• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಡವರ ಮನೆ ತಲುಪಿದ ಉಚಿತ ಗ್ಯಾಸ ಕಿಟ್‍ಗಳು

March 16, 2018 by Gaju Gokarna Leave a Comment

ಕುಮಟಾ ತಾಲೂಕಿನ ಗೋಕರ್ಣದ ಬಿಜ್ಜೂರಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 9 ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳ ಜೊತೆಗೆ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನುಷ್ಠಾನದಲ್ಲಿ ಒಡ್ಡಲಾಗಿದ್ದ ಹಲವಾರು ಅಡೆತಡೆಗಳನ್ನು ದಾಟಿಯೂ ಸಹ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹಾಗೂ ಬಿಜೆಪಿ ಕಾರ್ಯಕರ್ತರು ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿರುವುದು ಅಭಿನಂದನಾರ್ಹವಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದೆ. ಇದರಿಂದ ಕಡುಬಡವರಿಗೆ ಉಚಿತವಾಗಿ ಈ ಸೌಲಭ್ಯ ದೊರೆಯುತ್ತಿದೆ. ಹೊಗೆಯಿಂದ ಮಹಿಳೆಯರ ಸ್ವಾಸ್ಥ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸುವ ಹಾಗೂ ಪರಿಸರವನ್ನು ರಕ್ಷಿಸುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ 1000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಕಿಟ್ ಗಳನ್ನು ದೊರಕಿಸಿಕೊಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಯೋಜನೆಯ ಅನುಷ್ಠಾನದಲ್ಲಿ ಅಡ್ಡಿಯನ್ನುಂಟು ಮಾಡಲಾಗುತ್ತಿದೆ. ಅದನ್ನೆಲ್ಲ ಮೀರಿ ನಾವೆಲ್ಲ ಬಡ ಕುಟುಂಬಗಳಿಗೆ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇವೆ. ಸರಕಾರದ ಯಾವುದೇ ಬಡವರ ಪರವಾದ ಸೌಲಭ್ಯಗಳಿರಲಿ ಅದನ್ನು ನಾವು ಪ್ರಾಮಾಣಿಕವಾಗಿ ಬಡವರಿಗೆ ತಲುಪಿಸುತ್ತೇವೆ. ಬಡವರಿಗೆ ಅನುಕೂಲತೆ ಉಂಟಾಗಬೇಕು ಎಂಬುದೊಂದೇ ನಮ್ಮ ಆಶಯವಾಗಿದೆ. ಬಡವರ ಪರವಾದ ಯೋಜನೆಗಳನ್ನು ಬಡವರಿಗೆ ತಲುಪಿಸುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕೇ ವಿನಃ ತೊಂದರೆಯನ್ನುಂಟು ಮಾಡಬಾರದು. ಕೇಂದ್ರ ಸರಕಾರ ಘೋಷಿಸಿದ ಆಯುಷ್ಮನ್ ಭಾರತ ಎಂಬ ವೈದ್ಯಕಿಯ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಗಳ ವರೆಗೆ ಸಾಲ ಸೌಲಭ್ಯ ದೊರೆಯಲಿದ್ದು ಜನರು ಈ ಯೋಜನೆಗಳ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು. ಎಲ್ಲಾ ಯೋಜನೆಗಳ ಸೌಲಭ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಹಾಗೂ ಕಾರ್ಯಕರ್ತರು ಸದಾ ಶ್ರಮಿಸುತ್ತೇವೆ ಎಂದರು.
ಸುಧಾ ಗೌಡ ಅವರು ಮಾತನಾಡಿ ನಾಗರಾಜ ನಾಯಕ ಅವರು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕುಮಟಾ- ಹೊನ್ನಾವರ ಭಾಗದಲ್ಲಿ ಬಡವರ ಮನೆ-ಮನೆಗಳಿಗೆ ತೆರಳಿ ಉಚಿತವಾಗಿ ಅತಿ ಹೆಚ್ಚು ಗ್ಯಾಸ್ ಕಿಟ್ ಗಳನ್ನು ತಲುಪಿಸುವಲ್ಲಿ ಶ್ರಮಿಸಿದ್ದಾರೆ. ಇವರ ಈ ಕಳಕಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇನೆ. ನನಗೂ ಸಹ ಕೆಲವು ಭಾಗಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಆಶಯವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ನುಡಿದು ಸರಕಾರವು ಘೋಷಿಸುವ ಕಾರ್ಯಕ್ರಮಗಳನ್ನು ಬಡಜನರಿಗೆ ತಲುಪಿಸುವಲ್ಲಿ ರಾಜಕೀಯ ಮಾಡದೇ ನಿಷ್ಕಳಂಕ ಮನಸ್ಸಿನಿಂದ ಬಡವರಿಗೆ ಈ ಸೌಲಭ್ಯವನ್ನು ತಲುಪಿಸುತ್ತಿರುವ ನಾಗರಾಜ ನಾಯಕ ತೊರ್ಕೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಫಲಾನುಭವಿಗಳಾದ ಬಿಜ್ಜೂರಿನ ಗಂಗೆ ಕಡಬಾ ಗೌಡ, ಗುಲಾಬಿ ತುಳಸು ಗೌಡ, ಶಾಂತಿ ಕರಿಯಾ ಗೌಡ, ಮಂಗಲಾ ವೆಂಕಟ್ರಮಣ ಗೌಡ, ಮಂಕಾಳಿ ಶಿವಪ್ಪ ಗೌಡ, ನೆಲಗುಣಿಯ ಲಕ್ಷ್ಮೀ ಮಂಜುನಾಥ ಗೌಡ, ಶ್ರೀಮತಿ ಶಂಕರ ಗೌಡ, ಶಾಂತಿ ತಿಮ್ಮಣ್ಣ ಗೌಡ, ಬೇಲೆಹಿತ್ತಲಿನ ಕಮಲಾ ಕೇಮು ಅಂಬಿಗ ಇವರುಗಳು ಉಚಿತ ಗ್ಯಾಸ್ ಕಿಟ್ ಗಳನ್ನು ಮತ್ತು ಲೈಟರಗಳನ್ನು ಪಡೆದುಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ನಾಡುಮಾಸ್ಕೇರಿ ಗ್ರಾ. ಪಂ. ಸದಸ್ಯ ಶ್ರೀನಿವಾಸ ದೇವಣ್ಣ ನಾಯಕ, ಗಣಪತಿ ಗೌಡ, ಪ್ರಕಾಶ ಗೌಡ, ವೆಂಕಟ್ರಮಣ ಕವರಿ, ರಾಘವೇಂದ್ರ ಗೌಡ, ಸತೀಶ ದೇಶಭಂಡಾರಿ ಮುಂತಾದವರು ಉಪಸ್ಥಿರಿದ್ದರು. ಅರುಣ ಕವರಿ ತೊರ್ಕೆ ಅವರು ಸ್ವಾಗತಿಸಿ ವಂದಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Kumta News Tagged With: 5 ಲಕ್ಷ ರೂ, ಅಡೆತಡೆಗಳನ್ನು ದಾಟಿಯೂ ಸಹ, ಉಚಿತ ಗ್ಯಾಸ, ಉಜ್ವಲ ಯೋಜನೆ, ಕಿಟ್‍ಗಳು, ಕುಮಟಾ, ಗೋಕರ್ಣ, ತಲುಪಿದ, ನಾಗರಾಜ ನಾಯಕ ತೊರ್ಕೆ, ಪರಿಸರ ರಕ್ಷಿಸುವ ಧ್ಯೇಯ, ಪ್ರಧಾನ ಮಂತ್ರಿ, ಬಡವರ ಮನೆ, ಬಿಜೆಪಿ ಕಾರ್ಯಕರ್ತರ ಸಹಕಾರ, ಬಿಜೆಪಿ ಕಾರ್ಯಕರ್ತರು ಅರ್ಹ ಫಲಾನುಭವಿ, ಬಿಜ್ಜೂರಿ, ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಮನೆ-ಮನೆಗಳಿಗೆ ತೆರಳಿ, ಸಂಪೂರ್ಣ ಸೌಲಭ್ಯ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar