ಹೊನ್ನಾವರ , ನವಂಬರ 14 ರಂದು ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಹೊನ್ನಾವರ ಲಾಯನ್ಸ್ ಕ್ಲಬ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ಜೊತೆಯಲ್ಲಿ ಪಟ್ಟಣದ ಪ್ರಭಾತನಗರ ಫಾರೆಸ್ಟ ಕಾಲೋನಿ ಹಾಗೂ ಹೌಸಿಂಗ್ ಬೊರ್ಡ್ ಕಾಲೋನಿಯ ಪ್ರದೇಶದಲ್ಲಿ ಮಧುಮೇಹ ಜಾಗೃತಿ ಬಗ್ಗೆ ಘೋಷಣೆ ಹೇಳುತ್ತಾ ಪ್ರತಿ ಮನೆಗೆ ಮಧುಮೇಹ ಕಾಯಿಲೆ ಮತ್ತು ಪರಿಹಾರದ ಕರಪತ್ರಗಳನ್ನು ಹಂಚಲಾಯಿತು.
ಜಾಥಾದಲ್ಲಿ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಲಾ. ದೇವಿದಾಸ ಮಡಿವಾಳ ಕಾರ್ಯದರ್ಶಿ ಲಾ.ಪ್ರದೀಪ ಶೆಟ್ಟಿ, ಖಜಾಂಚಿ ಲಾ.ಎಂ.ವಿ.ನಾಯ್ಕ, ಲಾ.ಎಸ್.ಜೆ.ಕೈರನ್ನ, ಲಾ.ಎನ್.ಜಿ.ಭಟ್, ಲಾ.ಎಸ್.ಟಿ.ನಾಯ್ಕ, ಲಾ.ಜೀವೋತ್ತಮ ನಾಯಕ, ಲಾ.ಎಲ್.ಕೆ.ತೇಲಂಗ, ಲಾ.ಮಂಜು ಆಚಾರ್ಯ ಲಾ. ಶೇಖರ ನಾಯ್ಕ, ಎನ್.ಎಸ್.ಎಸ್. ಘಟಕದ ಅಧಿಕಾರಿ ಪ್ರಭಾಕರ ನಾಯ್ಕ 100 ಕ್ಕೂ ಹೆಚ್ಚಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Leave a Comment