• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ; ಶವ ಇಟ್ಟು ಪ್ರತಿಭಟನೆ

January 15, 2018 by Yogaraj SK Leave a Comment

ಹಳಿಯಾಳ:  ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ  ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವೀಗಿಡಾಗಿದ್ದಾಳೆಂದು ಆರೋಪಿಸಿ ಅವರ ಕುಟುಂಬದವರು ಹಾಗೂ ಸಮಾಜದ ಜನತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.  ಹಳಿಯಾಳ ಚವ್ವಾಣ ಪ್ಲಾಟನ  ಮುಸ್ಲಿಂ ಸಮುದಾಯಕ್ಕೆ ಸೇರಿದ ಆಯೇಷಾ ಗೌಸ ಅತ್ತಾರ ಸಾವಿಗಿಡಾದ ದುರ್ದೈವಿ ಮಹಿಳೆಯಾಗಿದ್ದಾಳೆ.  ಇವಳು ದಿ.8 ರಂದು ರಾತ್ರಿ 2ನೇ ಹೆರಿಗೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು ಅಂದು ಮಧ್ಯರಾತ್ರಿ ವೇಳೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಆಯೇಷಾಗೆ ಬಾಣಂತನ ಮಾಡಲಾಗಿದ್ದು ಆ ಸಂದರ್ಭದಲ್ಲಿ ಆಕೆಗೆ ತೀವೃತರವಾದ ರಕ್ತಸ್ರಾವವಾಗುತ್ತಿರುವುದನ್ನು ಅರಿತ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಸೂಚಿಸಿದ್ದು  ಅಲ್ಲಿ ತೆರಳಿದ ಕುಟುಂಬಸ್ಥರಿಗೆ ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಾಗುವಂತೆ ತಿಳಿಸಿದಾಗ  ಆಯೇಷಾಳನ್ನು ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಿಸಿ ದಿ.13 ರ ವರೆಗೆ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ದಿ.13 ರ ಮಧ್ಯಾಹ್ನ ಆಯೇಷಾ ಸಾವನ್ನಪ್ಪಿದ್ದಾಳೆಂದು ಆಕೆಯ ಪತಿ ಹಾಗೂ ತಂದೆ ಮಾಧ್ಯಮದವರಿಗೆ ತಿಳಿಸಿದ್ದಾರೆ.  ಶನಿವಾರ ರಾತ್ರಿ ಕುಟುಂಬಸ್ಥರು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಹಿರಿಯರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಶವವನ್ನು ಆಸ್ಪತ್ರೆಯ ಹೊರಗೆ ಅಂಬ್ಯುಲೆನ್ಸನಲ್ಲೇ ಇರಿಸಿ ಪ್ರತಿಭಟಿಸಿದರು ಅಲ್ಲದೇ ತಾಲೂಕಾ ವೈದ್ಯಾಧಿಕಾರಿ ರಮೇಶ ಕದಂ ಅವರ ಕಚೇರಿಗೆ ತೆರಳಿ ಮಹಿಳೆಯ ಹೇರಿಗೆ ಸಂದರ್ಭದಲ್ಲಿ ನಡೆದಿರುವ ಕರ್ತವ್ಯಲೋಪದ ಬಗ್ಗೆ  ಸಂಪೂರ್ಣ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲದೇ ಮೃತ ಮಹಿಳೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು ಮಾತ್ರವಲ್ಲದೇ  ಮೃತಳ ತಂದೆ ಹಾಗೂ ಆಕೆಯ ಪತಿ ಗೌಸ ಲಿಖಿತ ದೂರನ್ನು ತಾಲೂಕಾ ವೈದ್ಯಾಧಿಕಾರಿಗೆ ಸಲ್ಲಿಸಿದರು.   ಪ್ರತಿಭಟನಾಕಾರರು ತಾಲೂಕಾ ಆಸ್ಪತ್ರೆಯಲ್ಲಿ ಸಾಕಷ್ಟು ಲೋಪ ದೋಷಗಳಿಗೆ ಪ್ರತಿಯೊಂದು ಸಂದರ್ಭದಲ್ಲಿ ಧಾರವಾಡ, ಹುಬ್ಬಳ್ಳಿಗೆ ಬರೆದು ಕೊಡುತ್ತಾರೆ ಇಲ್ಲಿ ಚಿಕಿತ್ಸೆ ನೀಡುವುದಿಲ್ಲ , ಆಸ್ಪತ್ರೆಯ ವೈದ್ಯರು ಹೊರಗೆ ತಮ್ಮ ಖಾಸಗಿ ಆಸ್ಪತ್ರೆಗಳ ಬಗ್ಗೇ ಹೆಚ್ಚಿನ ಗಮನ ಹರಿಸುತ್ತಾರೆ,  ಶುಷ್ರೂಷಕಿಯರು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆಂದು ತೀವೃ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಇನ್ನೂ ಮುಂದೆ ಯಾವ ಸಮಾಜದ ಜನತೆಗೂ ಆಸ್ಪತ್ರೆಯಲ್ಲಿ ಸರಿಯಾ  ಮಾತಿನ ಚಕಮಕಿ ನಡೆಯಿತು.   ತಾಲೂಕಾ ವೈದ್ಯಾಧಿಕಾರಿ ಕದಂ ಅವರು  ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿ ಪ್ರತಿಭಟನಾಕಾರರ ಮನವೊಲಿಸಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.     ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸುಬಾನಿ ಹುಬ್ಬಳ್ಳಿ, ಫಯಾಜ ಶೇಖ, ಮುಖಂಡರಾದ ಅಲಿಮ ಬಸರಿಕಟ್ಟಿ, ಪೀರಾ ಮಕಾನದಾರ, ರಾಜು ಮುಲ್ಲಾ, ಅಲಿಸಾಬ ಧಾರವಾಡಕರ, ಮಸ್ತಾನ ಮುನವಳ್ಳಿ, ಮಹಮ್ಮದ ಶಫಿ ಕಾಕರ, ಅನಿಸ ಪಟೇಲ್, ನಿಸಾರ ದಲಾಲ, ಸೈದಾಮದ ಕಾಕರ ಮೌಲಾನಾ ನಸ್ರುಲ್ಲಾ ಮೊದಲಾದವರು ಇದ್ದರು.

14 hly 2

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಚವ್ವಾಣ ಪ್ಲಾಟನ, ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ, ತಾಲೂಕಾ ವೈದ್ಯಾಧಿಕಾರಿ, ಧಾರವಾಡ, ಬಾಣಂತಿ, ಮುಸ್ಲಿಂ ಸಮುದಾಯ, ವೈದ್ಯರು, ಶವ ಇಟ್ಟು ಪ್ರತಿಭಟನೆ, ಹುಬ್ಬಳ್ಳಿ, ಹುಬ್ಬಳ್ಳಿ ಕಿಮ್ಸ್‍, ಹೆರಿಗೆಯಾದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...