• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರಿವರ್ತನಾ ಯಾತ್ರೆ’ ದಿ.16 ಗುರುವಾರ ಮಧ್ಯಾಹ್ನ 3 ಗಂಟೆಗೆ

November 12, 2017 by Sachin Hegde Leave a Comment

ಹಳಿಯಾಳ:- ರಾಜ್ಯದಲ್ಲಿ ಭ್ರಷ್ಟ ಕಾಂಗ್ರೇಸ್ ಸರ್ಕಾರ ತೊಲಗಿಸಿ  ನವಕರ್ನಾಟಕ ನಿರ್ಮಾಣಕ್ಕಾಗಿ  ರಾಜ್ಯಾಧ್ಯಕ್ಷ ಭಾವಿ ಮುಖ್ಯಮಂತ್ರಿ ಯಡ್ಯೂರಪ್ಪ ನೇತೃತ್ವದಲ್ಲಿ  ಆರಂಭವಾಗಿರುವ ‘ಪರಿವರ್ತನಾ ಯಾತ್ರೆ’  ದಿ.16 ಗುರುವಾರ ಮಧ್ಯಾಹ್ನ 3 ಗಂಟೆಗೆ ಹಳಿಯಾಳಕ್ಕೆ ಆಗಮಿಸಿ ಬೃಹತ್ ಸಭೆ ನಡೆಯಲಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.ಹಳಿಯಾಳ:- ರಾಜ್ಯದಲ್ಲಿ ಭ್ರಷ್ಟ ಕಾಂಗ್ರೇಸ್ ಸರ್ಕಾರ ತೊಲಗಿಸಿ  ನವಕರ್ನಾಟಕ ನಿರ್ಮಾಣಕ್ಕಾಗಿ  ರಾಜ್ಯಾಧ್ಯಕ್ಷ ಭಾವಿ ಮುಖ್ಯಮಂತ್ರಿ ಯಡ್ಯೂರಪ್ಪ ನೇತೃತ್ವದಲ್ಲಿ  ಆರಂಭವಾಗಿರುವ ‘ಪರಿವರ್ತನಾ ಯಾತ್ರೆ’  ದಿ.16 ಗುರುವಾರ ಮಧ್ಯಾಹ್ನ 3 ಗಂಟೆಗೆ ಹಳಿಯಾಳಕ್ಕೆ ಆಗಮಿಸಿ ಬೃಹತ್ ಸಭೆ ನಡೆಯಲಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.  ಪಟ್ಟಣದಲ್ಲಿ ಬಿಜೆಪಿ ಪಕ್ಷ ಹಳಿಯಾಳ ಘಟಕ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹಳಿಯಾಳದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಬಗ್ಗೆ ವಿವರಿಸುತ್ತಾ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸಭೆಯ ವೇದಿಕೆಗೆ ಪಂಡಿತ ದಿನದಯಾಳ್ ಉಪಾಧ್ಯಾಯ ಹೆಸರು ಈಡಲಾಗಿದ್ದು 25ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು 50 ಸಾವಿರ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿರುವ ಈ ಬೃಹತ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಯಡ್ಯೂರಪ್ಪ ಸೇರಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ವಿಎಸ್ ಪಾಟೀಲ್, ಜಿಲ್ಲಾಧ್ಯಕ್ಷ ಕೆಜಿ ನಾಯ್ಕ  ಉಪಸ್ಥಿತರಿರುವರು.  ರಾಷ್ಟ್ರೀಯ ನಾಯಕರಾದ ಅಮಿತ ಷಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಮಾಭಾರತಿ ಇವರಲ್ಲಿ ಓರ್ವರು ಹಳಿಯಾಳದ ಕಾರ್ಯಕ್ರಮಕ್ಕೆ ಹಾಜರಿದ್ದು ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ಸುನೀಲ್ ವಿವರಿಸಿದರು.  ಯಾತ್ರೆಯ ಅಂಗವಾಗಿ ದಿ.15 ರಂದು ಆಯಾ ಜಿಲ್ಲಾ ಪಂಚಾಯತ ವ್ಯಾಪ್ತಿಗಳಲ್ಲಿ ಬಿಜೆಪಿಯ ಯುವ ಮೊರ್ಚಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರಿಂದ ಬೈಕ್ ರ್ಯಾಲಿ  ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು.  ದಿ.16 ರಂದು ಯಾತ್ರೆಯು ಮುಂಡಗೋಡದಿಂದ ಬೆಳಿಗ್ಗೆ ಹೊರಟು ಮಧ್ಯಾಹ್ನ ಕಾವಲವಾಡ ಪ್ರವೇಶಿಸಿ ಮುರ್ಕವಾಡ ಮಾರ್ಗವಾಗಿ ಹಳಿಯಾಳ ಪಟ್ಟಣಕ್ಕೆ ಆಗಮಿಸಲಿದ್ದು ಶಿವಾಜಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಬಳಿಕ ಅಳ್ನಾವರ ಮಾರ್ಗವಾಗಿ ಖಾನಾಪೂರಕ್ಕೆ ತರಳಲಿದೆ ಎಂದು ಹೆಗಡೆ ತಿಳಿಸಿದರು.  ಕಾರ್ಯಕ್ರಮದಲ್ಲಿ ಕ್ಷೇತ್ರದ ಹಲವು ಅಭೀವೃದ್ದಿ ಕಾರ್ಯಗಳು, ಕುಣಬಿ ಜನರನ್ನು ಎಸ್ಟಿಗೆ ಸೇರಿಸುವುದು, ಸೂಪಾ ಆಣೆಕಟ್ಟಿನ ನೀರಿನಿಂದ ಕುಡಿಯುವ ನೀರು ಹಾಗೂ ನೀರಾವರಿ ಯೊಜನೆ, ದಾಂಡೇಲಿ ಇಕೋ ಟೂರಿಸಮ್ ಅಭೀವೃದ್ದಿ,, ಹುಲಿ ಯೋಜನೆ, ವೈಲ್ಡ್ ಲೈಫ್ ಸೆಂಚೂರಿ ಯೋಜನೆ ರದ್ದು ಪಡಿಸುವ ಬಗ್ಗೆ, ಹಳಿಯಾಳ ಕ್ಷೇತ್ರದ ಅತಿಕ್ರಮಣ ಸಕ್ರಮ ಬಗ್ಗೆ ಇರುವ ಸಮಸ್ಯೆ ಶಾಶ್ವತ ಪರಿಹಾರದ ಕುರಿತ ಮನವಿಯನ್ನು ಜನತೆಯ ಪರವಾಗಿ ಯಡ್ಯೂರಪ್ಪನವರಿಗೆ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.  ಹಳಿಯಾಳ-ಜೋಯಿಡಾ ಮತಕ್ಷೇತ್ರದಲ್ಲಿ ಶಾಸಕ ಹಾಗೂ ಸಚಿವರಾಗಿರುವ ಆರ್.ವಿ.ದೇಶಪಾಂಡೆ ಅವರು ಏನು ಅಭಿವೃದ್ದಿ ಕಾರ್ಯ ಮಾಡಿಲ್ಲ, ಜನರ ಶೈಕ್ಷಣಿಕ ಹಾಗೂ ಆರ್ಥಿಕ ಮಟ್ಟ ಸುಧಾರಿಸಿಲ್ಲ ಹಾಗೂ ಯಾವುದೇ ಉದ್ಯೊಗ ಪೂರಕ ಯೋಜನೆಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲೇ ಕಾಳಿಏತ ನೀರಾವರಿ ಯೋಜನೆಗೆ 200ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿಡಲಾಗಿತ್ತು ಆದರೇ ಕಾಂಗ್ರೇಸ್ ಸರ್ಕಾರದ ಅವಧಿ ಮುಗಿಯುವ ಹಂತ ತಲುಪಿದಾಗ ಚುನಾವಣೆಗೆ ಅಸ್ತ್ರವಾಗಿ ಬಳಸಲು ಈಗ ಕಾಳಿನದಿ ನೀರಾವರಿ ಕಾಮಗಾರಿ ಉಧ್ಘಾಟನೆ ಮಾಡುತ್ತೇವೆಂದು ಹೇಳುತ್ತಿರುವುದು ದೇಶಪಾಂಡೆ ಅವರ ಚುನಾವಣಾ ಗಿಮಿಕ್ ಆಗಿದ್ದು ಮತದಾರರು ಇದನ್ನು ಅರಿತಿದ್ದು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆಂದರು.  ಸುದ್ದಿಗೊಷ್ಠಿಯಲ್ಲಿ ಯಾತ್ರೆಯ ಸಂಚಾಲಕ ಶಿವಾಜಿ ನರಸಾನಿ, ಮುಖಂಡರಾದ ಅನಿಲ ಮುತ್ನಾಳ್, ಎಲ್.ಎಸ್.ಅರಿಶೀನಗೇರಿ, ಎಸ್.ಎ.ಶೆಟವಣ್ಣವರ, ಸೊಣಪ್ಪ ಸುಣಕಾರ, ಸಂತಾನ ಸಾವಂತ, ವಿಲಾಸ ಯಡವಿ, ವಿಎಮ್ ಪಾಟಿಲ್, ವಾಸು ಪೂಜಾರಿ, ಸಂತೋಷ ಘಟಕಾಂಬಳೆ, ನಾಗೇಂದ್ರ, ಮೋಹನ, ನಾರಾಯಣ ಬೆಳಗಾಂವಕರ ಮೊದಲಾದವರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಗಂಟೆಗೆ, ಗುರುವಾರ, ದಾಂಡೇಲಿ ಇಕೋ ಟೂರಿಸಮ್ ಅಭೀವೃದ್ದಿ, ದಿ.16, ನವಕರ್ನಾಟಕ, ನಿರ್ಮಾಣ, ಪರಿವರ್ತನಾ ಯಾತ್ರೆ, ಭ್ರಷ್ಟ ಕಾಂಗ್ರೇಸ್, ಮಧ್ಯಾಹ್ನ 3, ಯೊಜನೆ, ರಾಜ್ಯದಲ್ಲಿ, ವೈಲ್ಡ್ ಲೈಫ್, ಸರ್ಕಾರ ತೊಲಗಿಸಿ, ಹುಲಿ ಯೋಜನೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar