• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರೈತರಿಗೆ ಎಲ್ಲ ಸೌಲಭ್ಯಗಳು ಸಹಕಾರಿ ಬ್ಯಾಂಕ ಮುಖಾಂತರ ಸಿಗಬೇಕು;ಜಯಶ್ರೀ ಮೊಗೇರ

February 1, 2018 by Gaju Gokarna Leave a Comment

ಹೊನ್ನಾವರ:

ಹೊನ್ನಾವರ ಪಿಎಲ್ಡಿ  ಬ್ಯಾಂಕು ಅನೇಕ ಶಾಖೆಗಳು ತೆರೆಯಲು ಹಲವಾರು ನಿರ್ದೇಶಕರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.ಹೊನ್ನಾವರ: ಹೊನ್ನಾವರ ಪಿಎಲ್ಡಿ  ಬ್ಯಾಂಕು ಅನೇಕ ಶಾಖೆಗಳು ತೆರೆಯಲು ಹಲವಾರು ನಿರ್ದೇಶಕರ ಶ್ರಮದಿಂದಾಗಿ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಸುವರ್ಣ ಮಹೋತ್ಸವ ಉದ್ಘಾಟಿಸಿದ ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ  ನಡೆದ ಹೊನ್ನಾವರ ಪಿ.ಎಲ್.ಡಿ ಬ್ಯಾಂಕಿನ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕು ಕೃಷಿಸಾಲ ಹಾಗೂ ಕೃಷಿಯೇತರ ಸಾಲ ನೀಡಿದ್ದು ವಸೂಲಾತಿಯನ್ನು ಉತ್ತಮ ಪ್ರಗತಿಯನ್ನು ಕಂಡಿದೆ. ಜಿಲ್ಲೆಯ 11 ಭೂ ಬ್ಯಾಂಕುಗಳಲ್ಲಿ ಹೊನ್ನಾವರ ಬ್ಯಾಂಕ ಉತ್ತಮ ಸಾಧನೆ ಮಾಡಿದೆ. ಠೇವಣಿ ಸಂಗ್ರಹಿಸಿ ರೈತರಿಗೆ ಬೇಕಾದ ವಿಶೇಷ ಸಾಲ. ಸೌಲಭ್ಯ ನೀಡುತ್ತಿದ್ದು ರಾಜ್ಯದಲ್ಲಿ ಗುರುತಿಸಲ್ಪಟ್ಟಿದ್ದು ಹೆಮ್ಮೆಯ ಸಂಗತಿ ಎಂದರು. ಶಾಸಕ ಮಂಕಾಳ ವೈದ್ಯ ಹೊನ್ನಾವರ ಪಿ.ಎಲ್.ಡಿ ಬ್ಯಾಂಕಿನ ಮಂಕಿಯ ನೂತನ ಶಾಖೆಯ ಉದ್ಘಾಟಿಸಿ ಮಾತನಾಡಿ, ಕಳೆದ 50 ವರ್ಷಗಳ ಹಿಂದೆ ನಮ್ಮ ಹಿರಿಯರು ಬ್ಯಾಂಕು ಸ್ಥಾಪಿಸಿರುವುದರಿಂದ ಇಂದು ಅನೇಕ ರೈತರಿಗೆ ಸಹಕಾರಿಯಾಗಿದೆ. ಬ್ಯಾಂಕು ಸುಮಾರು 30 ಜನರಿಗೆ ಉದ್ಯೋಗ ಅವಕಾಶ ನೀಡಿದೆ. ಬ್ಯಾಂಕಿನ ಶಾಖೆಗಳು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲಾಗಿದೆ. ಇದರಿಂದ ಅನೇಕ ಗ್ರಾಹಕರಿಗೆ ಉಪಯುಕ್ತವಾಗಿದೆ. ಕೃಷಿ ಸಾಲ ಮತ್ತು ಕೃಷಿಯೇತರ ಸಾಲಗಳನ್ನು ನೀಡಿ ಅಭಿವೃದ್ಧಿ ಪಥದಲ್ಲಿದೆ’ ಎಂದರು. `ಸುವರ್ಣ ಪ್ರಭ’ ಸ್ಮರಣ ಸಂಚಿಕೆ ರಕ್ಷಾಪುಟ ಅನಾವರಣ ಮಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಸಹಕಾರಿ ಮುಖಾಂತರ ಕಾರ್ಯರೂಪಕ್ಕೆ ತರಬೇಕು. ರೈತರಿಗೆ ಎಲ್ಲ ಸೌಲಭ್ಯಗಳು ಸಹಕಾರಿ ಬ್ಯಾಂಕ ಮುಖಾಂತರ ಸಿಗಬೇಕು ಎಂದರು. ಬ್ಯಾಂಕಿನ ಪ್ರಥಮ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದ ಸಂಸ್ಥೆಗೆ ಕಟ್ಟಡ ಕಟ್ಟಿಸಿದ ನ್ಯಾಯವಾದಿ ಸುಲೇಮಾನ್ ತಲ್ಕಣಿ, ಮಾಜಿ ಅಧ್ಯಕ್ಷರುಗಳಾದ ಡಾ. ಎಂ.ಪಿ. ಕರ್ಕಿ, ಡಾ. ಜಿ.ಜಿ.ಸಭಾಹಿತ, ಸಾಂಬ ಹೆಗಡೆ, ಪಿ.ಎಸ್.ಭಟ್ಟ ಉಪ್ಪೋಣಿ, ಚಂದ್ರಶೇಖರ ಗೌಡ ಹಾಗೂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೆಶಕರು, ನಿವೃತ್ತ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಯೋಗೇಶ ರಾಯ್ಕರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಧುರೀಣ ಆರ್.ಎಸ್.ಭಾಗವತ, ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ಉಲ್ಲಾಸ ನಾಯ್ಕ, ಶಿವರಾಮ ಸಂಗುಮನೆ, ಈರಮ್ಮ ನಾಯ್ಕ, ಗಣಪಯ್ಯ ಗೌಡ, ವೆಂಕಟ್ರಮಣ ಭಟ್ಟ, ಪಿ.ಟಿ.ನಾಯ್ಕ, ಮಂಗಲಾ ಎಸ್. ಭಟ್ಟ, ಟಿ.ಎಸ್.ಹೆಗಡೆ, ಎಂ.ಆರ್.ಹೆಗಡೆ, ಸತೀಶ ತಾಂಡೇಲ, ಇತರರು ಉಪಸ್ಥಿತರಿದ್ದರು.  ಬ್ಯಾಂಕಿನ ಉಪಾಧ್ಯಕ್ಷ ರಾಮಪ್ಪ ನಾಯ್ಕ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಪಿ.ಎನ್.ಭಟ್ ವರದಿ ವಾಚಿಸಿದರು. ಸಹಕಾರದ ಕುರಿತು ಜಯರಾಮ ಉಪನ್ಯಾಸ ನಡೆಯಿತು. ನಂತರ ಯಕ್ಷಗಾನ ನಡೆಯಿತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: 11 ಭೂ ಬ್ಯಾಂಕು, ಎಲ್ಲ ಸೌಲಭ್ಯ, ಗ್ರಾಮೀಣ ಭಾಗ, ಜಯಶ್ರೀ ಮೊಗೇರ, ಪಿಎಲ್ಡಿ  ಬ್ಯಾಂಕು, ಬ್ಯಾಂಕು ಅನೇಕ ಶಾಖೆ, ಮುಖಾಂತರ ಸಿಗಬೇಕು, ಮೂಡಗಣಪತಿ ಸಭಾಭವನ, ರೈತರಿಗೆ, ಶ್ರಮದಿಂದಾಗಿ ಇಂದು ಹೆಮ್ಮರ, ಸಹಕಾರಿ ಬ್ಯಾಂಕ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar