• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರೇಶ್ ಮೇಸ್ತ ಕೊಲೆ ಪ್ರಕರಣ; ಸಿಬಿಐಗೆ ನೀಡಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

December 11, 2017 by Sachin Hegde Leave a Comment

ಹಳಿಯಾಳ :

ಹೊನ್ನಾವರ ಪಟ್ಟಣದ ನಿವಾಸಿಯಾದ ಪರೇಶ್ ಕಮಲಾಕರ ಮೇಸ್ತ ಕೊಲೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಆರಕ್ಷಕರ ಸಮ್ಮುಖದಲ್ಲಿ ಅಪರಾಧಿಗಳನ್ನು ಪತ್ತೆಹಚ್ಚುವುದರ ಬದಲು ಅವರ ಜೊತೆ ಶಾಮೀಲಾಗಿ ಪ್ರಕರಣವನ್ನು ಮುಚ್ಚುವಂತಹ ಕೆಲಸ ಮಾಡಲಾಗುತ್ತಿದ್ದು ಪ್ರಕರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಭದ್ರತೆ ನೀಡಬೇಕೆಂದು ಆಗ್ರಹಿಸಿ ಹಳಿಯಾಳ ಬಿಜೆಪಿ ಘಟಕದವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹಳಿಯಾಳ ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.  ತಾಲೂಕಾ ಬಿಜೆಪಿ ಘಟಕದವರು ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ನಡೆಸಿ ಘಟನೆಯನ್ನು ಖಂಡಿಸಿ ಗಣೇಶ ಮಂದಿರದಿಂದ ಮೆರವಣಿಗೆಯನ್ನು ಆರಂಭಿಸಿ ಬಸ್ ಸ್ಟಾಂಡ್ ರಸ್ತೆ. ,ಮೇದಾರಗಲ್ಲಿ, ಸಂಗೋಳ್ಳಿ ರಾಯಣ್ಣ ಅರ್ಬನ್ ವೃತ್ತ, ಬಜಾರ , ಮುಖ್ಯ ರಸ್ತೆ ಮತ್ತು ಶಿವಾಜಿ ವೃತ್ತದ ಮೂಲಕ ಸಾಗಿ ಮೆರವಣಿಗೆಯ ಉದ್ದಕ್ಕೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಇಲ್ಲಿಯ  ಶಿವಾಜಿ ವೃತ್ತಕ್ಕೆ  ಆಗಮಿಸಿ ತಹಶೀಲದಾರ ವಿದ್ಯಾಧರ ಗುಳಗುಳಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ಈ ಕೊಲೆಯಲ್ಲಿ ಭಾಗಿಯಾದಂತಹ ಆರೋಪಿಗಳನ್ನು ತೀವೃವಾದ ಶಿಕ್ಷೆಗೆ ಒಳಪಡಿಸಬೇಕು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ನಾವು ತೀವೃತರ ಹೋರಾಟವನ್ನು ಮಾಡಬೇಕಾಗುತ್ತದೆ. ಮುಗ್ಧ ಅಮಾಯಕ ಪರೇಶ ಮೇಸ್ತಾರ ಕುಟುಂಬಕ್ಕೆ ಹೆಚ್ಚಿನ ಹಣಕಾಸಿನ ನೆರವನ್ನು ನೀಡುವಂತೆ ಒತ್ತಾಯಿಸಲಾಗಿದೆ.  ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ವಾಸು ಪೂಜಾರಿ, ಎಸ್.ಎ.ಶೆಟವಣ್ಣವರ, ಸಂತೋಷ ಘಟಕಾಂಬಳೆ, ನಾರಾಯಣ ಬೆಳಗಾಂವಕರ, ಗಣಪತಿ ಕರಂಜೇಕರ, ವಿಜಯ ಬೂಬಾಟೆ,ವಿ.ಎಮ್.ಪಾಟೀಲ್,ಸೋನಪ್ಪಾ ಸುಣಕಾರ,ಶಂಕರ ಗಳಗಿ, ಜಯಲಕ್ಷ್ಮೀ ಚವ್ಹಾಣ, ಲಕ್ಷ್ಮೀ ಭಜಂತ್ರಿ, ಅನಿಲ ಮುತ್ನಾಳ, ಪ್ರಕಾಶ ಕೋರವರ, ಗಿರೀಸ ಠೊಸೂರು, ಮಾರುತಿ ಪೆಟ್ನೇಕರ, ಸಂಜು ಹಿರೇಕರ, ಪಾಂಡು ಗೌಡಾ, ಶಾಂತಾರಾಮ ಘಾಡಿ ಇತರರು ಇದ್ದರು. ಪೋಟೋ ; 11 ಎಚ್.ಎಲ್.ವೈ 1 : ಹಳಿಯಾಳ:  ಹೊನ್ನಾವರ ಘಟನೆಯನ್ನು ವಿರೋಧಿಸಿ ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು.

watermarked 11 hly 1 1

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಪರಾಧಿಗಳನ್ನು ಪತ್ತೆಹಚ್ಚುವುದರ, ಉತ್ತರ ಕನ್ನಡ, ಕುಟುಂಬಕ್ಕೆ, ಗಣೇಶ ಕಲ್ಯಾಣ ಮಂಟಪ, ಜಿಲ್ಲಾ ಪೋಲಿಸ್ ಆರಕ್ಷಕರ, ಜೊತೆ ಶಾಮೀಲಾಗಿ, ನೀಡಬೇಕೆಂದು ಆಗ್ರಹಿಸಿ, ಪರೇಶ್ ಕಮಲಾಕರ ಮೇಸ್ತ, ಪರೇಶ್ ಮೇಸ್ತ ಕೊಲೆ ಪ್ರಕರಣ, ಬದಲು ಅವರ, ಮನವಿ ಪತ್ರ, ಮೃತನ, ರಾಜ್ಯಪಾಲರಿಗೆ ಮನವಿ, ಶಿವಾಜಿ ವೃತ್ತ, ಸಿಬಿಐಗೆ, ಸೂಕ್ತ ಪರಿಹಾರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...