ಹೊನ್ನಾವರ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.À 30-04-2018 ರಿಂದ 09-05-2018 ರವÀರೆಗೆ ಹೊನ್ನಾವರ ತಾಲೂಕಿನ ಕೆರೆಕೋಣನಲ್ಲಿರುವ ಡಾ|| ದಿನಕರದೇಸಾಯಿ ಗ್ರಂಥಾಲಯ, ಕೆರೆಕೋಣ ಇದರ ಆವಾರದಲ್ಲಿ, 6 ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ, ಇದಕ್ಕೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಚಿತ್ರಕಲೆ, ಜೇಡಿಮಣ್ಣಿನಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಯಕ್ಷಗಾನ, ಯೋಗ, ಮುಂತಾದ ಸೃಜನಾತ್ಮಕ ಕ್ರಿಯಾತ್ಮಕ, ಚಟುವಟಿಕೆಗಳನ್ನು ನೀಡುತ್ತಿದ್ದು ಆಸಕ್ತಿ ಹೊಂದಿರುವ ಮಕ್ಕಳು ದಿ.À 29-04-2018ರ ಒಳಗೆ ತಮ್ಮ ಬಯೋಡಾಟಾದೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬ್ಯಾಂಕ ರಸ್ತೆ, ವಿ. ಎನ್. ಪೈ. ಬಿಲ್ಡಿಂಗ್ ಹೊನ್ನಾವರ ಇವರಿಗೆ ಸಲ್ಲಿಸುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08387-222023 ಅಥವಾ 08387-262158, 9480789435 ಇವರನ್ನು ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
Leave a Comment