• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ನಡೆದ ಶ್ರಮದಾನ ಕಾರ್ಯಕ್ರಮ

October 2, 2018 by Gaju Gokarna Leave a Comment

watermarked 02 hnr b report 02 10 18.

ಹೊನ್ನಾವರ .ತಾಲೂಕಿನ ಬಂಗಾರಮಕ್ಕಿಯಲಿ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‍ನಲ್ಲಿ ಗಾಂಧಿ ಜಯಂತಿಯ ಅಂಗವಾಗಿ “ಶ್ರಮದಾನ” ಕಾರ್ಯಕ್ರಮವನ್ನು ನಡೆಸಲಾಯಿತು. 1 ನೇ ತರಗತಿಯಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ವರ್ಗ ಶಿಕ್ಷಕರ ನೇತೃತ್ವದಲ್ಲಿ “ಶ್ರಮದಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದರ ಮುಂದಾಳತ್ವವನ್ನು ನಮ್ಮ ಶಾಲೆಯ ಆಡಳಿತ ನಿರ್ದೇಶಕರಾದ ಜಿ.ಟಿ.ಹೆಗಡೆು, ಪ್ರಾಂಶುಪಾಲರಾದ ಶ್ರೀನಿವಾಸ ಬಿ.ಕೆ ಹಾಗೂ ದೈಹಿಕ ಶಿಕ್ಷಕರಾದ ಜಯಂತ ಗೌಡ ರವರು ವಹಿಸಿದ್ದು, ಇವರೆಲ್ಲರ ಮಾರ್ಗದರ್ಶನದಲ್ಲಿ ಸುಮಾರು ಒಂದು ತಾಸು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸೇರಿ ಶಾಲಾ ಆವರಣ, ದೇವಸ್ಥಾನದ ಎದರು ಭಾಗ, ರಥ ಬೀದಿ ಹಾಗೂ ರಸ್ತೆಯ ಅಕ್ಕ-ಪಕ್ಕವನ್ನು ಸ್ವಚ್ಛಗೊಳಿಸಿದರು.
ನಮ್ಮ ಶಾಲೆಯಲ್ಲಿ 150 ನೇಯ ಗಾಂಧೀ ಜಯಂತಿಯನ್ನು ಪರಮಪೂಜ್ಯ ಶ್ರೀ ಶ್ರೀ ಮಾರುತಿ ಗುರೂಜಿಯವರ ಅನುಪಸ್ಥಿತಿಯಲ್ಲಿ ಅವರ ಆಶಿರ್ವಾದದೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಘನಾಧ್ಯಕ್ಷತೆಯನ್ನು ಶಾಲಾ ಆಡಳಿತ ನಿರ್ದೇಶಕರಾದ ಜಿ. ಟಿ. ಹೆಗಡೆ ವಹಿಸಿದ್ದು ಪ್ರಾಂಶುಪಾಲರಾದ ಶ್ರೀನಿವಾಸ ಬಿ.ಕೆ., ಹಿರಿಯ ಶಿಕ್ಷಕಿಯಾದ ಶಕುಂತಲಾ ಸಾರಂಗ, ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿ ಪಾಲಕರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮ:-
ಸಭಾಕಾರ್ಯಕ್ರಮವು ಶಾಲಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಸಾಂಸ್ಕøತಿಕ ಪ್ರತಿನಿಧಿಯಾದ ಶ್ರೀನಿಧಿ ಎಸ್. ಪೈ ನೆರದಿದ್ದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದನು. ನಂತರ ಗಣ್ಯರು, ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರತಿನಿಧಿಗಳು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಗಳ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು.
ತದನಂತರ ವಿದ್ಯಾರ್ಥಿಗಳು ಗಾಂಧಿ ಹಾಗೂ ಲಾಲ್ ಬಹದ್ದೂರ ಬಗ್ಗೆ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಭಾಷಣ ಮಾಡಿದರು. ದೇಶಭಕ್ತಿಗೀತೆಗಳನ್ನು ಹಾಡಿದರು. ಅಲ್ಲದೇ ವಿದ್ಯಾರ್ಥಿಗಳು ಗಾಂಧಿಜೀಯವರ ಅಚ್ಚು-ಮೆಚ್ಚಿನ ಭಜನೆಯಾದ “ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ. . . . . .” ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.
ಶಾಲೆಯ ಶಿಕ್ಷಕೀಯರಾದ ಸ್ವಾತಿ ನಾಯ್ಕ ಹಾಗೂ ಸುಷ್ಮಾ ಭಟ್‍ರವರು ಮಹಾತ್ಮಾ ಗಾಂಧೀಜಿಯವರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶಾಲೆಯ ಆಡಳಿತ ನಿರ್ದೇಶಕರಾದ ಜಿ. ಟಿ. ಹೆಗಡೆ ಮಾತನಾಡಿ ವಿದ್ಯಾರ್ಥಿಗಳಿಗೆ ಗಾಂಧಿಜೀಯವರ ಆದರ್ಶ, ಮೌಲ್ಯ ಹಾಗೂ ತತ್ವಗಳನ್ನು ತಿಳಿಸಿದರು. ವ್ಯಕ್ತಿಯನ್ನು ಗುರುತಿಸಲು ವೇಷಭೂಷಣದ ಅವಶ್ಯಕತೆ ಇಲ್ಲ, ಬದಲಾಗಿ ಅವನ ವ್ಯಕ್ತಿತ್ವ, ಸಾಧನೆ ಸಾಕು. ಕಾ¯ಕ್ಕೆ ತಕ್ಕಂತೆ ಗಾಂಧಿಜಿಯವರ ಸತ್ಯ, ಅಹಿಂಸೆ ಮುಂತಾದ ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಸಮಾನತೆ, ಯಶಸ್ಸು, ಗೌರವ ಲಭಿಸುತ್ತದೆ ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀನಿವಾಸ ಬಿ.ಕೆ ಮಾತನಾಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಗಾಂಧಿಜಯಂತಿಯು ಕೇವಲ ಆಚರಣೆಯಾಗದೆ, ಅವರ ತತ್ವಗಳನ್ನು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಒಳ್ಳೆಯ ಆಲೋಚನೆಯೇ ಒಳ್ಳೆಯ ಕಾರ್ಯಕ್ಕೆ ಮುನ್ನುಡಿ, ಸದಾ ಸತ್ಯವನ್ನೇ ನುಡಿಯಿರಿ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿನಿಯಾದ ಕುಮಾರಿ ಮೈಮುನಾ ಕಾಜಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದಳು. ವಿದ್ಯಾರ್ಥಿಯಾದ ಕುಮಾರ ಸಂದೇಶ ನಾಯ್ಕ ಸರ್ವರನ್ನು ವಂದಿಸಿದನು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: 1 ನೇ ತರಗತಿಯಿಂದ, 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಒಂದು ತಾಸು ಸ್ವಚ್ಛತಾ ಕಾರ್ಯಕ್ರಮ, ಗಾಂಧಿ ಜಯಂತಿ ಪ್ರಯುಕ್ತ, ಗಾಂಧಿ ಜಯಂತಿಯ ಅಂಗವಾಗಿ, ದೇವಸ್ಥಾನದ ಎದರು ಭಾಗ, ನಡೆದ, ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್, ರಥ ಬೀದಿ, ರಸ್ತೆಯ ಅಕ್ಕ-ಪಕ್ಕವನ್ನು ಸ್ವಚ್ಛ, ಶಾಲಾ ಆವರಣ, ಶ್ರಮದಾನ ಕಾರ್ಯಕ್ರಮ, ಶ್ರೀ, ಸಭಾಕಾರ್ಯಕ್ರಮ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...