• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಸ್ ನಿಲ್ದಾಣದ ಎದುರಿಗೆ ಪುರಸಭೆಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಳಿಂದ ಆಗ್ರಹ

July 6, 2018 by Yogaraj SK Leave a Comment

ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರಿನ ಇಕ್ಕಟ್ಟಾದ ಚಿಕ್ಕ ಸ್ಥಳದಲ್ಲಿ ಗಟಾರವನ್ನು ಬಳಸಿ ನಿಯಮಾವಳಿಯನ್ನು ಗಾಳಿಗೆ ತೂರಿ ಪುರಸಭೆಯಿಂದ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆ ಕಾಮಗಾರಿಯನ್ನು ತಕ್ಷಣ ಕೈಬಿಡಬೇಕೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ಆಗ್ರಹಿಸಿದ್ದಾರೆ.  ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ಆಟೋ ರೀಕ್ಷಾ ಸಂಘ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನೀಕರು ಇಲ್ಲಿಯ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರಿಗೆ ಬಳಿಕ ತಹಶೀಲ್ದಾರ್ ವಿದ್ಯಾಧರ, ಪೋಲಿಸ್ ವೃತ್ತ ನೀರಿಕ್ಷಕರಿಗೆ, ಪುರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು ಅಲ್ಲದೇ ಮನವಿಯ ಪ್ರತಿಗಳನ್ನು ಸಚಿವ ಆರ್.ವಿ.ದೇಶಪಾಂಡೆ, ವಿಪಸದಸ್ಯ ಎಸ್.ಎಲ್.ಘೊಟ್ನೇಕರ, ಜಿಲ್ಲಾಧಿಕಾರಿ ಹಾಗೂ ಕೆಎಸ್‍ಆರ್‍ಟಿಸಿ ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ.  ಮನವಿಯಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಎದುರಿಗೆ ನಿಲ್ದಾಣಕ್ಕೆ ತಾಗಿ ಗಟಾರು ಜಾಗೆಯನ್ನು ಉಪಯೋಗಿಸಿ ಚಿಕ್ಕ ಅಂಗಡಿಗಳ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿದ್ದು ಇದು ಸಂಪೂರ್ಣ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ. ಹಳಿಯಾಳ ಪಟ್ಟಣ ವಾಣಿಜ್ಯ, ಶೈಕ್ಷಣಿಕ ಮತ್ತು ಔಧ್ಯಮಿಕ ಕೇಂದ್ರವಾಗಿ ಬೆಳೆದಿದ್ದು ಜನಸಂದನಿ ದಿನೆ ದಿನೆ ಹೆಚ್ಚುತ್ತಿದೆ ವಿದ್ಯಾರ್ಥಿಗಳು ಮತ್ತು ವ್ಯಾಪಾರ ವ್ಯವಹಾರಗಳಿಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ಓಡಾಡುತ್ತಾರೆ.   ಪ್ರತಿ ದಿನ ಈ ನಿಲ್ದಾಣದ ಉಪಯೋಗ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ನಾಗರೀಕರ ಸಂಖ್ಯೆಯು 6 ರಿಂದ 8 ಸಾವಿರ ಇದ್ದು ನೂರಾರು ವಾಹನಗಳು ಸಂಚರಿಸುತ್ತವೆ ಇದರಿಂದ ಹಲವಾರು ಬಾರಿ ಟ್ರಾಫಿಕ್ ಜಾಮ್ ಆಗುತ್ತದೆ ಅಲ್ಲದೇ ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು ಇಲ್ಲಿ ಸಂಚರಿಸುವುದು ಸಾಹಸದ ಕೆಲಸವಾಗಿದೆ ಎಂದಿರುವ ಅವರು ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡುವುದರಿಂದ ಓಡಾಡುವ ಬಸ್‍ಗಳಿಗೆ ಬೇರೆ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ತುಂಬಾ ಇಕ್ಕಟ್ಟಾದ ಸ್ಥಳ ಉಳಿದು ಸಂಚಾರಕ್ಕೆ ಪ್ರತಿನಿತ್ಯ ಅಡಚಣೆ ಉಂಟಾಗುತ್ತಿರುವ ಸಂದರ್ಭದಲ್ಲಿಯೂ ಇಂತಹ ಇಕ್ಕಟ್ಟಾದ ಸ್ಥಳದಲ್ಲಿ ಈಗ ಪುರಸಭೆ ಕಾಮಗಾರಿ ಪ್ರಾರಂಭಿಸಿರುವುದು ಮೂರ್ಖತನವಾಗಿದ್ದು ಅಂಗಡಿ ಸಂಕೀರ್ಣ ನಿರ್ಮಿಸಿದ್ದೇ ಆದರೆ ಇನ್ನು ಭಾರೀ ಸಂಚಾರ ಸಮಸ್ಯೆ, ಭಾರೀ ಅಪಘಾತಗಳ ಸ್ಥಳವಾಗಿ ಮಾರ್ಪಾಟಾಗುವುದರಲ್ಲಿ ಸಂದೇಹವಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಕೂಡಲೇ ಈ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.  ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರನ್ನು ಭೇಟಿ ಮಾಡಿದ ಪ್ರತಿಭಟನಾಕರರ ಅಹವಾಲು ಸ್ವೀಕರಿಸಿದ ಅಧ್ಯಕ್ಷರು ಈ ಬಗ್ಗೆ ಪುರಸಭೆಯ ಸರ್ವ ಸದಸ್ಯರ, ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.  ಮನವಿ ಸಲ್ಲಿಸುವಾಗ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಲಾಸ ಕಣಗಲಿ, ಹಿರಿಯ ನಾಗರೀಕ ವೇದಿಕೆಯ ಡಿ.ಎಮ್‍ಸಾವಂತ, ಜಿಡಿ ಗಂಗಾಧರ, ಬಸವರಾಜ ಉಪ್ಪಿನ, ಎಚ್‍ಕೆ ಪಾಟಿಲ, ಅಶೋಕ ಕಣಿಮೆಹಳ್ಳಿ, ಎಸ್‍ಜಿ ಕಡೆಮನಿ, ಚಂದ್ರಕಾಂತ ಗೊಂಧಳಿ, ವಿನೋದ, ರೀಕ್ಷಾ ಸಂಘದ ಬಾಬು ಮಾದರ, ಕುಮಾರ ಕಲಬಾವಿ, ಸತ್ತಾರ ಶೇಖ, ನಾಗರಾಜ, ಚಂದ್ರು ಕಟ್ಟಿಮನಿ, ಆಕಾಶ ಚಲವಾದಿ, ಆಸಿಫ ಮುಲ್ಲಾ, ರಿಯಾಜ ಮುನವಳ್ಳಿ ಮೊದಲಾದವರು ಇದ್ದರು.

watermarked 6 hly 1 ಬಸ್ ನಿಲ್ದಾಣದ ಎದುರಿಗೆ ಪುರಸಭೆಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಳಿಂದ ಆಗ್ರಹ ,Haliyal bus stand BUILDING WORK,

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Other, Trending Tagged With: Haliyal bus stand BUILDING WORK, ಅಂಗಡಿ ಮಳಿಗೆ ಕಾಮಗಾರಿ, ಅವೈಜ್ಞಾನಿಕ ಕಾಮಗಾರಿ, ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿರುವ, ಆಟೋ ರೀಕ್ಷಾ ಸಂಘ, ಇಕ್ಕಟ್ಟಾದ ಚಿಕ್ಕ ಸ್ಥಳ, ಇಕ್ಕಟ್ಟಾದ ಸ್ಥಳ ಉಳಿದು, ಇತರ, ಕರ್ನಾಟಕ ರಕ್ಷಣಾ ವೇದಿಕೆ, ಕೂಡಲೇ ನಿಲ್ಲಿಸುವಂತೆ, ಗಟಾರವನ್ನು ಬಳಸಿ ನಿಯಮಾವಳಿ, ಗಾಳಿಗೆ ತೂರಿ, ಜಯ ಕರ್ನಾಟಕ ಸಂಘಟನೆ, ತಹಶೀಲ್ದಾರ್ ವಿದ್ಯಾಧರ, ದೊಡ್ಡ ಪ್ರಮಾಣದಲ್ಲಿ ದ್ವಿಚಕ್ರ ವಾಹನ, ಪುರಸಭೆ ಅಧ್ಯಕ್ಷರಿಗೆ ಮನವಿ, ಪುರಸಭೆಯಿಂದ, ಪುರಸಭೆಯಿಂದ ನಡೆದಿರುವ, ಪೋಲಿಸ್ ವೃತ್ತ ನೀರಿಕ್ಷಕರಿಗೆ, ಬಸ್ ನಿಲ್ದಾಣದ ಎದುರಿಗೆ, ಭಾರೀ ಅಪಘಾತಗಳ ಸ್ಥಳ, ಭಾರೀ ಸಂಚಾರ ಸಮಸ್ಯೆ, ವಿವಿಧ ಸಂಘಟನೆಳಿಂದ ಆಗ್ರಹ, ಶೈಕ್ಷಣಿಕ ಮತ್ತು ಔಧ್ಯಮಿಕ ಕೇಂದ್ರ, ಸಂಘಟನೆಗಳ ನೇತೃತ್ವ, ಸಂಚಾರಕ್ಕೆ ಪ್ರತಿನಿತ್ಯ ಅಡಚಣೆ, ಸಾರ್ವಜನೀಕರು, ಹಳಿಯಾಳ ಪಟ್ಟಣ ವಾಣಿಜ್ಯ, ಹಿರಿಯ ನಾಗರಿಕರ ವೇದಿಕೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...