ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ 4ನೇ ದಿನ ಪೂರೈಸಿದ್ದು. ಭಾನುವಾರ 5ನೇ ದಿನಕ್ಕೆ ಕಾಲಿಡಲಿದ್ದು, ಪಟ್ಟಣದ ಕಸಬಾ ಗಲ್ಲಿಯ ಮಾರುತಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದೆ.
ಶನಿವಾರ ನಡೆದ ದುರ್ಗಾದೌಡನಲ್ಲಿ ಕಸಬಾಗಲ್ಲಿ, ಹೊಸುರುಗಲ್ಲಿ, ಚೌಕಿಮಠ ಸುತ್ತಲ ಬಡಾವಣೆಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಠಿಯಾಗಿತ್ತು. ಅಲ್ಲದೇ ಭವ್ಯ ತಳಿರು ತೊರಣಗಳು, ಭಗವಾ ಧ್ವಜಗಳಿಂದ ಹಾಗೂ ರಸ್ತೆಯ ತುಂಬೆಲ್ಲಾ ಬೃಹತ್ ವಿವಿಧ ಬಣ್ಣದ ಚಿತ್ತಾಕರ್ಷಕ ರಂಗೋಲಿಗಳಿಂದ ಅಲಂಕೃತವಾಗಿದ್ದ ಬಡಾವಣೆಗಳಲ್ಲಿ 60ಕ್ಕೂ ಹೆಚ್ಚು ಮಕ್ಕಳು ವಿವಿಧ ಛದ್ಮವೇಷಗಳಲ್ಲಿ ಕಂಗೋಳಿಸಿದರು.
\
Leave a Comment