• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ;ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್

September 27, 2018 by Gaju Gokarna Leave a Comment

27 hnr gov co.

ಹೊನ್ನಾವರ: ಇಂದಿನ ಶಿಕ್ಷಣ ನಮ್ಮನ್ನು ಶ್ರಮಿಕರನ್ನಾಗಿ,ದೇಶಪ್ರೇಮಿಗಳನ್ನಾಗಿ ಮಾಡಬೇಕು. ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ” ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಚಟುವಟಿಕೆಗಳು,ಕ್ರೀಡಾ ವಿಭಾಗ,ರಾಷ್ಟ್ರೀಯ ಯೋಜನೆ ಘಟಕ,ಭಾರತ್ ರೊವರ್ಸ ಮತ್ತು ರೆಂಜರ್ಸ್ ಹಾಗೂ ರೆಡ್ ಕ್ರಾಸ್ ವಿಭಾಗದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
“ಕಾಲೇಜು ಎನ್ನುವುದು ನದಿ ದಂಡೆಯಲ್ಲಿನ ಹರಳುಗಳನ್ನು ಪಾಲಿಷ್ ಮಾಡುವ ಕೇಂದ್ರವಿದ್ದಂತೆ. ಅಂತಿಮ ಸತ್ಯವನ್ನ ಹೇಳುವುದು, ಮನಸ್ಸನ್ನು ಕೇಂದ್ರಿಕರಿಸುವುದೆ ಶಿಕ್ಷಣ. ಕೇವಲ ಪದವಿಗಳೆ ಶಿಕ್ಷಣವಲ್ಲ ಪದವಿದರರೆಲ್ಲ ಶಿಕ್ಷಣವಂತರಲ್ಲ” ಎಂದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ “ಇಂದಿನ ಯುವಕ-ಯುವತಿಯರು ಮೊಬೈಲ್ ಸಂಸ್ಕ್ರತಿಗೆ ಮಾರು ಹೋಗಿದ್ದಾರೆ ಎಂದ ಅವರು ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೆತರ ಚಟುವಟಿಕೆಗಳ ಅವಶ್ಯಕತೆ ಇದೆ ಎಂದು ಮುಂದಿನ ದಿನಗಳಲ್ಲಿ ಕಾಲೇಜುವತಿಯಿಂದ ನಡೆಯಲಿರುವ ಸಾಂಸ್ಕ್ರತಿಕ,ಕ್ರಿಡಾ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಹೊನ್ನಾವರದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕಾಗಿ ಶತಾಯಗತಾಯ ಪ್ರಯತ್ನಿಸಿದ್ದು ತಾನು ಆದರೆ ಮಂಜೂರಾದ ಮೇಲೆ ಭಟ್ಕಳ ಕ್ಷೇತ್ರದ ಶಾಸಕರು ತಮ್ಮ ವ್ಯಾಪ್ತಿಗೆ ಒಳಪಡುತ್ತದೆ ಎಂದು ತೆಗೆದುಕೊಂಡಿದ್ದಾರೆ ಇದು ನನಗೆ ಅತಿವ ಬೇಸರ ತರಿಸಿದೆ” ಎಂದರು.
ಕಾಲೇಜು ಆಡಳಿ ಮಂಡಳಿ ವತಿಯಿಂದ ಶಾಸಕ ದಿನಕರ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್, ಪ್ರೊಪೆಸರ್ ನಾಗರಾಜ ಎ.ಅರಸ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ವಸಂತ ರೆಡ್ಡಿ ಕೆ.ವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ವಸಂತ ರೆಡ್ಡಿ ಕೆ.ವಿ ಮಾತನಾಡಿ ಪಠ್ಯೇತರ ಚಟುವಟಿಗಳಲ್ಲಿ ನಾಯಕತ್ವ ಗುಣವಿರುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಉತ್ತಮಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜು ವತಿಯಿಂದ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನಮ್ಮ ಇಲಾಖೆಯಿಂದ ಸಹಾಯ ಸಹಕಾರ ಅಗತ್ಯವಿದ್ದಲ್ಲಿ ನೀಡಲು ಸಿದ್ದರಿದ್ದೇವೆ ಎಂದರು.ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವಿಕಾರ ನಡೆಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಸುಮಂಗಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಶಿಕ್ಷಕ ವರ್ಗ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಎಲ್ಲರು ರಾಷ್ಟ್ರಪ್ರೇಮಿಗಳಾಗಿ, ಎಸ್.ಜೆ ಕೈರನ್, ದೇಶ ಪ್ರೇಮವಿಲ್ಲದಿದ್ದರೆ, ನದಿ ದಂಡೆಯಲ್ಲಿನ ಹರಳುಗಳನ್ನು, ಪದವಿದರರೆಲ್ಲ ಶಿಕ್ಷಣವಂತರಲ್ಲ, ಪಾಲಿಷ್ ಮಾಡುವ ಕೇಂದ್ರವಿದ್ದಂತೆ. ಅಂತಿಮ ಸತ್ಯವನ್ನ ಹೇಳುವುದು, ಮನಸ್ಸನ್ನು ಕೇಂದ್ರಿಕರಿಸುವುದೆ ಶಿಕ್ಷಣ. ಕೇವಲ ಪದವಿಗಳೆ ಶಿಕ್ಷಣವಲ್ಲ, ಯುವಕ-ಯುವತಿಯರು ಮೊಬೈಲ್ ಸಂಸ್ಕ್ರತಿಗೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ವಿಶ್ರಾಂತ ಶಿಕ್ಷಕ, ಶಿಕ್ಷಣ ಪಡೆದು ಪ್ರಯೋಜನವಿಲ್ಲ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...