ಹೊನ್ನಾವರ:
ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ವತಿಯಿಂದ ಹೊನ್ನಾವರ ತಾಲೂಕಿನ ಹಡಿನಬಾಳ ಸರಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿಧ್ಯಾರ್ಥಿಗಳಿಗೆ ಉಚಿತ ನೊಟ್ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಳೆದ ಕೆಲದಿನಗಳ ಹಿಂದೆ ಹಡಿನಬಾಳಕ್ಕೆ ಭೇಟಿ ನೀಡಿದ ಸಂಧರ್ಬದಲ್ಲಿ ಶಾಸಕ ಸುನಿಲ್ನಾಯ್ಕ 8ನೇ ತರಗತಿಗೆ ಪ್ರವೇಶ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೊಟ್ಬುಕ್ ನೀಡುವ ಬಗ್ಗೆ ಭರವಸೆ ನೀಡಿದ್ದರು. ಈ ಪ್ರಯುಕ್ತ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಂದ ಪ್ರತಿ ವಿಧ್ಯಾರ್ಥಿಗಳಿಗೆ ಆರು ನೋಟ್ ಬುಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಕುರಿತು ತಾಲೂಕಾ ಪಂಚಾಯತ ಸದಸ್ಯ ಆರ್. ಪಿ. ನಾಯ್ಕ ಮಾತನಾಡಿ ಈ ಶಾಲೆಯ ಶಿಕ್ಷಕ ವರ್ಗ ಕ್ರೀಯಾಶಿಲರಾಗಿ ಕಾರ್ಯ ನಿರ್ವಹಿಸುತ್ತಿದೆ.ಅತಿಹೆಚ್ಚು ವಿಧ್ಯಾರ್ಥಿಗಳನ್ನು ಹೊಂದಿರುವ ಶಾಲೆ ಇದಾಗಿದೆ.ಶಾಸಕ ಸುನಿಲ್ ನಾಯ್ಕ ಪ್ರಥಮವಾಗಿ ನಮ್ಮ ಶಾಲೆಗೆ ಭೇಟಿ ನೀಡಿದ ಸಂಧರ್ಬದಲ್ಲಿ ವಿಧ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸುವ ಬಗ್ಗೆ ಭರವಸೆ ನೀಡಿದಂತೆ ಅವರು ಪೂರೈಸಿದ್ದಾರೆ.ಯಾವುದೇ ಸಂಧರ್ಬದಲ್ಲಿ ಶಾಲೆಯ ಬಡ ವಿಧ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವುದಾಗಿ ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದೆನ್ನುವುದು ಅವರ ಬಯಕೆಯಾಗಿದೆ ಎಂದರು.
ಹಡಿನಬಾಳ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಹುಡಗೋಡ ಮಾತನಾಡಿ, ಇಂತಹ ಕಾರ್ಯಕ್ರಮ ಅರ್ಥಪೂರ್ಣವಾದದು, ಇಂದಿನ ಮಕ್ಕಳೆ ರಾಷ್ಟ್ರದ ಆಸ್ತಿ, ಈ ಶಾಲೆಗೆ ಬರುವವರೆಲ್ಲ ಆಗರ್ಭ ಶ್ರೀಮಂತರ ಮಕ್ಕಳಲ್ಲ, ತಂದೆ ತಾಯಿಗಳು ಕೂಲಿನಾಲಿ ಮಾಡಿ ಕನಸನ್ನು ಹೊತ್ತಿ ಶಾಲೆಗೆ ಕಳುಹಿಸುತ್ತಾರೆ ವಿಧ್ಯಾರ್ಥಿಗಳಾದ ನೀವು ಅವರ ಕನಸನ್ನು ನನಸು ಮಾಡಿ ನೀತಿವಂತರಾಗಿ,ಸದ್ಗುಣವಂತರಾಗಿ,ಪರೋಪಕಾರಿಗಳಾಗಿ ಎಂದು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಪರೂಪದ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ ಇಂದು ನಮ್ಮ ಕ್ಷೇತ್ರದ ಶಾಸಕರಾಗಿರುವುದು ನಮ್ಮ ಭಾಗ್ಯ ತಮ್ಮ ಸಹಾಯ ಹಸ್ತ ಈ ಶಾಲೆಗೆ ಯಾವಾಗಲು ಇರುತ್ತದೆ ಎಂದರು.
ಈ ಸಂಧರ್ಬದಲ್ಲಿ ಗ್ರಾ.ಪಂ ಸದಸ್ಯ ಗಣೇಶ ನಾಯ್ಕ, ಶಾಲಾ ಮುಖ್ಯೋದ್ಯಾಪಕÀ ಎಸ್.ಆರ್. ನಾಯ್ಕ, ಶಿಕ್ಷಕ ಆರ್ .ಟಿ. ನಾಯ್ಕ , ಶಾಲಾ ಪೂರ್ವ ವಿಧ್ಯಾರ್ಥಿ ಸಂತೋಷ ನಾಯ್ಕ, ರಮೇಶ ನಾಯ್ಕ, ವಿದ್ಯಾರ್ಥಿಗಳ ಪಾಲಕ ಪೋಷಕರು ಹಾಜರಿದ್ದರು.
Leave a Comment