ಹೊನ್ನಾವರ .ಕರ್ನಾಟಕದ ಎಲ್ಲೆಡೆ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಆಧಾರದಲ್ಲಿ ಮತ ಯಾಚಿಸಿದ್ದೇವೆ.ಜಿಲ್ಲೆಯಲ್ಲಿ ಸಚಿವ ಆರ್ ವಿ ದೇಶಪಾಂಡೆ ನೇತ್ರತ್ವದಲ್ಲಿ ಮತ ಯಾಚಿಸಿದ್ದೇವೆ.ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನವನ್ನು ಶಾಸಕಿ ಶಾರದಾ ಶೆಟ್ಟಿಯವರು ತಂದು ಅಭಿವೃದ್ದಿಯ ಹರಿಕಾರರಾಗಿದ್ದಾರೆ ಎಂದು ಜಿ.ಪಂ.ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.
ಅವರು ಪಟ್ಟಣzಲ್ಲಿÀ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ದಿಯ ಆಧಾರದಲ್ಲಿ ನಾವು ಎಲ್ಲೆಡೆ ಮತ ಯಾಚಿಸುತ್ತಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ.ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಲ್ಲಿದೇ ಶಾಸಕಿ ಶಾರದಾ ಶೆಟ್ಟಿ ಗೆಲ್ಲಿಸಲು ನಾವೆಲ್ಲಾ ಶ್ರಮಿಸುತ್ತಿದ್ದೇವೆ.ಅವರು ಮತ್ತೊಮ್ಮೆ ಗೆಲವುವಿನ ನಗೆ ಬೀರುತ್ತಾರೆ.ಕ್ಷೇತ್ರದ ಸರ್ವತ್ತೋಮುಖ ಅಭಿವೃದ್ದಿಗೆ ಮುಂದೆಯು ಶ್ರಮಿಸಲಿದ್ದಾರೆ. ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲರೂ ಸೇರಿ ಒಮ್ಮತದಿಂದ ಮತ ಯಾಚಿಸುತ್ತಿದ್ದೇವೆ. ಆದರೆ ವಿರೋಧಿ ಪಕ್ಷದವರು ನಮ್ಮ ಪಕ್ಷದಲ್ಲಿ ಭಿನ್ನಮತವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೇವಾಲಯಕ್ಕೆ ಹೋದಾಗ ಕಾರ್ಯಕ್ರಮದಲ್ಲಿ ಕುಳಿತ ಫೋಟೊಗಳನ್ನು ಹರಿಬೀಡುತ್ತಿದ್ದಾರೆ.ಇದೆಲ್ಲಾ ಸತ್ಯಕ್ಕೆ ದೂರವಾಗಿದೆ ಎಂದರು.
ಶಾಸಕಿ ಶಾರದಾ ಶೆಟ್ಟಿ ಮಾತನಾಡಿ,ಕ್ಷೇತ್ರದ ಜನರು ಕಳೆದ ಚುನಾವಣೆಯಲ್ಲಿ ಅಭಿಮಾನದಿಂದ ಜನಾಶೀರ್ವಾದ ಮಾಡಿ ನನ್ನನ್ನು ಶಾಸಕಿಯನ್ನಾಗಿ ಮಾಡಿದರು. ನಾನು ಕ್ಷೇತ್ರದ ಮೂಲ ಭೂತ ಸೌಕರ್ಯಗಳನ್ನು ಹಂತ ಹಂತವಾಗಿ ನಿರಂತರವಾಗಿ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ.ಈ ಬಾರಿಯು ನನ್ನ ಗೆಲುವು ನಿಶ್ಚಿತ.ವಿರೋಧಿಗಳು ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷ ಮಹಾ ಸಮುದ್ರವಿದ್ದಂತೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಹೋರಾಡುತ್ತೇವೆ,ಕ್ಷೇತ್ರದಲ್ಲಿ ಕಾಂಗ್ರೇಸ್ ಪರ ಅಲೆಯಿದೆ.1200 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಜನರು ಇದನ್ನು ಅಭಿಮಾನದಿಂದ ನೆನೆಯುತ್ತಿದ್ದಾರೆ ಎಂದರು.
ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ,ಶಾಸಕಿ ಶಾರದಾ ಶೆಟ್ಟಿಯವರು ಕ್ಷೇತ್ರದ ಜನತೆಗೆ ಜನಪರ ಕಾರ್ಯಕ್ರಮಗಳು ಮುಟ್ಟಿಸಿದ್ದಾರೆ.ಇದರ ಪರ ಮತದಾರರ ಒಲವಿದೆ ಅವರಗೆಲವು ನಿಶ್ಚಿತ.ಪಕ್ಷ ಅಖಂಡವಾಗಿದೆ,ಶಕ್ತಿಯುತವಾಗಿದೆ,ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು
ಪ.ಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ,ಉಪಾಧ್ಯಕ್ಷೆ ಶರಾವತಿ ಮೇಸ್ತ,ಸದಸ್ಯರಾದ ತುಳಸಿದಾಸ್ ಪುಲಕರ್,ರವೀಂದ್ರ ನಾಯ್ಕ,ಜೈನಾಬಿ ಇಸ್ಮಾಯಿಲ್ ಶೇಖ್,ಜಮಿಲಾ ಶೇಖ್,ಜೋಸ್ಬಿನ್ ಡಯಾಸ್,ತಾಲೂಕಾ ಪಂಚಾಯತ್ ಸದಸ್ಯರಾದ ಲಕ್ಷ್ಮೀ ಗೊಂಡ,ರೂಪಾ ಗೌಡ,ಮುಖಂಡರಾದ ಅರುಣ ನಾಯ್ಕ,ದಯಾನಂದ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Leave a Comment