
ಹಳಿಯಾಳ:
ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ 7 ನೇ ದಿವಸ ಪೇಟೆ ಬಸವೇಶ್ವರ ದೇವಸ್ಥಾನದಿಂದ ಅರ್ಬನ್ ಬ್ಯಾಂಕ್ ವೃತ್ತ, ಗಣಪತಿಗಲ್ಲಿ, ಮೇದಾರಗಲ್ಲಿ, ಬಸ್ನಿಲ್ದಾಣ ರಸ್ತೆ, ಗೌಳಿಗಲ್ಲಿ, ತಾನಾಜಿ ಗಲ್ಲಿ ಹಾಗೂ ಗುತ್ತಿಗೇರಿ ಗಲ್ಲಿಯಲ್ಲಿ ಸಾಗಿ ದುರ್ಗಾದೇವಿ ಮಂದಿರಕ್ಕೆ ತಲುಪಿದೆ.
ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿ ನೂರಕ್ಕೂ ಅಧಿಕ ಮಕ್ಕಳು ವಿವಿಧ ವೇಷಭೂಷಣ, ಛದ್ಮವೇಷಗಳಲ್ಲಿ ಕಂಗೊಳಿಸಿದರು..
ಗುತ್ತಿಗೇರಿ ಗಲ್ಲಿಯಲ್ಲಿ ಹಿಂದೂ ಸಂಸ್ಕೃತಿಯ ಅನಾವರಣ ಆಯಿತು.
ಕಂಸನಿಂದ ಕೃಷ್ಣನನ್ನ ರಕ್ಷಿಸಲು ಸುಧಾಮ ಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ಸಮುದ್ರದಿಂದ ಸಾಗುವ ಹಾಗೂ ಸರ್ಪ ರಕ್ಷಣೆ ನೀಡುವ ಸ್ಥಬ್ದ ಚಿತ್ರ ದುರ್ಗಾದೌಡನಲ್ಲಿ ಹಳಿಯಾಳಿಗರ ತನ್ಮನ ಸೆಳೆದು ಮೆಚ್ಚುಗೆಗೆ ಪಾತ್ರವಾಯಿತು.
ಹಳಿಯಾಳ ದುರ್ಗಾದೌಡನಲ್ಲಿ ಆಕರ್ಷಣೆಯ ಕೆಂದ್ರ ಬಿಂದುವಾಗಿತ್ತು ಹಾಗೂ ಉಳವಿ ಚೆನ್ನಬಸವೇಶ್ವರ ರಥದ ಸ್ಥಬ್ದ ಚಿತ್ರ..
ಮನಸೂರೆಗೊಂಡಿತು. ಮೇದಾರಗಲ್ಲಿಗಲ್ಲಿ ಗಮನ ಸೆಳೆದ ಮೇದಾರಿಕೆಯ ಚಿತ್ರ.. ೭ ದಿನಗಳ ಕಾಲ ನಡೆದ ದುರ್ಗಾದೌಡ ನಲ್ಲಿ ಇದು ಹೊಸ ಪ್ರಯತ್ನವಾಗಿತ್ತು.
ತಾಲೂಕಿನ ಮುರ್ಕವಾಡ, ತೇರಗಾಂವ ಮತ್ತು ಯಡೋಗಾ ಗ್ರಾಮಗಳಲ್ಲಿ ವಿಜೃಂಭಣೆಯಿಂದ ದುರ್ಗಾದೌಡ ಆಚರಿಸಲಾಗುತ್ತಿದೆ.

































Leave a Comment