ಹಳಿಯಾಳ: ಮನೆಯಲ್ಲಿನ ಟಿವಿ ಆನ್ ಮಾಡಲು ಸ್ವಿಚ್ ಹಾಕಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದ್ದರಿಂದ ವೃದ್ದೆಯೊರ್ವಳು ಸಾವನ್ನಪ್ಪಿರುವ ದುರ್ಘಟನೆ ಹಳಿಯಾಳ ತಾಲೂಕಿನ ಕೆರವಾಡ ಗ್ರಾಮದಲ್ಲಿ ನಡೆದಿದೆ. ತಂಗೆವ್ವಾ ತಿಮ್ಮಣ್ಣಾ ವಡ್ಡರ(60) ವಿದ್ಯುತ್ ಶಾಕ್ನಿಂದ ಸಾವಿಗಿಡಾದ ದುರ್ದೈವಿಯಾಗಿದ್ದಾಳೆ. ಘಟನೆ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದ್ದು ತಕ್ಷಣ ವೃದ್ದೆಯನ್ನು ಹಳಿಯಾಳ ಆಸ್ಪತ್ರೆಗೆ ಕರೆತರಲಾಯಿತಾದರು ಅದಾಗಲೆ ಆಕೆಯ ಪ್ರಾಣಪಕ್ಷಿ ಹಾರಿಹೊಗಿತ್ತು ಎಂದು ಆಕೆಯ ಅಳಿಯ ಸಾಮಾಜಿಕ ಹೊರಾಟಗಾರ ಈರಣ್ಣಾ ವಡ್ಡರ ಮಾಧ್ಯಮಕ್ಕೆ ತಿಳಿಸಿದರು. ಹಳಿಯಾಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪಿಎಸ್ಐ ಆನಂದಮೂರ್ತಿ ತನಿಖೆ ನಡೆಸುತ್ತಿದ್ದಾರೆ.
Leave a Comment