• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮರಳು ಉದ್ಯಮಕ್ಕೆ ಬೇಕಿದೆ ಕಡಿವಾಣ : ನೈಸರ್ಗಿಕ ಅವಗಡ ಕಟ್ಟಿಟ್ಟ ಬುತ್ತಿ ,ಮರಳು ತೂಕಕ್ಕೆ ವೇ ಬ್ರಿಜ್‍ಗಳು ಯಾಕಿಲ್ಲ?

October 1, 2018 by Gaju Gokarna Leave a Comment

Sand 3a 0

ಹೊನ್ನಾವರ : ಬೂಮಿಯ ಒಡಲನ್ನು ಕೊರೆಯುತ್ತಿರುವ ಮರಳು ಉದ್ದಮಕ್ಕೆ ಕಡಿವಾಣ ಹಾಕ ಬೇಕಿದೆ. ಇಲ್ಲದಿದ್ದರೆ ಕೊಡಗು, ಕೆರಳದಂತೆ ಮುಂದೊಂದು ದಿನ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬರುವ ದಿನಗಳು ದೂರವಿಲ್ಲ.
ಇಷ್ಟು ದಿನ ಮರಳು ತೆಗೆಯಲು ಅನುಮತಿ ಇಲ್ಲದಿದ್ರು ಕೂಡ ಎಲ್ಲೂ ಕೂಡ ಬಂದಾಗಿರಲಿಲ್ಲ ಅನದಿಕೃತವಾಗಿ ಸಾಗುವಷ್ಟು ಮರಳು ಸಾಗಾಣಿಕೆ ಯಾಗುತ್ತಲೆ ಇತ್ತು. ಈಗ ಅದಿಕೃತವಾಗಿ ಪಾಸ್‍ಇದ್ದವರಿಗೆ ಅನುಮತಿ ನೀಡಲಿದ್ದಾರೆ. ಈಗಿನ ಆದುನಿಕ ತಂತ್ರಜ್ಞಾನದ ಮಾದರಿಯಲ್ಲಿ ಮರಳು ತೆಗೆಯುವ ಇವರು ಪ್ರತಿ ದಿನ ವಿಪರೀತ ಮರಳು ತೆಗೆದು ಬೂಮಿಯ ಒಡಲು ಕೊರೆಯುತ್ತಿದೆ.
ಇನ್ನೂ ಕೆಲವು ಮರಳು ಉದ್ಯಮಕ್ಕೆ ಅನುಮತಿ ಪಡೆದವರು ನದಿಯ ದಡದಲ್ಲಿ ತಮ್ಮ ಜಾಗ ಇದ್ದರೂ ಅಲ್ಲಿಯ ತನಕ ಬೋಟ್ ಬರಲು ಸಾದ್ಯ ಇಲ್ಲದಿರುವುದಿಂದ ನದಿಗೆ ಮಣ್ಣು ಹಾಕಿ ಕಲ್ಲಿನಿಂದ ತಡೆಗೋಡೆ ಕಟ್ಟಿ ನದಿಯನ್ನೆ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇಂತಹ ಅನೇಕ ಮರಳು ಸಂಗ್ರಹ ಸ್ಥಳಗಳಿದ್ದು ಇದು ಕೂಡ ಕಾನೂನು ಉಲ್ಲಂಘನೆಯಲ್ಲಿ ಒಂದು.
ಇವರ ವಿಪರೀತ ಹಪಾಹಪಿ ತನದಿಂದ ಬೇಕಾಬಿಟ್ಟಿ ಮರಳು ತುಂಬಿದ ವಾಹನಗಳು ಒಡಾಡುವುದರಿಂದ ರಸ್ತೆಗಳು ಕೂಡಾ ತುಂಬಾ ಹದ ಗೆಟ್ಟು ಹೋಗುತ್ತಿದೆ. ಬೇಸಿಗೆ ಕಾಲದಲ್ಲಿ ಒಡಾಡಲಾಗದಷ್ಟು ದೂಳು ತುಂಬಿ ರಸ್ತೆ ಅಕ್ಕ ಪಕ್ಕದ ಮನೆಯ ಬಣ್ಣವೆ ಬದಲಾಗ ಬಿಡುತ್ತಿದೆ. ಈ ಮರಳು ಉದ್ಯಮ ಬಳಕೆಗೆ, ಬದುಕಿಗೆ ಮಾತ್ರ ಸೀಮಿತ ವಾಗದೆ “ಮರಳು ಮಾಫಿಯಾವಾಗಿ” ಪರಿವರ್ತನೆಯಾಗಿದ್ದು ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುವಂತಾಗಿದೆ.
ಒಂದು ಕಡೆ ಮರಳು ತೆಗೆದು ನದಿಯ ಆಳ ಹೆಚ್ಚಾಗುತ್ತಿದೆ. ಅಕ್ಕ ಪಕ್ಕದ ಜಾಗ ಕೊರೆದು ಸಾರ್ವಜನಿಕರ ಮಾಲ್ಕಿ ಜಾಗಗಳು ನದಿಯ ಪಾಲಾಗುತ್ತಿದೆ. ಆಳವಾಗಿ ಮರಳು ತೆಗೆಯುತ್ತಿದ್ದುದರಿಂದ ನದಿಯ ಪಕ್ಕದಲ್ಲಿ ಇರುವ ಗುಡ್ಡ ಕುಸಿತ ವಾಗುವ ಸಾದ್ಯತೆಗಳು ಹೆಚ್ಚಿದೆ. ನೈಸರ್ಗಿಕವಾಗಿ ಅಪಾಯಗಳಾಗುವ ಎಲ್ಲಾ ಸಾದ್ಯತೆಗಳು ಕಂಡು ಬರುತ್ತಿದೆ. ಮರಳು ಪ್ರತಿ ಒಂದು ವ್ಯಕ್ತಿಗೂ ಅಗತ್ಯವಾದದ್ದು ಅನ್ನುವುದು ಕೂಡ ಸತ್ಯ. ಇಲ್ಲಿಯ ಮರಳುಗಳನ್ನು ತೆಗೆದು ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ. ಸ್ಥಳೀಯವಾಗಿ ಬೇಕಾದಷ್ಟೆ ಮರಳು ತೆಗೆದು ನೈಸರ್ಗಿಕವಾಗಿ ನಡೆಯುವ ಅವಘಡ ತಪ್ಪಿಸ ಬೇಕಾಗಿದೆ.
ಮರಳು ತೂಕಕ್ಕೆ ಯಾಕಿಲ್ಲ ವೇ ಬ್ರೀಜ್ :ಮರಳು ಸಾಗಾಣಿಕೆಗೆ ಟನ್ ಲೆಕ್ಕದಲ್ಲಿ ಪರವಾನಿಗೆ ನೀಡಲಾಗುತ್ತದೆ. ಆದರೆ ಟನ್ ಲೆಕ್ಕದಲ್ಲಿ ಅಳತೆ ಮಾಡಲು ಯಾವುದೆ ವೇ ಬ್ರಿಜ್ ದಂತಹ ಅಳತೆ ಸಾಧನ ಇಲ್ಲ. ಹಾಗಾಗಿ ಯಾವ ಆದಾರದ ಮೇಲೆ ಅಳತೆ ಮಾಡಿ ಅದಿರು ಸಾಗಣೆ ಮಾಡುತ್ತಾರೆ ಅನ್ನುವುದು ಪ್ರಶ್ನೆಯಾಗುತ್ತದೆ. ಆರ್‍ಟಿಒ ಕಾನೂನು ಪ್ರಕಾರ ಒಂದು ವಾಹನಕ್ಕೆ ಇಂತ್ತಿಷ್ಟೆ ಟನ್ ಸಾಗಿಸ ಬೇಕು ಎಂದು ಕಾನೂನು ಇದೆ. ಆದರೆ ಮರಳು ತುಂಬುವಾಗ ಆರ್‍ಟಿಒ ಕಾನೂನು ಪ್ರಕಾರ ಟನ್ ಲೆಕ್ಕದಲ್ಲಿ ಹಾಕುತ್ತಾರೆ. ಪ್ರತಿಯೊಂದು ಗಾಡಿಯಲ್ಲೂ ಇವರ ಅಳತೆಯ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಾಟವಾಗುತ್ತಿದೆ. ಈ ಹಿಂದೆ ಅಧಿಕಾರಿಗಳು ಅಕ್ರಮ ಮರಳು ಮಾತ್ರ ಹಿಡಿದಿದ್ದಾರೆ. ಆದರೆ ಪಾಸ್ ಇದ್ದೂ ಕಾನೂನು ಉಲ್ಲಂಘಿಸಿ ನಿಗದಿ ಪಡಿಸಿಕ್ಕಿಂತ ಹೆಚ್ಚು (ಓವರ್ ಲೋಡ್) ಮರಳು ಸಾಗಿಸಿದ್ದರು ಕೇಸು ದಾಖಲಿಸಿದ ಉದಾರಣೆಗಳಿಲ್ಲ. ಯಾಕೆಂದರೆ ಪರಿಶೀಲನೆಗೆ ವೇ ಬ್ರಿಜ್ ಗಳಿಲ್ಲ. ಈ ಹಿಂದೆ ಅದಿರು ಸಾಗಿಸುವಾಗ ಹೇಗೆ ವೇ ಬ್ರೀಜ್ ಬಳಕೆ ಮಾಡುತ್ತಿದರೋ ಅದೇ ರೀತಿಯಲ್ಲಿ ಮರಳು ಸಾಗಣಿಕೆಗೂ ಕೂಡ ವೇ ಬ್ರೀಜ್ ಬಳಸಬೇಕಾಗಿದೆ.
ಮತ್ತೊಮ್ಮೆ ಪರಿಶೀಲಿಸಬೇಕಿದೆ : ಮಾನ್ಯ ಜಿಲ್ಲಾಧಿüಕಾರಿಗಳು ಮರಳು ಉದ್ಯಮಕ್ಕೆ ಸಂಬಂದ ಪಟ್ಟ ಜಾಗವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಜೊತೆಗೆ ನಿಯಮಾವಳಿಯಲ್ಲೂ ಕೂಡ ಕೆಲವು ಬದಲಾವಣೆ ಮಾಡಿ ಬಿಗಿಗೊಳಿಸ ಬೇಕಾಗಿದೆ. ಪರಿಸರಕ್ಕೆ ಸಂಬಂದ ಪಟ್ಟ ಅಧಿಕಾರಿಗಳು, ಪರಿಸರ ಹೋರಾಟಗಾರರು ಈ ಎಲ್ಲಾ ಬೆಳವಣಿಗೆ ಬಗ್ಗೆ ಘಮನ ಹರಿಸಬೇಕಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಅನದಿಕೃತವಾಗಿ ಸಾಗುವಷ್ಟು ಮರಳು ಸಾಗಾಣಿಕೆ, ಅಳತೆ ಸಾಧನ ಇಲ್ಲ, ಓವರ್ ಲೋಡ್)ಮರಳು, ಕಲ್ಲಿನಿಂದ ತಡೆಗೋಡೆ ಕಟ್ಟಿ, ಕೆರಳದಂತೆ ಮುಂದೊಂದು ದಿನ, ಕೊಡಗು, ಗುಡ್ಡ ಕುಸಿತ, ಡ ಕಟ್ಟಿಟ್ಟ ಬುತ್ತಿ, ನದಿಯನ್ನೆ ಅತಿಕ್ರಮಣ, ನೈಸರ್ಗಿಕ ಅವಗ, ಬೇಕಿದೆ ಕಡಿವಾಣ, ಬೋಟ್ ಬರಲು ಸಾದ್ಯ, ಮರಳು ಉದ್ಯಮ, ಮರಳು ತೂಕಕ್ಕೆ ವೇ ಬ್ರಿಜ್‍ಗಳು, ಮರಳು ತೆಗೆದು ನದಿಯ ಆಳ, ಮರಳು ಮಾಫಿಯಾ, ಯಾಕಿಲ್ಲ, ಸಾರ್ವಜನಿಕರ ಮಾಲ್ಕಿ ಜಾಗಗಳು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...