• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೃತ್ತಿಯನ್ನು ಗೌರವಿಸಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. :- ದೈಹಿಕ ಶಿಕ್ಷಣ ಪರಿವೀಕ್ಷಕ ಸುಬ್ರಾಯ ಎನ್. ಗೌಡ

August 2, 2018 by Gaju Gokarna Leave a Comment

ಹೊನ್ನಾವರ .ನಾನು ನನ್ನ ವೃತ್ತಿ ಜೀವನವನ್ನು ತುಂಬಾ ಗೌರವಿಸಿದ್ದೇನೆ. ನನ್ನ ವೃತ್ತಿಗೆ ನಾನೆಂದು ನಿಷ್ಕಾಳಜಿ ಮಾಡಿಲ್ಲ. ಎಲ್ಲರೊಡನೆ ಬೆರೆತು, ಎಲ್ಲರೊಡನೆ ಸೇರಿ ನಾನು ಒಬ್ಬ ಸಣ್ಣ ವ್ಯಕ್ತಿಯೆಂದು ತಿಳಿದು ಕರ್ತವ್ಯ ಮಾಡಿದ್ದೇನೆ. ಇದೆ ನನ್ನ ಯಶಸ್ಸಿನ ಗುಟ್ಟು ಎಂದು ವಯೋನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಬ್ರಾಯ ಎನ್. ಗೌಡ ರವರು ನುಡಿದರು.  ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಭಾ ಭವನದಲ್ಲಿ ವಯೋನಿವೃತ್ತಿಯನ್ನು ಹೊಂದಿದ ಸುಬ್ರಾಯ ಎನ್. ಗೌಡ ರವರಿಗೆ ಅಭಿನಂದನಾ ಸಮಿತಿ ಮತ್ತು ವಿವಿಧ ಶಿಕ್ಷಕ ಸಂಘದ ಸಂಘಟನೆಗಳ ಸಹಕಾರದೊಂದಿಗೆ ನಡೆದ ಸಮಾರಂಭದಲ್ಲಿ  ಸನ್ಮಾನವನ್ನು ಪಡೆದು ಮಾತನಾಡಿದರು.  ಸುಬ್ರಾಯ ಎನ್. ಗೌಡರವರ ಕುರಿತು ಅಭಿನಂದನಾ ಗ್ರಂಥ “ಹಸನ್ಮುಖಿ” ಯನ್ನು ತಾಲೂಕಾ ಪಂಚಾಯತದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ಜಿ. ನಾಯ್ಕ ರವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಇವರು ಒಬ್ಬ ಅತ್ಯತ್ತಮ ಅಧಿಕಾರಿಯಾಗಿದ್ದರು. ಇವರ ಕರ್ತವ್ಯ ನಿಷ್ಠೆಯ ಬಗ್ಗೆ ತಾಲೂಕಿನಾದ್ಯಂತ ಉತ್ತಮ ಅಭಿಪ್ರಾಯ ಹೊಂದಿರುವುದರಿಂದ ಇಂದು ಅವರ ಕುರಿತು ಅಭಿನಂದನಾ ಗ್ರಂಥ ಹೊರತರುವಲ್ಲಿ ಸಹಕಾರಿಯಾಯಿತು. ಇದು ಅಧಿಕಾರಿ ಹಂತದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಉದಾಹರಣೆ ಎಂದು ನುಡಿದರು.  ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ವಹಿಸಿ ನನ್ನ ಕಾರ್ಯಾಲಯದ ಒಂದು ಸ್ಥಂಭ. ಇಂದು ವಯೋನಿವೃತಿಯಾಗುತ್ತಿರುವುದು ನಮಗೆಲ್ಲಾ ತುಂಬಲಾರದ ನಷ್ಟ. ನನ್ನ ಸೇವಾ ಅವಧಿಯಲ್ಲಿ ನಾಕಂಡ ಅಪರೂಪದ ಉತ್ತಮ ಸೌಜನ್ಯ ಮೂರ್ತಿಯ ಅಧಿಕಾರಿಗಳಲ್ಲಿ ಒಬ್ಬರು ಸನ್ಮಾನ್ಯ ಎಸ್.ಎನ್.ಗೌಡ ರವರು. ಆದುದರಿಂದಲೇ ಇಂದು ಇವರ ಬಗ್ಗೆ ಅಭಿನಂದನಾ ಗ್ರಂಥ ಹೊರತರಲು ಪ್ರೇರಣೆಯಾಯಿತು. ಹಾಗೂ ತಾಲೂಕಿನ ಪ್ರತಿಯೊಬ್ಬ ಶಿಕ್ಷಕರಲ್ಲಿ ಆತ್ಮೀಯತೆ, ಪ್ರೀತಿಯನ್ನು ಹೊಂದಿರುವಂತ ಇವರು ಸದಾ ಹಸನ್ಮುಖಿಯಾಗಿರುತ್ತಿದ್ದರು ಎಂದು ನುಡಿದರು.  ಸುಬ್ರಾಯ ಎನ್. ಗೌಡರವರ ಕುರಿತು ಸತೀಶ ನಾಯ್ಕ, ಎನ್. ಎಸ್. ನಾಯ್ಕ, ಎಮ್.ಟಿ.ಗೌಡ, ಎಲ್.ಎಮ್.ಹೆಗಡೆ, ಎಮ್.ಜಿ.ನಾಯ್ಕ, ಮಹೇಶ ಶೆಟ್ಟಿ, ಸಾಧನಾ ಬರ್ಗಿ, ಸಂತೋಷಕುಮಾರ, ಜಿ.ಎಚ್.ನಾಯ್ಕ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಎಮ್.ಟಿ.ಮೊಗೇರ, ಶುಭವತಿ, ಪ್ರತಿಮಾ ಹೆಗಡೆ, ಬಾಬು ನಾಯ್ಕ ಮತ್ತು ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಉಪಸ್ಥಿತರಿದ್ದರು.  ಸಭೆಯ ಪ್ರಾರಂಭದಲ್ಲಿ ಜಲವಳಕರ್ಕಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ . ವಿಶ್ವೇಶ್ವರ ಭಟ್ಟರವರು ಪ್ರಾರ್ಥಿಸಿದರು. ಬಿ.ಆರ್.ಸಿ.ಯ ಸಮನ್ವಯಾಧಿಕಾರಿಗಳಾದ ್ರ ಜಿ.ಎಸ್.ನಾಯ್ಕ ರವರು ಪ್ರಾಸ್ತಾವಿಕವಾಗಿ . ಎಸ್.ಎನ್.ಗೌಡ ರವರ ಕುರಿತು ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮೋಹನ ನಾಯ್ಕ ನಡೆಸಿದರು. ಕೊನೆಯಲ್ಲಿ ಸರ್ವರನ್ನು  ಎಮ್.ಟಿ.ಗಣಪತಿ ವಂದಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಒಬ್ಬ ಸಣ್ಣ ವ್ಯಕ್ತಿಯೆಂದು ತಿಳಿದು ಕರ್ತವ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ, ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲಾ, ಯಶಸ್ಸು ಸಿಗುತ್ತದೆ, ವೃತ್ತಿಗೆ ನಾನೆಂದು ನಿಷ್ಕಾಳಜಿ, ವೃತ್ತಿಯನ್ನು ಗೌರವಿಸಿ ಕೆಲಸ ಮಾಡಿದರೆ, ಸುಬ್ರಾಯ ಎನ್. ಗೌಡ, ಹಸನ್ಮುಖಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,087 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar