ಹೊನ್ನಾವರ :
ಕರ್ನಾಟಕದ ಶ್ರೀಮಂತ ಚುನಾವಣಾ ಕ್ಷೇತ್ರಗಳಳ್ಲಿ ಒಂದಾಗಿರುವ ಭಟ್ಕಳ ವಿಧಾನಸಭಾ ಕ್ಷೇತ್ರವು ತುರುಸಿನ ಕಣವಾಗಿ ಮಾರ್ಪಟ್ಟಿದೆ. ಮುಸ್ಲಿಂ ಮತದಾರರು ಬಹುಸಂಖ್ಯಾತರಾಗಿದ್ದು ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಬಲ್ಲವರೆಂದು ಪ್ರತೀತಿ ಈ ಕ್ಷೇತ್ರಕ್ಕಿದೆ. ಇದುವರೆಗೆ ಜುಕಾಕೋ ಹಾಗೂ ಎಸ್.ಎಂ,ಯಯ್ಯಾರೆಂಬ ಇಬ್ಬರು ಮುಸ್ಲಿಂ ಅಭ್ಯರ್ಥಿಗಳು ಗೆದ್ದು ಸರಕಾರದಲ್ಲಿ ಮಂತ್ರಿಗಳೂ ಆಗಿದ್ದಿದೆ., ಕಳೆದ ಚುನಾವಣೆಯಲ್ಲಿ ಮಂಕಾಳ ವೈದ್ಯ ಪಕ್ಷೇತರರಾಗಿ ಆಯ್ಕೆಯಾಗಿ, ಕಾಂಗ್ರೆಸ್ ಸೇರಿ ಹಿಂದಿನ ಕಾಂಗ್ರೆಸ್ ಶಾಸಕರಾಗಿದ್ದ ಜೆ.ಡಿ.ನಾಯ್ಕರು ಸೋತು ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ವೈದ್ಯರಿಗೆ ಟಿಕೆಟ್ ಘೋಷಿಸಿದೆ. ಜೆಡಿಎಸ್ ಬಹುತೇಕ ಶಾಬಂದ್ರಿಯವರನ್ನು ಶಾಸಕರ ಸ್ಥಾನದಲ್ಲಿ ನೋಡುವ ಮನಸ್ಸು ಮಾಡಿದ್ದು ಬಿಜೆಪಿ, ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಸಂಘಟನೆಯನ್ನು ಬಲಪಡಿಸಿಕೊಂಡಿದ್ದøರೂ ತನ್ನ ಅಭ್ಯರ್ಧಿಯರೆಂದು ಘೋಷಿಸಲು ಹಿಂದೆ ಮುಂದೆ ನೋಡುತ್ತಿದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಜೆ.ಡಿ.ನಾಯ್ಕ, ಈಶ್ವರ ನಾಯ್ಕ, ಗೋವಿಂದ ನಾಯ್ಕ ಹಾಗೂ ಸುನೀಲ ನಾಯ್ಕ ಪ್ರಬಲರಾಗಿದ್ದು ಇವರಲ್ಲಿ ಸುನೀಲ ನಾಯ್ಕರಿಗೆ ಟಿಕೆಟ್ ಆಗಬಹುದೆಂದು ನಿರೀಕ್ಷಿಸಲಾಗಿದೆ. ನಾಮಧಾರಿ ಸಮಾಜದವರಾಗಿದ್ದಾರೆಂಬ ಕಾರಣದಿಂದ ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ ಎಂಬ ವಿಚಾರವೂ ಇದೆ. ಈಗಾಗಲೇ ಸುನೀಲ್ ನಾಯ್ಕ ಸಾಕಷ್ಟು ಓಡಾಡಿ ಖರ್ಚು ಕೂಡಾ ಮಾಡಿದ್ದಾರೆ. ಜೆ.ಡಿ.ನಾಯ್ಕ ಒಂದಾನು ವೇಳೆ ಟಿಕೆಟ್ ಗಿಟ್ಟಿಸಿದರೆ ಬಿಜೆಪಿ ನಾಲ್ಕನೇ ಸ್ಥಾನಕ್ಕೆ ಖಚಿತ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಬಿಜೆಪಿಯ ವರಿಷ್ಠರು ತಮ್ಮ ಪಂಚೇಂದ್ರಿಯಗಳನ್ನು ಸರಿಯಾಗಿಟ್ಟುಕೊಂಡು ವಿಚಾತ ಮಾಡಿದ್ದೇ ಆದಲ್ಲಿ ಪಕ್ಷದ ಕಟ್ಟಾ ಬೆಂಬಲಿಗರಾಗಿರುವ ಶೇರುಗಾರ ಸಮಾಜದ ಉಮೇಶ್ ನಾಯ್ಕ ಎಂಬ ಸಜ್ಜನನಿಗೆ ಟಕೆಟ್ ಕೊಡಬಹುದು., ಉಮೇಶ್ ನಾಯ್ಕ ಕೋಮುವಾದಿಯಲ್ಲ ಹಾಗೂ ಎಲ್ಲರೊಂದಿಗೆ ಬೆರೆಯುವ ಮೃದು ಭಾಷಿಯಾಗಿದ್ದಾರೆ.
ಇನ್ನೂಳಿದಂತೆ ಪಕ್ಷದ ಒಳ ಪಂಗಡಗಳ ಗುಂಪುಗಳು ತೀರ್ಮಾನಿಸುವಂತೆ ಟಕೆಟ್ ದೊರೆಯುವುದು ಟಿಕೆಟ್ನ ನಂತರ ಪತ್ರೆಕೆ ಕ್ಷೇತ್ರದ ಸಮಗ್ರ ಸಮೀಕ್ಷೆ ನೀಡಲಿದೆ.



Leave a Comment