ಹೊನ್ನಾವರ:
ತಾಲೂಕಿನ ಮುಡ್ಕಣಿಯ ಗ್ರಾಮದ ತುಂಬೊಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮುರ್ತಿ ದೇವರ 5 ನೇ ವರ್ಷದ ವರ್ಧಂತಿ ಉತ್ಸವ ಎಪ್ರೀಲ್ 17 ರಂದು ನಡೆಯಲಿದೆ. ಬೆಳಿಗ್ಗೆ 10 ಘಂಟೆಯಿಂದ ದೇವತಾ ಪ್ರಾರ್ಥನೆ, ಶುದ್ದಿಕರ್ಮ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ. ಸತ್ಯನಾರಾಯಣ ಪೂಜೆ, ಅಧಿವಾಸ ಹೋಮ, ತತ್ವ ಹೋಮಾದಿಗಳು, ಪೂರ್ಣಾಹುತಿ, ಕುಂಭಾಭಿಷೇಕ. ಮಧ್ಯಾಹ್ನ ಪೂಜಾ, ಮಧ್ಯಾಹ್ನ ಬಲಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ವೈದಿಕ ಕಾರ್ಯಕ್ರಮ ನೇರವೆರಲಿದೆ. ಈ ಎಲ್ಲಾ ಕಾರ್ಯಕ್ರಮಗಳು ವೇ. ಮು. ಕಟ್ಟೆ ಶಂಕರ ಭಟ್ ಅವರ ಅದ್ವೈರ್ಯದಲ್ಲಿ ನಡೆಯಲಿದೆ.
Leave a Comment