• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ

January 31, 2018 by Yogaraj SK Leave a Comment

ಹಳಿಯಾಳ :- ಅಸಂವಿಧಾನಿಕ, ಅವಾಸ್ತವಿಕ, ಸುಳ್ಳು ಅಂಕಿ
ಅಂಶಗಳಿಂದ ಕೂಡಿರುವ, ಪ್ರಜಾಸತ್ತಾತ್ಮಕವಾಗಿ ಚರ್ಚೆಯೇ
ಆಗದೆ ಇರುವ ಹಾಗೂ ಏಕಪಕ್ಷೀಯವಾಗಿ ಕೇಂದ್ರ
ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವ ನ್ಯಾಯಮೂರ್ತಿ
ಸದಾಶಿವ ಆಯೋಗದ ವರದಿಯನ್ನು ಕೂಡಲೇ
ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ
ಒಕ್ಕೂಟ ಜಿಲ್ಲಾ ಸಮೀತಿಯ ನೇತೃತ್ವದಲ್ಲಿ ವಿವಿಧ ದಲಿತ
ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ
ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು
ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿರುವ ಸಚಿವ ದೇಶಪಾಂಡೆ ಮನೆ
ಎದುರು ಪ್ರತಿಭಟನೆ ನಡೆಸಿದ ಸಮೀತಿಯವರು ಮಿನಿ
ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ
ಸಲ್ಲಿಸಿದರು.
ಮನವಿಯಲ್ಲಿ ಸೋರಿಕೆಯಾಗಿರುವ ಈ ವರದಿಯ
ಅಂಶಗಳಿಂದಾಗಿ ದಲಿತ ಸಮುದಾಯದ ಒಳಗೆ ಪರಸ್ಪರ
ದ್ವೇಷ, ಅನುಮಾನ, ಅಪಮಾನ ಇತ್ಯಾದಿ ತಪ್ಪು ಕಲ್ಪನೆ
ಬಿತ್ತರವಾಗುತ್ತಿದೆ. ಪರಿಶಿಷ್ಠ ಜಾತಿಗಳ ಪಟ್ಟಿಯಿಂದ
ನಮ್ಮನ್ನು ಕೈ ಬಿಡುವ ಅಪಾಯಕಾರಿ ಶಿಫಾರಸ್ಸು ಇದಾಗಿದೆ.
ಕಾನೂನು ಪ್ರಕಾರ ಸಾಧುವಲ್ಲದ ಮತ್ತು
ಸರ್ಕಾರಗಳಿಂದಲೂ ಜಾರಿ ಸಾಧ್ಯವಾಗದ ಶಿಫಾರಸ್ಸುಗಳನ್ನು
ತೇಲಿಬಿಡುವ ಮೂಲಕ ಶಾಶ್ವತವಾಗಿ ಪರಿಶಿಷ್ಠರು ಕಚ್ಚಾಟದಲ್ಲೇ
ಮುಳುಗಿರಲಿ ಎಂಬ ಷಡ್ಯಂತರ ಇ ವರದಿಯಲ್ಲಿದೇ ಎಂದು
ಗಂಭೀರ ಆರೋಪ ಮಾಡಲಾಗಿದೆ.
ಮಾದಿಗ ಸಮುದಾಯವನ್ನು ಇತರೆ ಸಹೋದರರಾದ
ಭೋವಿ, ಲಂಭಾಣಿ, ಛಲವಾದಿ, ಕೊರಚ, ಕೊರಮ, ದೊಂಬಿದಾಸ,
ಬುಡ್ಗ, ಜಂಗಮ, ಸಿಳ್ಳೆಕ್ಯಾತ, ದಕ್ಕಳರು, ಸಿಂದೊಳ್ಳು ಇತ್ಯಾದಿ
ದಲಿತ ಅಲೆಮಾರಿಗಳ ವಿರುದ್ದ ಎತ್ತಿಕಟ್ಟಿ ದ್ವೇಷ
ಬಿತ್ತಲಾಗುತ್ತಿರುವ ಅಪಾಯಕಾರಿ ಅಂಶಗಳಿವೆ ಎಂದಿರುವ
ಅವರು ಭಾದಿತ ಸಮುದಾಯಗನ್ನು ಕಡೆಗಣಿಸಿ
ಮುಖ್ಯಮಂತ್ರಿಗಳು ಏಕಪಕ್ಷೀಯವಾಗಿ ಸಭೆ ನಡೆಸಿದ್ದಾರೆ
ಅಲ್ಲದೇ ಎಲ್ಲರ ಹಿತ ಕಾಪಾಡಬೇಕಾದ ಸಮಾಜ ಕಲ್ಯಾಣ ಸಚಿವ
ಆಂಜನೇಯ ಅವರು ಕೇವಲ ಒಂದು ಸಮುದಾಯದ
ವಕ್ತಾರರಂತೆ ವರ್ತಿಸುತ್ತಿರುವುದನ್ನು ಖಂಡಿಸುವುದಾಗಿ
ಹೇಳಲಾಗಿದೆ.
ಸಾರ್ವಜನೀಕ ಚರ್ಚೆಯೇ ಆಗದಿರುವ ಈ ವರದಿಯನ್ನು
ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಪ್ರಚೋದನೆ

ಮಾಡುತ್ತಿರುವ ಬಿಜೆಪಿ ನಾಯಕ ಬಿಎಸ್ ಯಡ್ಯೂರಪ್ಪ ಮನೆ
ಎದುರು ಫೇ.1 ರಂದು ಪ್ರತಿಭಟನೆ ನಡೆಸಲಾಗುವುದು
ಎಂದು ತಿಳಿಸಲಾಗಿದೆ.
ಇನ್ನೂ ಸಂಘಟನೆಯು ತಮ್ಮ
ಹಕ್ಕೋತ್ತಾಯಗಳನ್ನು ಸರ್ಕಾರಕ್ಕೆ ತಿಳಿಸಿದ್ದು ಒಕ್ಕೂಟದ
ಪದಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ತಕ್ಷಣ ಸಭೆ
ಕರೆಯಬೇಕು. ವರದಿಯನ್ನು ಏಕಪಕ್ಷೀಯವಾಗಿ
ಶಿಫಾರಸ್ಸು ಮಾಡದೆ ಸಾರ್ವಜನಿಕರ ತಜ್ಞರ ಚರ್ಚೆಗೆ
ಬೀಡಬೇಕು, 101 ಪರಿಶಿಷ್ಠ ಜಾತಿಗಳಿಗೆ ವರದಿಯ ದೃಢಿಕೃತ
ಪ್ರತಿಯನ್ನು ಕೊಡಬೇಕು, ಎಲ್ಲಾ ಸಮುದಾಯಗಳು
ತಮ್ಮ ಅಹವಾಲು, ಆಕ್ಷೇಪಣೆ, ತಕರಾರು ಸಲ್ಲಿಸಲು ಅವಕಾಶ
ನೀಡಬೇಕು. ಈ ವರದಿಯ ಕುರಿತು ಸಚಿವ ಸಂಪುಟದಲ್ಲಿ
ಸಮುದಾಯಗಳಿಗೆ ಧಕ್ಕೆ ಆಗದಂತೆ ಧ್ವನಿ ಎತ್ತಬೇಕು.
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು
ಕರೆಯುವ ದಲಿತ ಮುಖಂಡರ ಸಭೆಗೆ ಈ
ಸಮುದಾಯಗಳನ್ನು ನಿರಂತರವಾಗಿ
ಕಡೆಗಣಿಸಲಾಗುತ್ತಿದ್ದು ಇನ್ನೂ ಮುಂದೆ ಹೀಗಾಗದೆ
ಸಭೆಗಳಿಗೆ ಪ್ರತಿನಿಧಿಗಳನ್ನು ಆಹ್ವಾನಿಸುವಂತೆ
ಆಗ್ರಹಿಸಲಾಗಿದ್ದು ಸರ್ಕಾರ ತಪ್ಪು ನಿರ್ಧಾರವನ್ನು
ತೆಗೆದುಕೊಂಡರೇ ರಾಜ್ಯವ್ಯಾಪಿ ಊಗ್ರ ಹೋರಾಟ
ನಡೆಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಉ.ಕ.ಅಖಿಲ ಕರ್ನಾಟಕ ಭೋವಿ ವಡ್ಡರ
ಯುವ ವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರ ವಡ್ಡರ,
ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ರಾಜ್ಯ ಮಹಿಳಾ ಪ್ರಧಾನ
ಕಾರ್ಯದರ್ಶಿ ಜಯಲಕ್ಷ್ಮೀ ಚವ್ವಾಣ, ಜಯರಾಮ ಬಂಡಿವಾಡ,.
ರಾಮಣ್ಣಾ ವಡ್ಡರ, ಅನ್ನಪ್ಪಾ ವಡ್ಡರ, ರವಿ ನಾಗ್ರೇಶಿ, ಕಿರಣ
ಭಜಂತ್ರಿ, ಮುತ್ತಪ್ಪಾ, ಸುರೇಶ ಮೊದಲಾದವರು ಇದ್ದರು.

30 hly 2

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 101 ಪರಿಶಿಷ್ಠ ಜಾತಿ, ಅವಾಸ್ತವಿಕ, ಅಸಂವಿಧಾನಿಕ, ಉ.ಕ.ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ, ಎದುರು, ಜಿಲ್ಲಾಧ್ಯಕ್ಷ, ಪ್ರಜಾಸತ್ತಾತ್ಮಕ, ಪ್ರತಿಭಟನೆ, ಮನೆ, ರಾಜ್ಯವ್ಯಾಪಿ ಊಗ್ರ ಹೋರಾಟ, ರಾಮಚಂದ್ರ ವಡ್ಡರ, ಸಚಿವ ಆರ್.ವಿ.ದೇಶಪಾಂಡೆ, ಸುಳ್ಳು ಅಂಕಿ ಅಂಶಗಳಿಂದ ಕೂಡಿರುವ, ಹಳಿಯಾಳ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...