ಹಳಿಯಾಳ:
17ವರ್ಷಗಳ ನಂತರ ನಡೆಯುತ್ತಿರುವ ತಾಲೂಕಿನ ತಿಪ್ಪನಗೇರಿಯ ಗ್ರಾಮದೇವಿ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ ಪೂಜಾ, ಕೈಂಕರ್ಯಗಳು ಹಾಗೂ ಗ್ರಾಮದೇವಿಯ ಹೊನ್ನಾಟ ಉತ್ಸವ ಸಂಪನ್ನಗೊಂಡಿದ್ದು ದಿ.12 ರಂದು ಜಾತ್ರೆಗೆ ತೆರೆ ಬಿಳಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ದೇವಿಯ ನೂತನ ಮಂದಿರದ ಉದ್ಘಾಟನೆ, ಗಣೇಶ ಪೂಜೆ, ದೇವಿಯ ಮಾಂಗಲ್ಯಧಾರಣೆ, ಗ್ರಾಮಸ್ಥರಿಂದ ಊಡಿ ತುಂಬುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪ್ರತಿದಿನ ಹರಿಪಾಠ, ಕಾಕಡಾರತಿ, ಹಾಗೂ ಸಾಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಮೂರು ದಿನಗಳವರೆಗೆ ದೇವಿ ಸಿಮೇಯ ಮೂಲ ಸ್ಥಾನ ಅಲಂಕರಿಸಿ ನಂತರ ದೇವಸ್ಥಾನದಲ್ಲಿ ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ದೈವಕಮೀಟಿ ತಿಳಿಸಿದೆ. ಸಹಸ್ರಾರು ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
Leave a Comment