• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರದಲ್ಲಿ ಬಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಸಕ ಸುನೀಲ ನಾಯ್ಕ ಅವರಿಗೆ ಮನವಿ

July 16, 2018 by Gaju Gokarna Leave a Comment

ಹೊನ್ನಾವರ : ತಾಲೂಕಿನ ಕಾಸರಕೋಡ, ಮಾವಿನಕುರ್ವಾ, ಗುಂಡಬಾಳ, ಖರ್ವಾ ಹಾಗೂ ಗೇರುಸೊಪ್ಪಾ ಭಾಗದಲ್ಲಿ ದಿನದಲ್ಲಿ ಹೆಚ್ಚಿನ ಸಮಯ ವಿದ್ಯುತ್ ಪೂರೈಕೆÉ ಇಲ್ಲದಿರುವುದನ್ನು ಸಾರ್ವಜನಿಕರು ಶಾಸಕರ ಬಳಿ ತೊಡಿಕೊಂಡರು. ಈ ವಿದ್ಯುತ್ ಸಮಸ್ಯೆ ಕುರಿತು ಭಟ್ಕಳ-ಹೊನ್ನಾವರ ಶಾಸಕ ಸುನೀಲ ಬಿ.ನಾಯ್ಕ ಹೆಸ್ಕಾಂ ಹುಬ್ಬಳ್ಳಿ ವಿಭಾಗದ ಅಧಿಕಾರಿಯವರನ್ನು ಸಂಪರ್ಕಿಸಿ ಒಂದುವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿ ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕಾ ಪಂಚಾಯತದ ಶಾಸಕರ ಕಾರ್ಯಾಲಯದಲ್ಲಿ ಶಾಸಕ ಸುನೀಲ ನಾಯ್ಕ ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಬಸ್ ಸಮಸ್ಯೆ ಕುರಿತು ಮನವಿ ಸಲ್ಲಿಸಿದರು. ಪಟ್ಟಣದ ಪ್ರಭಾತ ನಗರದ ಕಾಲೇಜು ಬಳಿಯಿಂದ ಬಸ್ ನಿಲ್ದಾಣದ ವರೆಗೆ ಟಿಕೆಟ್ ಮಾಡಲಾಗುತ್ತಿದೆ. ಪಾಸ್ ಅನುಮತಿ ನೀಡುತ್ತಿಲ್ಲ. ಅದ್ದರಿಂದ ಬಸ್ ನಿಲ್ದಾಣ ಹಾಗೂ ಕಾಲೇಜು ವರೆಗೆ ಹೋಗಲು ಹಾಗೂ ಬರಲು ಪಾಸ್‍ಗೆ ಅನುಮತಿ ನೀಡಬೇಕು ಎಂದು ಎಬಿವಿಪಿ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಕುರಿತು ಗಮನಕ್ಕೆ ತಂದರು. ಬಸ್ ನಿಲ್ದಾಣದ ಮೇಲ್ವಿಚಾರಕರು ಡಿಫೋ ದಿಂದ ಈ ಬಗ್ಗೆ ಆದೇಶವಾಗಿದೆ. ಮೇಲಾಧಿಕಾರಿಯವರನ್ನು ಸಂಪರ್ಕಿಸಿ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಶಾಸಕ ಸುನೀಲ ನಾಯ್ಕ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದ ಸಾರ್ವಜನಿಕರು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 8 ಜನರು ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕ ಸುನೀಲ ನಾಯ್ಕ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 25 ಅರ್ಜಿಗಳು ಬಂದಿದ್ದು ಎಲ್ಲ ಅರ್ಜಿಗಳನ್ನೂ ತಾನೇ ಖುದ್ದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಹೆಚ್ಚಿನ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಳೆದ ಶಾಸಕರ ಅವಧಿಯಲ್ಲಿನ 64 ಫೈಲ್‍ಗಳು ದಾಖಲೆ ಪತ್ರಗಳಿಲ್ಲದೇ ಹಾಗೇ ಉಳಿದಿವೆ. ಕಂಪ್ಯೂಟರ್‍ದಲ್ಲಿ ಹೆಸರು ತೋರಿಸುತ್ತದೆ. ಆದರೆ ದಾಖಲೆಪತ್ರಗಳಿಲ್ಲ. ಈ ಅರ್ಜಿಗಳನ್ನು ಸರಿಪಡಿಸಿ ಫಲಾನುಭವಿಗಳಿಗೆ ಪ್ರಯೋಜನ ದೊರಕಿಸುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳುವುದಾಗಿ ತಿಳಿಸಿದರು.
ಉಪ್ಪೋಣಿ ಗ್ರಾ,ಪಂ. ಪಿಡಿಓ ವಾರ್ಡ್ ಸಭೆ ನಡೆಸದೇ ಗ್ರಾಮ ಸಭೆ ನಡೆಸಿರುವ ಬಗ್ಗೆ ಅಲ್ಲಿಯ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು. ತಕ್ಷಣ ವಾರ್ಡ್ ಸಭೆ ನಡೆಸಿ ನಂತರ ಗ್ರಾಮ ಸಭೆ ನಡೆಸುವಂತೆ ಪಿಡಿಓ ಅವರಿಗೆ ಶಾಸಕರು ತಾಕೀತು ಮಾಡಿದರು. ಕಂದಾಯ ಇಲಾಖೆ, ಪಹಣಿ ಲೋಪದೋಷ, ಸರ್ವೇ ಇಲಾಖೆ ಮತ್ತಿತರ ಇಲಾಖೆಗಳ ಸಮಸ್ಯೆಗಳ ಕುರಿತು ಸಾರ್ವಜನಿಕರು ಶಾಸಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಉಲ್ಲಾಸ ಶಾನಭಾಗ, ಕೇಶವ ನಾಯ್ಕ ಬಳಕೂರ್, ಶಂಭು ಬೈಲಾರ್, ಗಣಪತಿ ನಾಯ್ಕ ಬಿ.ಟಿ,ಮಂಜುನಾಥ ನಾಯ್ಕ, ವಿಘ್ನೇಶ ಹೆಗಡೆ ಇತರರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಆಗ್ರಹಿಸಿ, ಕಂದಾಯ ಇಲಾಖೆ, ಖರ್ವಾ, ಗುಂಡಬಾಳ, ಗೇರುಸೊಪ್ಪಾ, ಗ್ರಾಮ ಸಭೆ, ನಡೆಸಿ, ನಂತರ, ಪಹಣಿ ಲೋಪದೋಷ, ಪ್ರಭಾತ ನಗರದ ಕಾಲೇಜು, ಬಸ್ ನಿಲ್ದಾಣ, ಬಸ್ ಸಮಸ್ಯೆ ಕುರಿತು ಮನವಿ, ಬಸ್ ಸಮಸ್ಯೆ ಬಗೆಹರಿಸುವಂತೆ, ಬಳಿಯಿಂದ, ಮನವಿ, ಮಾವಿನಕುರ್ವಾ, ವಾರ್ಡ್ ಸಭೆ, ವಿದ್ಯಾರ್ಥಿಗಳು, ಶಾಸಕ ಸುನೀಲ ನಾಯ್ಕ, ಸರಕೋಡ, ಸರ್ವೇ ಇಲಾಖೆ, ಸಾವಿರಾರು ಕಾಲೇಜು ವಿದ್ಯಾರ್ಥಿಗಳು, ಹೆಚ್ಚಿನ ಸಮಯ ವಿದ್ಯುತ್ ಪೂರೈಕೆ, ಹೆಸ್ಕಾಂ ಹುಬ್ಬಳ್ಳಿ ವಿಭಾಗ, ಹೊನ್ನಾವರದಲ್ಲಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar