ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಸೋಮವಾರ 6 ದಿನ ಪೂರೈಸಿದ್ದು. ತಾಲೂಕಿನ ಚಿಬ್ಬಲಗೇರಿ, ಕಾಳಗಿನಕೊಪ್ಪ, ಮಲವಡಿ, ಕೆಸರೊಳ್ಳಿ, ಹವಗಿ ಗ್ರಾಮಗಳಲ್ಲೂ ದುರ್ಗಾದೌಡ ಪ್ರಾರಂಭವಾಗಿದ್ದು, ದುರ್ಗಾದೌಡ ಧಾರ್ಮಿಕ ಕಾರ್ಯಕ್ರಮಕ್ಕೆ ಗ್ರಾಮಾಂತರ ಭಾಗದಲ್ಲೂ ಆಸಕ್ತಿ ಕಂಡು ಬಂದಿದೆ.
ಪಟ್ಟಣದಲ್ಲಿ ಸೋಮವಾರ ಸುಭಾಷ ರಸ್ತೆ, ಜವಳಿಗಲ್ಲಿ, ಪಟ್ಟಣದ ಮುಖ್ಯಪೇಟೆ ರಸ್ತೆಯಲ್ಲಿ ಸಾಗಿದ ದೌಡ ಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಮುಕ್ತಾಯಗೊಂಡಿದೆ. ಮಂಗಳವಾರ ಈ ದೇವಸ್ಥಾನದಿಂದ ಆರಂಭವಾಗುವ ದೌಡ ಗೌಳಿಗಲ್ಲಿಯ ದುರ್ಗಾದೇವಿ ದೇವಸ್ಥಾನಕ್ಕೆ ತಲುಪಲಿದೆ. ಸೋಮವಾರ 8 ಸಾವಿರಕ್ಕೂ ಅಧಿಕ ಜನ ದೌಡನಲ್ಲಿ ಭಾಗವಹಿಸಿ ದಾಖಲೆ ಬರೆದರು.
ಪಟ್ಟಣದ ಮುಖ್ಯಪೇಟೆಯಲ್ಲಿ ಸಾವಿರಾರು ಬಲೂನಗಳಿಂದ ಹಾಗೂ ಕೇಸರಿ ಭಗವಾ ಧ್ವಜಗಳಿಂದ ಮಾಡಿದ ಅಲಂಕಾರ ಎಲ್ಲರೂ ಮನಸೋಲುವಂತೆ ಮಾಡಿತು. 20 ಕ್ಕೂ ಹೆಚ್ಚು ಮಕ್ಕಳು ವಿವಿಧ ಛದ್ಮವೇಷಗಳಲ್ಲಿ ಆಕರ್ಷಿಸಿದರು.
Leave a Comment