• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ‌ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ‌ ದಿನವೆ 4 ಸಾವಿರಕ್ಕೂ ಅಧಿಕ‌ ಜನ ಭಾಗಿ

October 10, 2018 by Yogaraj SK Leave a Comment

 7th year ,durga doud started at haliyal

ಹಳಿಯಾಳ : ಧರ್ಮಜಾಗೃತಿ ಮತ್ತು ರಾಷ್ಟ್ರಪ್ರೇಮದ ಜಾಗರಣೆ ಸಲುವಾಗಿ ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮಕ್ಕೆ ಬುಧವಾರ ಬೆಳಗಿನ ಜಾವ ಶ್ರೀ ಗಣೇಶ ಮಂದಿರದಲ್ಲಿ ಕೇಸರಿ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಲಾನೆ ನೀಡಲಾಯಿತು.
ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಳಿಯಾಳದ ಶಿವ ಪ್ರತಿಷ್ಠಾನ, ದುರ್ಗಾ ದೌಡ ಸಮಿತಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಳಿಯಾಳದಲ್ಲಿಯೂ ನಡೆಯುತ್ತಿದ್ದು 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ, ಶಿವ ಪ್ರತಿಷ್ಠಾನದ ಪ್ರಮುಖ ರಾಜು ಧೂಳಿ ಚಾಲನೆ ನೀಡಿದರು.
ಮೊದಲ ದಿನದ ದೌಡನಲ್ಲಿ ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಎನ್ನದೆ ಸುಮಾರು 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ಧಾರ್ಮಿಕ ನಡಿಗೆಯಲ್ಲಿನ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು. ಇಂದಿನಿಂದ ಬರುವ ದಿ.18 ರ ವರೆಗೆ ಪ್ರತಿದಿನ ಪಟ್ಟಣದ ಆಯಾ ಪ್ರದೇಶಗಳಲ್ಲಿ ಧಾರ್ಮಿಕ ನಡೆಗೆಯು ನಸುಕಿನ ಜಾವ 5.30 ರಿಂದ 8 ಗಂಟೆಯವರೆಗೆ ನಡೆಯಲಿದೆ. 2ನೇ ದಿನ ದಿ.11 ರಂದು ಪೋಲಿಸ್ ಲೈನ್‍ನಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದ್ದು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತಲುಪಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘಟಕ ಪ್ರಮುಖರಾದ ಪ್ರಸಾದ ಹುನ್ಸವಾಡಕರ, ಸಂತೋಷ ಘಟಕಾಂಬಳೆ, ಶ್ರೀನಿವಾಸ ದೊಡಮನಿ, ಸತ್ಯಜೀತ ಗಿರಿ, ಮಂಗಲಾ ಕಶೀಲ್ಕರ, ವಿಜಯ ಬೋಬಾಟಿ, ಶಾಂತಾ ಹಿರೇಕರ, ಆನಂದ ಕಂಚನಾಳಕರ, ತುಕಾರಾಮ ಪಟ್ಟೇಕರ, ಅನಿಲ ಮುತ್ನಾಳ, ಪ್ರಕಾಶ ಕೊನಪ್ಪನವರ, ಅಶೋಕ, ಸಂಜಯ ಪಾಟೀಲ, ಸಿದ್ದು, ಮಂಜು, ಪ್ರಶಾಂತ ಮೊದಲಾದವರು ಇದ್ದರು.

 

watermarked IMG 20181010 WA0258 watermarked IMG 20181010 WA0259 watermarked IMG 20181010 WA0256  7th year ,durga doud started at haliyal watermarked 10 hly 1

 

 

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 2018, 2018- 7th year durga doud started at haliyal, 4 ಸಾವಿರಕ್ಕೂ ಅಧಿಕ‌ ಜನ ಭಾಗಿ, 7th year, 9 ದಿನಗಳ ಕಾಲ, durga doud, HALIYAL, started, ಇಂದಿನಿಂದ, ಕೇಸರಿ ಭಗವಾಧ್ವಜಕ್ಕೆ, ಖಾನಾಪೂರ, ಗಣೇಶ ಮಂದಿರದಲ್ಲಿ, ದಿ.18 ರ ವರೆಗೆ, ಧರ್ಮಜಾಗೃತಿ, ಧಾರ್ಮಿಕ ನಡಿಗೆ, ನಡೆಯಲಿರುವ, ನವರಾತ್ರಿ ಉತ್ಸವ, ಪ್ರಥಮ‌ ದಿನವೆ, ಬೆಳಗಾವಿ, ಭಗವಾಧ್ವಜಕ್ಕೆ ಪೂಜೆ, ರಾಷ್ಟ್ರಪ್ರೇಮದ ಜಾಗರಣೆ, ವಿಶೇಷ ಪೂಜೆ, ಸಲ್ಲಿಸುವ ಮೂಲಕ ಚಾಲನೆ, ಹಳಿಯಾಳ, ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...