• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು;ನ್ಯಾಯಾಧೀಶ ವಿಠಲ ಧಾರವಾಡಕರ್

December 10, 2017 by Sachin Hegde Leave a Comment

ಕಾರವಾರ: ಗ್ರಾಮೀಣ ಕಲೆಗಳನ್ನು ಜನ ಎಂದಿಗೂ ಮರೆಯಬಾರದು. ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠಲ ಧಾರವಾಡಕರ್ ಹೇಳಿದರು.
ಶುಕ್ರವಾರ ಮದ್ಯಾಹ್ನ ಜಿಲ್ಲಾ ರಂಗಮಂದಿರದಲ್ಲಿ “ಕರಾವಳಿ ಉತ್ಸವ” ಸಾಂಸ್ಕøತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಶಿಸುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಲು ಸರ್ಕಾರ ಕರಾವಳಿ ಉತ್ಸವದಂತಹ ವೇದಿಕೆ ಕಲ್ಪಿಸಿದೆ. ಕಲಾವಿದರು ಹಾಗೂ ಕಲಾಭಿಮಾನಿಗಳು ಇದರ ಪ್ರಯೋಜನ ಪಡೆಯಬೇಕು. ಅಪರೂಪವಾಗುತ್ತಿರುವ ಕಲೆಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು. ಪದ್ಮಶ್ರಿ ಪುರಸ್ಕøತ ಸುಕ್ರಿ ಗೌಡ ಜಾನಪದ ಗೀತೆಯೊಂದನ್ನು ಪ್ರಸ್ತುತ ಪಡಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ, ವಿಶೇಷ ಭೂ ಸ್ವಾಧೀನಾಧಿಕಾರಿ ರಮೇಶ ಕಳಸದ, ನಗರಸಭೆ ಪೌರಾಯುಕ್ತ ಯೋಗೇಶ್ವರ ಇತರರು ವೇದಿಕೆಯಲ್ಲಿದ್ದರು.
ಹಾಸ್ಯ ಕಲಾವಿದ ಪ್ರಾಣೇಶ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಪ್ರಾಣೇಶ್, ಯಕ್ಷ ಕಲಾವಿದ ಚಿಟ್ಟಾಣಿಯವರನ್ನು ನೆನಪು ಮಾಡಿಕೊಂಡರು. ಹೊನ್ನಾವರ ಹಾಗೂ ಸುತ್ತಲಿನ ಯಾವದೇ ಭಾಗದಲ್ಲಿ ತಾವು ಕಾರ್ಯಕ್ರಮ ನೀಡಿದರೂ ಚಿಟ್ಟಾಣಿಯವರು ಮುಂದಿನ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು ಎಂದು ಅಭಿಪ್ರಾಯ ಹಂಚಿಕೊಂಡರು. ಕಲಾ ತಂಡದ ಸದಸ್ಯರಾದ ಮಹಾಮನಿ, ನರಸಿಂಹ ಜೋಶಿ ಹಾಗೂ ವೆಂಕಟ್ರಮಣ ಹೆಗಡೆ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಉಪ ವಿಭಾಗಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು. ಸುರೇಶ್ ಶಟ್ಟಿ ನಿರ್ವಹಿಸಿದರು.
ಉತ್ಸವದ ಅಂಗವಾಗಿ ಮಾಲಾದೇವಿ ಮೈದಾನದಲ್ಲಿ ಭಾರತೀಯ ನೌಕಾಸೇನೆ ಹಾಗೂ ಜಿಲ್ಲಾ ಪೊಲೀಸರ ಮದ್ಯೆ ಪೇಂಟ್ ಬಾಲ್ ಮೊದಲ ಪಂದ್ಯಾವಳಿ ಶುಕ್ರವಾರ ಬೆಳಗ್ಗೆ ನಡೆಯಿತು. ಇದರಲ್ಲಿ ನೌಕಾಸೇನೆಯವರು ಗೆಲುವು ಪಡೆದರು. ಇನ್ನು ಜಿಲ್ಲಾಧಿಕಾರಿ ಕಚೇರಿ ಒಳ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. 40ಕ್ಕೂ ಅಧಿಕ ಜನರು ಸ್ಪರ್ಧೆಯಲ್ಲಿ ಭಾಗವಹಿಸಿ ಬಗೆ ಬಗೆಯ ರಂಗೋಲಿಗಳನ್ನು ಚಿತ್ರಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: ಕರಾವಳಿ ಉತ್ಸವ, ಕೆಲಸವಾಗಬೇಕು, ಗೌಡ ಜಾನಪದ ಗೀತೆ, ಗ್ರಾಮೀಣ ಕಲೆ, ನಶಿಸುತ್ತಿರುವ ಕಲೆ, ನ್ಯಾಯಾಧೀಶ ವಿಠಲ ಧಾರವಾಡಕರ್, ಪ್ರೋತ್ಸಾಹಿಸುವ, ಸಭಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar