ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿರುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಳಿಯಾಳ ಘಟಕ ಹೇಳಿದೆ. ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿರುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಳಿಯಾಳ ಘಟಕ ಹೇಳಿದೆ. ಮಂಗಳವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಭಜರಂಗದಳ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ, ವಿವಿಧ ಹಿಂದೂಪರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿ ಬಳಿಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ ನಾವು ಯಾವುದೇ ಸಮಾಜದ ವಿರೋಧಿಗಳಲ್ಲ ಆದರೇ ಟಿಪ್ಪು ಮಾಡಿದ ಹಲವು ಕೃತ್ಯಗಳನ್ನು ಹಾಗೂ ಆತನ ಕ್ರೂರ ವಿಚಾರಗಳನ್ನು ನಾವು ಖಂಡಿಸುತ್ತೇವೆ ಸರ್ಕಾರ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಹಾಗೂ ಬಹಿರಂಗ ಮೇರವಣಿಗೆ ಹಾಗೂ ಸಭೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಲಾಗಿದೆ. ಅಲ್ಲದೇ ಮುಸ್ಲಿಂ ಸಮಾಜದಲ್ಲಿದ್ದ ಮಹನೀಯರಾದ ಆಶ್ಪಾಕ ಉಲ್ಲಾಖಾನ, ಡಾ.ಎಪಿಜೆ ಅಬ್ದುಲ್ಕಲಾಮ್, ಖಾನ ಅಬ್ದುಲ್ಗಫಾರ ಖಾನ(ಗಡಿನಾಡ ಗಾಂಧಿ), ಫಕ್ರುದ್ದಿನ ಅಲಿ ಅಹ್ಮದ ರವರಂತಹ ದೇಶಭಕ್ತರ ಜಯಂತಿ ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗುತ್ತದೆ ಇದಕ್ಕೆ ತಾವು ಎಲ್ಲ ರೀತಿಯಿಂದ ಸಹಕರಿಸುತ್ತೇವೆ ಆದರೇ ಟಿಪ್ಪು ಜತಂತಿಗೆ ತಮ್ಮ ಪ್ರಭಲ ವಿರೋಧವಿದೆ ಎಂದು ತಿಳಿಸಲಾಗಿದೆ. ಮನವಿ ಸಲ್ಲಿಸುವಾಗ ಪ್ರಮುಖರಾದ ನಾರಾಯಣ ಪಾಟಣಕರ, ರಾಜು ಧೂಳಿ, ಸಂತೋಷ ಘಟಕಾಂಬಳೆ, ರಾಘು ನಾಯ್ಕ, ಪ್ರಸಾದ ಹುನ್ಸವಾಡಕರ, ಸಿದ್ದು ಶೆಟ್ಟಿ, ಸರ್ವೆಶ ಖಾಂಡೊಳಕರ, ಅಶೋಕ ಬೆಳಗಾಂವಕರ, ಪ್ರಕಾಶ ಕೊನಪ್ಪನವರ, ವಿನೋದ ಗಿಂಡೆ ಮೊದಲಾದವರು ಇದ್ದರು.
Leave a Comment