ಹೊನ್ನಾವರ . ಆರ್.ಇ.ಎಸ್ ಪ್ರೌಢಶಾಲೆ ಹಳದೀಪುರದಲ್ಲಿ ಸಾ.ಶಿ.ಇಲಾಖೆಯ ವಲಯ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಈ ಕೆಳಗಿನ ಗುಂಪಿನ ಆಟದಲ್ಲಿ ವಿಜಯಶಾಲಿಯಾಗಿ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲ್ ಬ್ಯಾಡ್ಮಿಂಟನ್-ಹುಡುಗರು ಮತ್ತು ಹುಡುಗಿಯರು- ಪ್ರಥಮ ಸ್ಥಾನ
ಥ್ರೋಬಾಲ ಹುಡುಗಿಯರು ಪ್ರಥಮ ಸ್ಥಾನ
ಕಬಡ್ಡಿ ಹುಡುಗರು ಪ್ರಥಮ ಸ್ಥಾನ
ಪ್ರಶಾಂತ ಬಿ. ಗೌಡ ಯೋಗಾಸನ- ದ್ವಿತೀಯ ಸ್ಥಾನ
ಅಶ್ವಿನಿ ಜಿ. ನಾಯ್ಕ- ಚಸ್ ಸ್ಫರ್ಧೆಯಲ್ಲಿ- ತೃತೀಯ ಸ್ಥಾನ
ಪ್ರವೀಣ.ಟಿ.ಗೌಡ-ಚಸ್ ಸ್ಫರ್ಧೆಯಲ್ಲಿ-5ನೇ ಸ್ಥಾನ
ಈ ಮೇಲಿನ ಗುಂಪಿನ ಆಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಶಾಲಾ ಮುಖ್ಯಾಧ್ಯಾಪಕರಾದ ಎಲ್.ಎಂ.ಹೆಗಡೆ ಹಾಗೂ ಶಿಕ್ಷಕ ವೃಂದದವರು ಆಡಳಿತ ಕಮಿಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರರವರು ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿಯರು ಹಾಗೂ ಊರಿನ ಗಣ್ಯ ನಾಗರಿಕರು ಕ್ರೀಡಾಪಟುಗಳನ್ನು ಹಾಗೂ ತರಬೇತಿದಾರರಾದ ಎಸ್.ಎನ್.ಹೆಗಡೆ ಇವರುಗಳನ್ನು ಅಭಿನಂದಿಸಿದ್ದಾರೆ.
Leave a Comment