ಹೊನ್ನಾವರ: ತಾಲೂಕಿನ ಪ್ರಶಿದ್ದ ಜಾಗೃತ ಕ್ಷೇತ್ರಗಳಲ್ಲೊಂದಾದ ಬಳಕೂರಿನ ಶ್ರೀ ಯಕ್ಷಿ ಕ್ಷೇತ್ರ ನಿಲಗೋಡಿನಲ್ಲಿ ಅಮವಾಸ್ಯೆಯ ಪ್ರಯುಕ್ತ ಮಂಗಳವಾರ ತಿರ್ಥಸ್ನಾನ ಹಾಗೂ ದೇವಿಗೆ ವಿಷೇಶ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದವು.
ಅಮವಾಸ್ಯೆಯಂದು ದೇವಿಗೆ ವಿಷೇಶ ಅಲಂಕಾರ,ಅಭಿಷೇಕ,ಅರ್ಚನೆ ನೆರವೆರಿತು. ಭಕ್ತರು ಶ್ರೀ ಸನ್ನಿದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಯಕ್ಷಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿಯವರಿಂದ ತಿರ್ಥ ಪ್ರೊಕ್ಷಣೆ ಕಾರ್ಯ ನೆರವೆರಿತು. ತಿರ್ಥ ಸ್ನಾನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ಬಂದು ತಿರ್ಥ ಪ್ರೊಕ್ಷಣೆ ಪಡೆದರು. ತಿರ್ಥಸ್ನಾನ ಮಾಡುವುದರಿಂದ ಚರ್ಮವ್ಯಾದಿ ಖಾಯಿಲೆಗಳು ದೂರವಾಗುತ್ತದೆ ಎಂಬುದು ಇಲ್ಲಿಗೆ ಆಗಮಿಸುವ ಭಕ್ತರ ನಂಬಿಕೆಯಾಗಿದೆ.
ಸಂಚಾರಿ ಪೀಠದ ಗುರುಗಳಿಂದ ಪ್ರವಚನ: ಶ್ರೀ ಜಗದ್ಗುರು ಶಂಕರಾಚಾರ್ಯ ಬ್ರಹ್ಮಾನಂದ ಸಂಚಾರಿ ಪೀಠ ಇವರು ಅಮವಾಸ್ಯೆಯ ದಿನದಂದು ಶ್ರೀಕ್ಷೇತ್ರ ನಿಲಗೋಡಿಗೆ ಭೇಟಿ ನೀಡಿ ದೇವಿ ದರ್ಶನ ಪಡೆದರು.ನಂತರ ಭಕ್ತರನ್ನುದ್ದೇಶಿಸಿ ತಮ್ಮ ಪ್ರವಚನದಲ್ಲಿ ಮಾತನಾಡಿ, ಯಾವಾಗಲು ನಾವು ಒಳಿತನ್ನು ಬಯಸಬೇಕು,ಉತ್ತಮ ಮಾರ್ಗದಲ್ಲಿ ನಡೆಯಬೇಕು ಶತ್ರುವನ್ನು ಪ್ರಿತಿಸುವ ಗುಣವನ್ನು ಹೊಂದಬೇಕು ಆ ಮೂಲಕ ಭಗವಂತನಲ್ಲಿ ಶರಣಾಗಬೇಕು ಎಂದರು. ಇಂದು ಕ್ಷುಲಕ ಕಾರಣಗಳಿಗೆ ಆತ್ಮಹತ್ಯೆ,ಕೊಲೆಯಂತಹ ಪಾಪಕೃತ್ಯಗಳು ನಡೆಯುತ್ತಿದೆ ಇದು ಮಹಾಪಾದ ಕೆಲಸ. ಕಷ್ಟ ಬಂದಿತೆಂದು ಅಳುಕಬಾರದು,ದುಡುಕಿನ ಕ್ರತ್ಯ ನಡೆಸಬಾರದು ಅನ್ಯಾಯದ ಹಣದಿಂದ ಎನನ್ನು ಸಾಧಿಸಲು ಆಗದು. ಉಪಕಾರ ಮಾಡುವ ಗುಣವನ್ನು ರೂಢಿಸಿಕೊಳ್ಳಿ ಭಗವಂತನ ನಾಮಸ್ಮರಣೆಯಲ್ಲಿ ತೊಡಗಿ ಎಂದು ಕರೆ ನಿಡಿದರು.
Leave a Comment