• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚಿಟ್ಟಾಣಿಯಂತ ಮಹಾನ್ ವ್ಯಕ್ತಿಗಳಿಂದ ವೃತ್ತಿ ನಿಷ್ಠೆ ಕಲಿಯಬೇಕು ;ರಾಜಶೇಖರ್ ಹೆಬ್ಬಾರ್

September 26, 2018 by Gaju Gokarna Leave a Comment

watermarked hnr 25 sanmana 25.

ಹೊನ್ನಾವರ: “ಒರ್ವ ಕಲಾವಿದನಲ್ಲಿ ಶೃದ್ದೆ ನಿಷ್ಠೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಆತ ಶ್ರೇಷ್ಠ ಕಲಾವಿದನಾಗಿರಲು ಸಾಧ್ಯ .ಚಿಟ್ಟಾಣಿಯಂತ ಮಹಾನ್ ವ್ಯಕ್ತಿಗಳಿಂದ ವೃತ್ತಿ ನಿಷ್ಠೆ ಕಲಿಯಬೇಕು” ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಜಶೇಖರ್ ಹೆಬ್ಬಾರ್ ಅಭಿಪ್ರಾಯಿಸಿದರು.
ರಾಷ್ಟಪ್ರಶಸ್ತಿ ವಿಜೇತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪುಣ್ಯ ಸ್ಮರಣಾರ್ತ ಚಿಟ್ಟಾಣಿಯವರ ಸ್ವಗ್ರಹವಾದ ತಾಲೂಕಿನ ಹೆರಂಗಡಿ ಗುಡ್ಡೇಕೇರಿಯ ಚಿಟ್ಟಾಣಿ ಯಕ್ಷ ಕಲಾಕೇಂದ್ರದಲ್ಲಿ À ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿ ಅವರು ಮಾತನಾಡುತ್ತಿದ್ದರು. “ರಂಗ ಸ್ಥಳದಲ್ಲಿ ಚಿಟ್ಟಾಣಿಯವರು ಪಾತ್ರದ ಔಚಿತ್ಯನೀಡಿದವರು. ಅವರಂತೆ ಶ್ರದ್ದೆ ಹೊಂದುವ ನೂರಾರು ಚಿಟ್ಟಾಣಿಯಂತವರು ಮೂಡಿ ಬರಲಿ ಎಂದರು. ಎಲ್ಲಾ ವೈಮನಸ್ಸನ್ನು ಬಿಟ್ಟು ಅವರ ಯಕ್ಷ ಪರಂಪರೆಯ ಶೈಲಿಯ ಮುಂದುವರಸಿಕೊಂಡು ಹೋಗುವ ಮಹತ್ಕಾರ್ಯವನ್ನು ಕುಟುಂಬಸ್ಥರು ಮಾಡಬೇಕು ಆಮೂಲಕ ನಮ್ಮಂತಹ ಯಕ್ಷಪ್ರೀಯರನ್ನು ಸಂತುಷ್ಟಗೊಳಿಸಬೇಕು’’ ಎಂದು ಸಲಹೆ ನಿಡಿದರು.
ಹಿರಿಯ ಯಕ್ಷಗಾನ ಕಲಾವಿದ ವೇಂಕಟೇಶರಾವ್ ಜಲವಳ್ಳಿಯವರಿಗೆ ಚಿಟ್ಟಾಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವಿಕರಿಸಿ ಅವರು ಮಾತನಾಡುತ್ತಾ ಚಿಟ್ಟಾಣಿಯವರೊಂದಿಗಿನ ಒಡನಾಟ ಹಂಚಿಕೊಳ್ಳುತ್ತಾ ಅವರನ್ನು ನೆನೆದು ಭಾವುಕರಾದರು. ನಾನು ಅವರ ಹೆಸರಿನ ಈ ಪ್ರ±ಸ್ತಿÀ್ತ ಪಡೆಯುವುದಕ್ಕಾಗಿ ನನ್ನ ಜೀವ ಉಳಿದಿತ್ತೆನೋ ಎಂದು ಗದ್ಗತಿತರಾದರು. ಚಿಟ್ಟಾಣಿ ಮನೆತನದ ಮರ್ಯಾದೆ ಚಿರಸ್ಥಾಯಿಯಾಗಿಸುತ್ತಾ ಘನತೆ ,ಗೌರವ ,ಕಿರ್ತಿ ಕಾಪಾಡುತ್ತಾ ಅವರ ಹೆಸರಿಗೆ ಕಳಂಕ ಬಾರದ ರೀತಿಯಲ್ಲಿ ನಡೆಸಿಕೊಂಡು ಹೋಗಿ ಎಂದು ಕುಟುಂಬಸ್ಥರಿಗೆ ಸಲಹೆ ನೀಡಿದರು.
ಚಿಟ್ಟಣಿಯವರ ಹೆಸರಿನಲ್ಲಿ ಕಲಾಕೇಂದ್ರ ನಿರ್ಮಾಣ ಕುರಿತಂತೆ ಇತ್ತಿಚೆಗೆ ಕೆಲವು ಭಿನ್ನಾಭಿಪ್ರಾಯಗಳು ಮೂಡುತ್ತಿದೆ. ಒಡಕುಮೂಡಿಸುವವರನ್ನ ಪರಿಗಣಿಸಬೇಡಿ.ಅದೆಲ್ಲವನ್ನು ಬದಿಗೊತ್ತಿ ಅವರ ಹಾಕಿಕೊಟ್ಟ ಮಾರ್ಗದಂತೆ ಕುಟುಂಬಸ್ಥರೆಲ್ಲರು ಒಂದೂಗುಡಿಕೊಂಡು ನಡೆಯಿರಿ ದಿವಂಗತ ಚಿಟ್ಟಾಣಿಯವರ ಹೆಸರನ್ನು ಅಜರಾಮರರನ್ನಾಗಿಸಿ ಎಂದು ಚಿಟ್ಟಾಣಿ ಕುಟುಂಬ ವರ್ಗಕ್ಕೆ ಗಣ್ಯರು ಸಲಹೆ ನಿಡಿದರು.
ದಿವಗಂತ ಚಿಟ್ಟಾಣಿಯವರ ಧರ್ಮಪತ್ನಿ ಸುಶೀಲಾರವರು ಮಾತನಾಡಿ ಚಿಟ್ಟಾಣಿ ಅಭಿಮಾನಿಗಳ,ಯಕ್ಷಕಲಾಭಿಮಾನಿಗಳ ಸಹಾಯ,ಸಹಕಾರ ನಿರಂತರವಾಗಿರಲಿ ಎಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಜಿ.ಯು ಭಟ್ ಮಾತನಾಡಿ ಚಿಟ್ಟಾಣಿಯವರು ನಡೆಯಿಸಿಕೊಂಡು ಬಂದ ಘನ ಪರಂಪರೆ ಮುಂದುವರೆಸೋಣ. ಅವರು ಸಮಾಜದ ,ಕಲಾ ಪ್ರಿಯರ,ದೇಶದ ಸ್ವತ್ತು ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ಚಿಟ್ಟಾಣಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಸದಸ್ಯ ಲೊಕೇಶ್ ನಾಯ್ಕ , ಹೆರಂಗಡಿ ಗ್ರಾಮ ಪಂಚಾಯತ್ ಅದ್ಯಕ್ಷೆ ರಾಜೇಶ್ವರಿ ನಾಯ್ಕ, ಜಿ.ಜಿ ಸಭಾಹಿತ್,ಪಿಎಸ್ ಭಟ್ ಉಪ್ಪೋಣಿ, ರಾಜೇಶ್ವರಿ ಹೆಗಡೆ,ಚಂದ್ರಕಾಂತ್ ಕೊಚ್ರೆಕರ್,ಜಿ.ಎ ಹೆಗಡೆ ಸೊಂದಾ, ಎಮ್ ವಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಮೇರು ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ನಡೆಯಿತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಒರ್ವ ಕಲಾವಿದನಲ್ಲಿ ಶೃದ್ದೆ ನಿಷ್ಠೆ, ಚಿಟ್ಟಾಣಿ ಕುಟುಂಬ ವರ್ಗ, ಚಿಟ್ಟಾಣಿಯಂತ ಮಹಾನ್ ವ್ಯಕ್ತಿ, ಪುಣ್ಯ ಸ್ಮರಣೆ ಕಾರ್ಯಕ್ರಮ, ರಂಗ ಸ್ಥಳದಲ್ಲಿ ಚಿಟ್ಟಾಣಿ, ರಾಜಶೇಖರ್ ಹೆಬ್ಬಾರ್, ರಾಷ್ಟಪ್ರಶಸ್ತಿ ವಿಜೇತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ, ವೃತ್ತಿ ನಿಷ್ಠೆ ಕಲಿಯಬೇಕು, ಶ್ರೇಷ್ಠ ಕಲಾವಿದನಾಗಿರಲು ಸಾಧ್ಯ, ಸ್ವಗ್ರಹವಾದ ತಾಲೂಕಿನ ಹೆರಂಗಡಿ ಗುಡ್ಡೇಕೇರಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,076 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...