ಹೊನ್ನಾವರ: `ಹಿಂದೂ ಧರ್ಮದ ಹೊಸ ವರ್ಷವೆಂದರೆ ಅದು ಯುಗಾದಿ ನಾವೆಲ್ಲರು ಒಂದಾಗಿರಬೇಕು,ನಮ್ಮಲ್ಲಿ ದ್ವೇóಷ,ಅಸೂಯೆ ಬೇಡ ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ’ ಎಂದು ನಿಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವರ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಹೇಳಿದರು. ತಾಲೂಕಿನ ಮಾವಿನಕುರ್ವಾದಲ್ಲಿ ಸರಸ್ವತಿ ಗೆಳೆಯರ ಬಳಗ ಮಾವಿನಕುರ್ವಾ ಇವರ ಆಶ್ರಯದಲ್ಲಿ ತೃತೀಯ ವರ್ಷದ ಯುಗಾದಿ ಸಾಂಸ್ಕøತಿಕ ವೇದಿಕೆ ವತಿಯಿಂದ ಸಾಂಸ್ಕøತಿಕÀ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಕ್ಕೆ ಯಾವತ್ತು ಗೆಲುವಿದೆ. ಇಂದು ಗೋ ಸಂಪತ್ತು ನಶಿಸುತ್ತಿದೆ. ಗೋ ಸಂಪತ್ತಿನ ರಕ್ಷಣೆಗೆ ಮುಂದಾಗಬೇಕು. ಅಂತೇಯೆ ಮುಂದಿನ ದಿನಗಳಲ್ಲಿ ಈ ವೇದಿಕೆಯಲ್ಲಿ ಮಕ್ಕಳಿಗೆ ಮಾದರಿಯಾಗುವಂತೆ ತಂದೆ ತಾಯಿಗಳ ಪಾದಪೂಜೆ ಮಾಡುವ ಸಂಪ್ರದಾಯ ರೂಡಿಗಳನ್ನು ಆರಂಭಿಸಿ ಎಂದು ಕಿವಿಮಾತು ಹೇಳಿದರು. ಸೇಫ್ ಸ್ಟಾರ್ ಪೈನಾನ್ಸ ಅಧ್ಯಕ್ಷ ಜಿ.ಜಿ ಶಂಕರ್ ಮಾತನಾಡಿ ಮಾವಿನಕುರ್ವಾ ಜನತೆಯ 25 ವರ್ಷಗಳ ಕನಸಿನ ಕೂಸಾಗಿರುವ ಸೇತುವೆಯನ್ನು ಕಳೆದುಕೊಂಡು ಇಂದಿನ ಚಂದ್ರಮಾನ ಯುಗಾದಿ ಹಬ್ಬ ಆಚರಿಸುವಂತಹ ಸ್ಥಿತಿ ನಮ್ಮದು. ಮಾವಿನಕುರ್ವಾ ಜನತೆಗೆ ಬೆಲ್ಲಕ್ಕಿಂತ ಬೇವಿನ ಕಹಿಯೆ ಜಾಸ್ತಿಯಾಗಿದೆ. ದೇವರು ಕೊಟ್ಟರು ಪೂಜಾರಿ ನೀಡಿಲ್ಲದ ರೀತಿಯಾಯ್ತು ಎನ್ನುವ ಮೂಲಕ ಮಾವಿನಕುರ್ವಾ ಸೇತುವೆ ಸ್ಥಳಾಂತರವಾದ ವಿಷಯವನ್ನಿಟ್ಟು ಭೇಸರ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಯುವ ಮುಖಂಡ ಸುನಿಲ್ ನಾಯ್ಕ ಮಾತನಾಡಿ ಮಾವಿನಕುರ್ವಾ ಊರಿಗೆ ಅದರದ್ದೆ ಆದ ಇತಿಹಾಸವಿದೆ. ಇತಿಹಾಸ ಮನರಂಜನೆಯ ವಸ್ತುವಲ್ಲ. ಇಂದು ಮಾವಿನಕುರ್ವಾ ವ್ಯತಿರಿಕ್ತವಾಗಿ ನಡೆಯುತ್ತಿದೆ. ಇಲ್ಲಿ ಹಿಟ್ಲರ್ ಸಂಸ್ಕøತಿ ರಾರಾಜಿಸುತ್ತಿದೆ. ಇದನ್ನು ಹೋಗಲಾಡಿಸೋಣ ಎಂದು ಕರೆ ನೀಡಿದರು. ಇದೇ ಸಂದರ್ಬದಲ್ಲಿ ರಾಷ್ಟ್ರ ಮಟ್ಟದಯೋಗಾಶನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದ ಮಹೇಂದ್ರ ಗೌಡ, ಆರು ಬಾರಿ ರಾಷ್ಟ್ರ ಮಟ್ಟದ ಯೋಗಾ ಸ್ಪರ್ದೆಗೆ ಆಯ್ಕೆಯಾದ ಸುಚಿತ್ರಾ ನಾಯ್ಕ ಇವರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಎಮ್ ಜಿ ನಾಯ್ಕ, ಹರಿಶ್ಚಂದ್ರ ನಾಯ್ಕ, ಮಂಜು ಗೌಡ, ತ್ರಿವಿಕ್ರಮ ನಾಯ್ಕ, ನಾಗೇಶ ಗೌಡ, ಜಿಜಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಝೇಂಕಾರ್ ಮೆಲೊಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
Leave a Comment