• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಿದ‌ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ. ೫ನೇ ದಿನ‌ ಪೂರೈಸಿದ‌ ದೌಡ ಪ್ರತಿದಿನ ಹೆಚ್ಚುತ್ತಿದೆ ‌ಶ್ರದ್ದಾಳುಗಳ ಸಂಖ್ಯೆ

October 14, 2018 by Yogaraj SK Leave a Comment

ಹಳಿಯಾಳ : ಧರ್ಮಜಾಗೃತಿ-ರಾಷ್ಟ್ರ ಪ್ರೇಮದ ಜಾಗರಣೆಗಾಗಿ ಕಳೆದ 7 ವರ್ಷಗಳಿಂದ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ-ಧಾರ್ಮಿಕ ನಡಿಗೆ ಕಾರ್ಯಕ್ರಮದಿಂದ ಪ್ರೇರÀಣೆಗೊಂಡ ಕೆಲವು ಪ್ರಮುಖ ಗ್ರಾಮಗಳ ಜನರು, ತಮ್ಮ ಹಳ್ಳಿಗಳಲ್ಲೂ ದುರ್ಗಾದೌಡ ಪ್ರಾರಂಭಿಸಿದ್ದು ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ದೌಡ ನಡೆಸುತ್ತಿದ್ದಾರೆ.

watermarked 14 hly 3

ತಾಲೂಕಿನ ಪ್ರಮುಖ ಗ್ರಾಮಗಳಾದ ಯಡೋಗಾ, ತೇರಗಾಂವ ಹಾಗೂ ಮುರ್ಕವಾಡ ಗ್ರಾಮಗಳಲ್ಲಿ ದುರ್ಗಾದೌಡ ಪ್ರಾರಂಭಿಸಲಾಗಿದ್ದು ಪ್ರತಿದಿನ ಬೆಳಗಿನ ಜಾವ ದೌಡ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಗ್ರಾಮಾಂತರ ಭಾಗದ ಜನರು ಹಳಿಯಾಳ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಭಾನುವಾರಕ್ಕೆ ದೌಡ 5ದಿನ ಪೂರೈಸಿದೆ.

watermarked 14 hly 2

ಮುಂದಿನ ವರ್ಷದಿಂದ ಇನ್ನೂ 5 ಗ್ರಾಮಗಳಲ್ಲಿ ಈ ದುರ್ಗಾದೌಡಗೆ ಚಾಲನೆ ನೀಡಲಾಗುವುದು ಎಂದು ದುರ್ಗಾದೌಡ ಸ್ಥಾಪಕ ಸಂಘಟನೆ ಶಿವಪ್ರತಿಷ್ಠಾನದ ಪ್ರಮುಖರು ಮಾಧ್ಯಮಗಳಿಗೆ ತಿಳಿಸಿದರು. ಇನ್ನೂ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದೌಡಗೆ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದ್ದು ಪ್ರತಿದಿನ 6500ಕ್ಕೂ ಅಧಿಕ ಜನರು ಧಾರ್ಮಿಕ ನಡಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಪ್ರತಿದಿನ 50 ಕ್ಕೂ ಅಧಿಕ ಮಕ್ಕಳು ವಿವಿಧ ಛದ್ಮವೇಷಗಳಲ್ಲಿ ಕಂಗೋಳಿಸಿ ದೌಡನ ಆಕರ್ಷಣೆ ಹೆಚ್ಚಿಸುತ್ತಿದ್ದು ಅವರೆಲ್ಲರಿಗೂ ಶಿವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಅಭಿನಂದನೆ ಕೂಡ ಸಲ್ಲಿಸಲಾಗಿದೆ.

watermarked 14 hly 1

ಮಹಾರಾಷ್ಟ್ರ ರಾಜ್ಯ ಹಾಗೂ ಪಕ್ಕದ ಬೆಳಗಾವಿ, ಖಾನಾಪೂರಗಳನ್ನು ಹೊರತು ಪಡಿಸಿದರೇ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾತ್ರವೇ ಆಚರಿಸಲ್ಪಡುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಈಗಾಗಲೇ ಆಯಾ ಭಾಗದ ಜನರು ದುರ್ಗಾದೌಡನ್ನು ಸ್ವಾಗತಿಸಲು ತಮ್ಮ ಬಡಾವಣೆಗಳಲ್ಲಿ ವಿಶೇಷ ಅಲಂಕಾರ, ಭಗವಾಧ್ವಜಗಳಿಂದ ಕೇಸರಿ ವಾತಾವರಣ ಹಾಗೂ ರಸ್ತೆಗಳ ತುಂಬೆಲ್ಲ ಬಣ್ಣ-ಬಣ್ಣದ ದೊಡ್ಡ ರಂಗವಲ್ಲಿಗಳ ಚಿತ್ತಾರದಿಂದ ಆಕರ್ಷಕ ಕಾಣುವಂತೆ ಶೃಂಗರಿಸುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ವೀರ ವನಿತೆಯರು, ಪುರುಷರ ಛದ್ಮವೇಷ ತೊಡಿಸುವುದು. ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯದಲ್ಲಿ ದೇವತೆಗಳ, ವೀರ ಪುರುಷರು, ವನಿತೆಯರು, ಕ್ರಾಂತಿಕಾರಿಗಳ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸುವ ಮೂಲಕ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ.

watermarked 14 hly 4

ಭಾನುವಾರ ಪಟ್ಟಣದ ಕಸಬಾಗಲ್ಲಿಯ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ದೌಡ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ವೀರಕ್ತಮಠಕ್ಕೆ ತಲುಪಿದ್ದು ಸೋಮವಾರ ದಿ.15ರಂದು ಇಲ್ಲಿಂದ ದೌಡ ಆರಂಭವಾಗಲಿದ್ದು ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನಕ್ಕೆ ತಲುಪಿಲಿದೆ ಹಾಗೂ ದಿ.18ಕ್ಕೆ ದೌಡ ಮುಕ್ತಾಯವಾಗಲಿದೆ.
watermarked IMG 20181014 WA0162 1

watermarked IMG 20181014 WA0159 watermarked IMG 20181014 WA0165 1 watermarked IMG 20181014 WA0160 1 watermarked IMG 20181014 WA0161 watermarked IMG 20181014 WA0163 watermarked IMG 20181014 WA0164

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ೫ನೇ ದಿನ‌ ಪೂರೈಸಿದ‌ ದೌಡ, ಖಾನಾಪೂರ, ಗ್ರಾಮಗಳಾದ ಯಡೋಗಾ, ಛದ್ಮವೇಷ, ತೇರಗಾಂವ ಹಾಗೂ ಮುರ್ಕವಾಡ ಗ್ರಾಮ, ದುರ್ಗಾದೌಡ ಧಾರ್ಮಿಕ ನಡಿಗೆ, ಧರ್ಮಜಾಗೃತಿ-ರಾಷ್ಟ್ರ ಪ್ರೇಮದ ಜಾಗರಣೆ, ಪ್ರತಿದಿನ ಹೆಚ್ಚುತ್ತಿದೆ ‌ಶ್ರದ್ದಾಳುಗಳ ಸಂಖ್ಯೆ, ಬಣ್ಣ-ಬಣ್ಣದ ದೊಡ್ಡ ರಂಗವಲ್ಲಿಗಳ ಚಿತ್ತಾರ, ಬೆಳಗಾವಿ, ಭಗವಾಧ್ವಜಗಳಿಂದ ಕೇಸರಿ ವಾತಾವರಣ, ವಿಜೃಂಭಣೆ, ವಿಶಿಷ್ಠ ಕಾರ್ಯಕ್ರಮ, ವಿಸ್ತರಿಸಿದ‌, ಶ್ರದ್ಧಾ-ಭಕ್ತಿ, ಹಳಿಯಾಳ ತಾಲೂಕಿನ ಗ್ರಾಮ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...