ಹಳಿಯಾಳ:- ಮಹಿಳಾ ಕ್ಯಾನ್ಸರ ತೊಂದರೆ ಕುರಿತು ಜಾಗೃತಿ ಮೂಡಿಸುವ ಸಂದೇಶದೊಂದಿಗೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಕಾರದಿಂದ ಟೈಮ್ಸಗ್ರೂಫ್ ನವರು “ಟೈಮ್ಸ್ ವುಮೇನ್ಸ್ ಕಾರ ರ್ಯಾಲಿ”ಯನ್ನು ಆಯೋಜಿಸಿದ್ದು ಈ ರ್ಯಾಲಿಯು ಸೋಮವಾರ ಹಳಿಯಾಳ ಪಟ್ಟಣದ ರುಡಸೇಟ್ಗೆ ಭೆಟಿ ನೀಡಿ ಮುಂದೆ ಸಾಗಿತು. ಸುಮಾರು 600 ಕಿ.ಮಿ. ಕ್ರಮಿಸುವ ರ್ಯಾಲಿ ಬೆಂಗಳೂರು, ಶಿವಮೊಗ್ಗ, ಶಿರಸಿ, ಯಲ್ಲಾಪೂರ, ಹಳಿಯಾ¼,À ದಾಂಡೇಲಿ ಮೂಲಕ ಗೋವಾ ತಲುಪಲಿದೆ. ಇಲ್ಲಿಯವರೆಗೆ ಈ ಗ್ರೂಪ ಅಂದಾಜು 500 ಕ್ಯಾನ್ಸರ ಪೀಡಿತ ಹೆಣ್ಣು ಮಕ್ಕಳ ಚಿಕಿತ್ಸೆಗೆ ನೆರವಾಗುವ ಮೂಲಕ ಸಹಾಯ ಹಸ್ತ ಚಾಚಿದೆ. ಈ ರ್ಯಾಲಿಯು ಹಳಿಯಾಳಕ್ಕೆ ಭೇಟಿ ನೀಡುವ ಮೂಲಕ ಕ್ಯಾನ್ಸರ ಕುರಿತು ಜನಜಾಗೃತಿಯನ್ನು ಮೂಡಿಸಿತು.
Leave a Comment