ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಈ ಭಾಗದಲ್ಲಿ ಕರಡಿ ಹಾವಳಿಯಿದ್ದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಹಾಗೂ ಈ ಭಾಗದ ಜನ ಮೇಲಿಂದ ಮೇಲೆ ಮೌಖಿಕವಾಗಿ ದೂರು ನೀಡುತ್ತಾ ಮೇಲಿಂದ ಮೇಲೆ ಕಾಣಸಿಗುತ್ತಿರುವ ಕರಡಿಗಳನ್ನು ದೂರದ ಅರಣ್ಯಕ್ಕೆ ಅಟ್ಟುವಂತೆ ಮನವಿ ಮಾಡಿದರು ಇಲಾಖೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಭಾವನೆ ತೊರಿದ್ದರಿಂದ ವನ್ಯಜೀವಿಯೊಂದು ಪ್ರಾಣ ತೆರಬೇಕಾಗಿ ಬಂದಿದೆ. ಆಕಸ್ಮಿಕವಾಗಿ ಮುರ್ಕವಾಡ ವಲಯದ ಶಿವಪೂರ ಗ್ರಾಮಕ್ಕೆ ನುಗ್ಗಿದ ಕರಡಿ ಮರಿ ಸಿದ್ದರಾಮ ತಂಬೂರ ಹಾಗೂ ದ್ಯಾಮಣ್ಣಾ ಬೋಕಿ ಎಂಬುವವರ ಮೇಲೆ ದಾಳಿ ನಡೆಸಿದ್ದು ಇವರ ಕಿರುಚಾಟ ಕೆಳಿಸಿಕೊಂಡು ಸೇರಿದ ಜನ ಕರಡಿ ಓಡಿಸಲು ಪ್ರಯತ್ನಿಸುವಾಗ ಕರಡಿ ಅವರ ಮೇಲೆಯೂ ಎರಗಿ ದಾಳಿ ನಡೆಸಿದಾಗ ಗ್ರಾಮಸ್ಥರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಡಿ ಮೇಲೆ ದಾಳಿ ನಡೆಸಿದಾಗ ಕರಡಿ ಹೆದರಿ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಬಗ್ಗೆ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಭೆಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಡಿ ದಾಳಿಯಲ್ಲಿ ಗಾಯಗೊಂಡ ಇರ್ವರನ್ನು ಮುರ್ಕವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
Leave a Comment