ಹೊನ್ನಾವರ .“ಇಂದು ಮಹಿಳೆಯರಿಂದಲೇ ಮಹಿಳೆಯರಿಗೆ ಶೋಷಣೆಯಾಗುತ್ತಿದೆ ಹೆಣ್ಣು ಶಿಶುವಿನ ಜೀವಂತ ಸಮಾಧಿ ಒಂದು ಹೆಣ್ಣಿನÀ ಸಹಕಾರದಿಂದಲೇ ನಡೆಯುತ್ತಿದೆ ಎಂದರೆ ಅದು ದುರದ್ರಷ್ಟಕರ ಸಂಗತಿ ಇದನ್ನು ಎಲ್ಲರು ಖಂಡಿಸಬೇಕು” ಎಂದು ಸಿಡಿಪಿಒ ತ್ರಿವೇಣಿ ಯಾಜಿ ಕರೆ ನಿಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಶಿಸು ಅಭಿವ್ರದ್ದಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹೊನ್ನಾವರ ಶಿಸು ಅಭಿವ್ರದ್ದಿ ಇಲಾಖೆಯಲ್ಲಿ À
ನಡೆದ ಭೇಟಿ ಭಚಾವೋ ಭೆಟಿ ಪಡಾವೋ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು . ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅದ್ಯಕ್ಷೆ ಪದ್ಮಾ ಪಾಟಿಲ್ರವರು ಪ್ರಸ್ತಾವಿಕವಾಗಿ ಮಾತನಾಡಿ ಮಕ್ಕಳ ಹಿತರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಜಾರಿ ತಂದಿದ್ದೇವೆ, ಅಂತೆಯೆ ಬಾಲ ನ್ಯಾಯ ಮಂಡಳಿಯನ್ನು ಜಾರಿ ತಂದಿದ್ದೇವೆ. 18 ವರ್ಷದ ಒಳಗಿನ ಗಂಡು ಅಥವಾ ಹೆಣ್ಣು ಮಕ್ಕಳಾಗಿರಲಿ ಅವರ ಮೇಲೆ ಆಗುವ ದೌರ್ಜನ್ಯ ಹೇಗೆ ತಡೆಯಬೇಕು ಈ ಕುರಿತು ಇರುವ ಕಾಯಿದೆಗಳ ಬಗ್ಗೆ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೆರಿಸಿದ ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಣ ಅಧಿಕಾರಿ ಯಶ್ವಂತ ಧುರಿ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ನಂತರ ಶಿಸು ಅಭಿವ್ರದ್ದಿ ಇಲಾಖೆ ಅಧಿಕಾರಿ ತ್ರಿವೇಣಿ ಯಾಜಿ ಮಾತನಾಡಿ ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ, ಅದರಲ್ಲು ಮಹಿಳೆಯರಿಂದಲೇ ಮಹಿಳೆಯರಿಗೆ ಶೋಷಣೆಯಾಗುತ್ತಿದೆ. ಗಂಡು ಮಗುವಿನ ಮೇಲಿನ ವ್ಯಾಮೋಹಕ್ಕೆ ಒಳಗಾಗಿ ಹೆಣ್ಣು ಭ್ರೂಣ ಹತ್ಯೆಯಂತಹ ಹೀನ ಕೃತ್ಯಗಳು ನಡೆಯುತ್ತಿದೆ.ಇದನ್ನು ಎಲ್ಲರು ಖಂಡಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ತರಬೇತಿ ಉಪನ್ಯಾಸಕರಾಗಿ ಆಗಮಿಸಿದ ಸಿಸ್ಟರ್ ಲೀನಾ, ನ್ಯಾಯವಾದಿ ಶರಾವತಿ ಹೆಗಡೆ, ಶರಾವತಿ ಮಹಾ ವೇದಿಕೆ ಅದ್ಯಕ್ಷೆ ಅನಿತಾ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment