ಹೊನ್ನಾವರ : ಪಟ್ಟಣದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ ಮೇಸ್ತನ ಕುಟುಂಬಕ್ಕೆ ಸಂಘ ಪರಿವಾರದ ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಪರೇಶನ ಕುಟುಂಬಕ್ಕೆ ಸಾಂತ್ವಾನ ನಿಧಿಯನ್ನು ಒಟ್ಟುಗೂಡಿಸಿ 1 ಲಕ್ಷ ರೂಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿ ಸಾಂತ್ವಾನ ಹೇಳಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹನುಮಂತ ಶ್ಯಾನಭಾಗ, ಸು. ಕೃಷ್ಣಮೂರ್ತಿ, ವಿಶ್ವನಾಥ ನಾಯಕ, ಲೋಕೇಶ ಮೇಸ್ತ, ಗೋವಿಂದ ನಾಯ್ಕ, ಉಮೇಶ ಸಾರಂಗ, ಗಂಗೊಳ್ಳಿಯ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ರತ್ನಾಕರ ಖಾರ್ವಿ, ರಾಮಪ್ಪ ಖಾರ್ವಿ, ವಾಸು ದೇವಾಡಿಗ, ರಘುನಾಥ ಖಾರ್ವಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment