ಹಳಿಯಾಳ:- ಪಟ್ಟಣದ ದೇಶಪಾಂಡೆ ನಗರದಲ್ಲಿ ಚರಂಡಿ(ಗಟಾರ) ಸ್ವಚ್ಚಗೊಳಿಸುವಂತೆ ಹಾಗೂ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ದೇಶಪಾಂಡೆ ನಗರ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಬಡಾವಣೆಯಲ್ಲಿ ಕಳೆದು ಹಲವು ತಿಂಗಳುಗಳಿಂದ ಗಟಾರಗಳು ಕಸ, ಕಲ್ಮಶಗಳಿಂದ ತುಂಬಿದ್ದು ನೀರು ಹರಿಯಲು ವ್ಯವಸ್ಥೆ ಇಲ್ಲದೇ ರೋಗ ಹರಡುವ ತಾಣಗಳಾಗಿ ಮಾರ್ಪಾಡಾಗಿದ್ದು ಈ ಬಗ್ಗೆ ಪುರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರು ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅವರು ಕೂಡಲೇ ಕ್ರಮ ಕೈಗೊಳ್ಳದೆ ಇದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಿವಾಸಿಗಳಾದ ಜ್ಞಾನೇಶ್ವರ ಗಜಾಕೋಶ, ಮುನಾಫ ಬಳಗಾರ, ಆಯೇಶಾ ಜಮಾದಾರ, ಮುನಿರಅಬ್ದುಲ್ ಅಗಸಿಮನಿ, ಸಾಹೇರಾ ಖಾನಜಾದೆ, ರೇಖಾ ಕಟ್ಟಿಮನಿ, ಹಿನಾ, ಮೀನಾಕ್ಷಿ, ಶೋಭಾ, ರೇಣುಕಾ ಇತರರು ಇದ್ದರು.
Leave a Comment