ಹೊನ್ನಾವರ : ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಹೋಲಿ ರೋಸರಿ ಹೈಸ್ಕೂಲಿನ 2018-19 ನೇ ಸಾಲಿನ ಶಾಲಾ ಸಂಸತ್ತು ಉದ್ಘಾಟನೆ ನಡೆಯಿತು. ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ 228 ವಿದ್ಯಾರ್ಥಿಗಳು ಹಾಜರಾಗಿದ್ದು ಕಾರ್ಯಕ್ರಮದಲ್ಲಿ ಶಿಕ್ಷಕಿಯಾದ ಶ್ರೀಮತಿ. ಆಗ್ನೇಸ್ ಕುಟಿನ್ಹೊ ಮಾತನಾಡುತ್ತಾ ಶಾಲಾ ಪದಾಧಿಕಾರಿಗಳು ಹಾಗೂ ವಿಷಯ ಕ್ಲಬ್ನ ಪದಾಧಿಕಾರಿಗಳು ಶಾಲಾ ಹಾಗೂ ವಿದ್ಯಾರ್ಥಿಗಳ ಏಳಿಗೆಯ ಬಗ್ಗೆ ಕೆಲಸ ಮಾಡಬೇಕು, ತಮ್ಮ ಜೀವನದಲ್ಲಿ ಒಬ್ಬ ಜವಾಬ್ದಾರಿಯುತ ಮುಖಂಡನಾಗಿ ಹೊರ ಹೊಮ್ಮಬೇಕು ಎಂದು ಹೇಳುತ್ತಾ ಸೂಕ್ತ ಸಲಹೆಗಳನ್ನು ನೀಡಿದರು. ಶಾಲೆಯ ಮುಖ್ಯಾಧ್ಯಾಪಕಿ ಸಿ. ಶೀಲಾ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯುತ ಕೆಲಸಗಳೊಂದಿಗೆ ಶಾಲೆಯ ಹೆಸರನ್ನು ಉನ್ನತ ಮಟ್ಟಕ್ಕೆ ಏರಿಸುವಂತೆ ಕರೆ ನೀಡಿದರು. ಕುಮಾರಿ ಸಿಯೊನಾ ಗೊನ್ಸಾಲ್ವಿಸ್ ಸ್ವಾಗತಿಸಿದರೆ, ದೈಹಿಕ ಶಿಕ್ಷಕರಾದ ಶ್ರೀ ಜೊಕಿಮ್ ಡೊನಿ ಮಚಾದೋ, ಕುಮಾರಿ ಅನುಷಾ ಹಾಗೂ ರೇಚಲ್ ಕಾರ್ಯಕ್ರಮಗವನ್ನು ನಿರೂಪಿಸಿದರು. ವಂದನಾರ್ಪಣೆ ಕಾರ್ಯಕ್ರಮವನ್ನು ಕುಮಾರಿ ಹರ್ಷಿತಾ ಹೆಗಡೆ ನಡೆಸಿಕೊಟ್ಟರು. ಶಾಲಾ ಎಲ್ಲಾ ಸಿಬ್ಬಂದಿ ವರ್ಗ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
Leave a Comment