ಹೊನ್ನಾವರ . ಶಿವಮೊಗ್ಗ ಜಿಲ್ಲೆಯ, ನೆಹರುಒಳಾಂಗಣದಲ್ಲಿ, ಕರ್ನಾಟಕ ವುಶು ಅಸೋಸಿಯೇಶನ್ ನಡೆಸಿದ 17ನೇ ರಾಜ್ಯ ವುಶು ಚಾಂಪಿಯನಶಿಪ್ಗೆ ಉತ್ತರ ಕನ್ನಡ ಜಿಲ್ಲೆಯಿಂದ ವಿದ್ಯಾರ್ಥಿಗಳು ಶಾನ್ಸು(ಫೈಟ್)ನಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ.
ಸೀನಿಯರ್ ವಿಭಾಗದಲ್ಲಿ ರೋಶನ.ಡಿ.ಭಂಡಾರಿ (ಬಂಗಾರ), ಜೂನಿಯರ ವಿಭಾಗದಲ್ಲಿ ವಿಶಾಲ.ವಿನೋದ.ನಾಯ್ಕ (ಬಂಗಾರ), ಅಕ್ಷಯ.ಮೇಸ್ತಾ (ಬೆಳ್ಳಿ), ಇಷಕ್ ಅನಾಸ(ಕಂಚು), ಸಬ್ ಜೂನಿಯರ ವಿಭಾಗದಲ್ಲಿ ಯಶಿಕಾ.ಕಿರಣ್ಕುಮಾರ.ನಾಯ್ಕ (ಬಂಗಾರ), ಜಯಸೂರ್ಯ.ಪಿ.ಈಟಿ (ಕಂಚು), ಚಂದನ.ರಮೇಶ.ಮೇಸ್ತಾ (ಕಂಚು), ಶಶಾಂಕ.ರಮೇಶ.ಮೇಸ್ತಾ (ಕಂಚು), ಪದಕವನ್ನು ಗೆದ್ದು ವಿಜಯಶಾಲಿಗಳಾಗಿದ್ದಾರೆ., ಶ್ರವಣ.ವಿನಯ್.ಹೆಗಡೆ, ಭುವನ್.ಮೊಗೇರ, ಮೊಹಮ್ಮದ್ ಟಿಪ್ಪು, ದರ್ಶನ.ಭಂಡಾರಿ, ಧನುಶ್ ವೈದ್ಯ, ಕೌಶಿಕ್.ನಾಯ್ಕ, ದೇವೇಂದ್ರ.ನಾಗಪ್ಪ.ದೇವಾಡಿಗ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ವಿಜೇತ ವಿದ್ಯಾರ್ಥಿಗಳು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿರುತ್ತಾರೆ
ಈ ಎಲ್ಲಾ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲಾ ವುಶು ಅಸೋಸಿಯೇಶನ್ನ ಅಡಿಯಲ್ಲಿ ಹೊನ್ನಾವರದ ಶಾರಧಾಂಭ ಕಲ್ಯಾಣ ಮಂಟಪದ ರೋಯಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಪಾಲಕರು ಮತ್ತು ಜಿಲ್ಲೆಯ ವುಶು ಅಸೋಸಿಯೇಶನ್ನ ಜನರಲ್ ಸೆಕ್ರೇಟರಿ ಮತ್ತು ರಾಜ್ಯ ತೀರ್ಪುದಾರರಾದ ಎಚ್.ಆರ್. ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದಾರೆ.
Leave a Comment