಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಎಂ. ಶೆಟ್ಟಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿ ಮನೆಗೆ ಕಾರ್ಯಕರ್ತರ ಜೊತೆ ಭೇಟಿ ನೀಡಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರದ ಸಾಧನೆಯನ್ನು ವಿವರಿಸಿ ಪಕ್ಷದ ಸಾಧನಾ ಪುಸ್ತಿಕೆಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ್, ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಹಳದೀಪುರ ಘಟಕದ ಅಧ್ಯಕ್ಷ ರಾಜೇಶ ನಾಯ್ಕ, ಗಣಪತಿ ಹರಿಕಾಂತ, ಸುರೇಖಾ ನಾಯ್ಕ, ನಾಗ್ವೇಣಿ ಗೌಡ, ಸುಮಾ ಹೆಗಡೆ, ಇಸ್ಮಾಯಿಲ್ ಸಾಬ ಮುಂತಾದವರಿದ್ದರು.
Leave a Comment