ಹೊನ್ನಾವರ : ತಾಲೂಕಿನ ಶ್ರೀ ರಾಮ ಮಂದಿರ ಹತ್ತು ಸಮಸ್ತರ ಮಠ ಹಾಗೂ ಆರ್ಟ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ ನಡೆಯಲಿದೆ. ಕಾರ್ತಿಕ ಮಾಸದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಘುಚಂದ್ರ ಸಭಾಗೃಹ ರಾಮ ಮಂದಿರ, ಬಜಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಆಫ್ ಲಿವಿಂಗ್‍ನ ದೀಪಿಕಾ ಮಾತಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment