ಹೊನ್ನಾವರ . ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ ಯಲ್ಲಿ ‘ಮಾಸದ ಆಟ’ ಪ್ರಯುಕ್ತವಾಗಿ “ಸುಭದ್ರಾ ಕಲ್ಯಾಣ” ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದು, ಮುಮ್ಮೇಳದಲ್ಲಿ ಬಲರಾಮನಾಗಿ ಶ್ರೀಪಾದ ಹೆಗಡೆ ಹಡಿನಬಾಳ, ಕೃಷ್ಣನಾಗಿ ಕೆರೆಮನೆ ಶಿವಾನಂದ ಹೆಗಡೆ, ಕಪಟ ಸನ್ಯಾಸಿಯಾಗಿ (ಅರ್ಜುನ) ಶಿರಳಗಿ ತಿಮ್ಮಪ್ಪ ಹೆಗಡೆ, ವನಪಾಲಕನಾಗಿ ಸೀತಾರಾಮ ಹೆಗಡೆ ಮುಡಾರೆ, ಕೌರವನಾಗಿ ವಿನಾಯಕ ನಾಯ್ಕ, ಕರ್ಣನಾಗಿ ಚಂದ್ರಶೇಖರ ಎನ್., ನಕುಲ ಗೌಡ, ಕೃಷ್ಣ ಮರಾಠಿ, ತಿಲಕ್ ನಾಯ್ಕ, ಸ್ತ್ರೀ ಪಾತ್ರದಲ್ಲಿ ಸತ್ಯಭಾಮೆಯಾಗಿ ಸದಾಶಿವ ಭಟ್ಟ ಯಲ್ಲಾಪುರ, ಸುಭದ್ರೆಯಾಗಿ ಮಹಾವೀರ ಜೈನ್ , ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ ಮದ್ದಲೆ: ಪರಮೇಶ್ವರ ಹೆಗಡೆ, ತಾರೇಸರ, ಚಂಡೆ: ದಿನೇಶ ಮರಾಠಿ ಇವರು ನಿರ್ವಹಿಸಿದ್ದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು “ಸುಭದ್ರಾ ಕಲ್ಯಾಣ” ಯಕ್ಷಗಾನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆಯವರಿಂದ ಎಲ್ಲರಿಗೂ ಕೃತಜ್ಞತೆಯ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
Leave a Comment